ಬೆಂಗಳೂರು: ಬ್ಯಾಂಕ್ ಅಧಿಕಾರಿ-ಸಿಬ್ಬಂದಿ ಎಂದುಕರೆಮಾಡಿ, “ನಿಮ್ಮ ಖಾತೆಯಲ್ಲಿರುವ ಹಣ ಲಪಟಾಯಿಸಿದ್ದಾರಾ? ಹಾಗಾದರೆ ಯೋಚನೆ ಬಿಡಿ ಕೂಡಲೇಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ.
48ಗಂಟೆಯಲ್ಲೇ ನಿಮ್ಮ ಹಣವಾಪಸ್ ಬರುತ್ತದೆ’.ನಗರದಲ್ಲಿ ಹೆಚ್ಚಾಗುತ್ತಿರುವ ಸೈಬರ್ ಕ್ರೈಂ ಪ್ರಕರಣಗಳಿಗೆ ಕಡಿವಾಣ ಹಾಕಲು ಹಾಗೂ ಬ್ಯಾಂಕ್ ಖಾತೆಗಳಿಂದ ಕನ್ನ ಹಾಕುವುದನ್ನು ತಡೆದು ಗ್ರಾಹಕರ ಹಣಕ್ಕೆಭದ್ರತೆ ಒದಗಿಸುವ ದೃಷ್ಟಿಯಿಂದ ನಗರ ಪೊಲೀಸ್‌ಆಯುಕ್ತ ಕಮಲ್ ಪಂತ್ ಕೈಗೊಂಡ “ಗೋಲ್ಡನ್‌ಅವರ್’ ಯೋಜನೆಗೆ ಉತ್ತಮ ಫಲಿತಾಂಶ ದೊರೆತಿದೆ.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ತೆರೆದಿರುವ ಸೈಬರ್ ಸಹಾಯವಾಣಿ ಕೇಂದ್ರ ಅಧಿಕಾರಿ-ಸಿಬ್ಬಂದಿಯ ಕಾರ್ಯದಕ್ಷತೆಯಿಂದ ಕಳೆದ ಆರುತಿಂಗಳಲ್ಲಿ ಬರೋಬರಿ 48.24 ಕೋಟಿ ರೂ.ಗೂ ಅಧಿಕಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.ಬ್ಯಾಂಕ್‌ಗಳ ಹೆಸರಿನಲ್ಲಿ ಕರೆ ಮಾಡುವ ಖದೀಮರುಕ್ರೆಡಿಟ್ ಕಾರ್ಡ್ ನವೀಕರಣ, ಸಾಲ ನೀಡುವುದು,ನಿಷ್ಕ್ರಿಯಗೊಳಿಸುವುದು ಸೇರಿ ವಿವಿಧ ವಿಧಗಳಲ್ಲಿ ಓಟಿಪಿಪಡೆದುಕೊಂಡುಕ್ಷಣಾರ್ಧದಲ್ಲಿ ಗ್ರಾಹಕರಖಾತೆಗಳಿಂದಸಾವಿರದಿಂದ ಲಕ್ಷದವರೆಗೆ ಹಣದೋಚುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ತಮ್ಮ ಕಚೇರಿ ಯಲ್ಲಿ ಸೈಬರ್ ಕ್ರೈಂಗೆ ಸಂಬಂಧಿಸಿದಸಹಾಯವಾಣಿ ಕೇಂದ್ರ ತೆರೆದಿದ್ದಾರೆ.
ಈ ಬೆನ್ನಲ್ಲೇ ಕಳೆದವರ್ಷ ಡಿಸೆಂಬರ್ 22 ರಿಂದ ಮೇ 31ರವರೆಗೆ 3,175ಹಣಕಾಸು ವಂಚನೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿದ್ದು ಈ ಪೈಕಿ 1,312 ಬ್ಯಾಂಕ್ ಖಾತೆಗಳನ್ನು ತಾತಾಲ್ಕಿಕ ವಾಗಿ ಜಪ್ತಿ ಮಾಡಿ ವಂಚಕರ ಜೇಬು ಸೇರುತ್ತಿದ್ದಸುಮಾರು 48.24 ಕೋಟಿ ರೂ. ಜಪ್ತಿ ಮಾಡಲಾಗಿದೆ.ಈಮೂಲಕಹಣಕಾಸುವಂಚನೆಗೆಬ್ರೇಕ್‌ಹಾಕಲಾಗಿದೆ.ಮತ್ತೂಂದು ವಿಚಾರವೆಂದರೆ ಆದರೆ ಇದುವರೆಗೂಒಬ್ಬ ಆರೋಪಿಯನ್ನು ಬಂಧಿಸಿಲ್ಲ. ಆದರೂಸಾರ್ವಜನಿಕರಿಗೆ ಹಣ ವಾಪಸ್ ಕೊಡಿಸಲಾಗಲಿಲ್ಲಎಂದು ಮೂಲಗಳು ತಿಳಿಸಿವೆ.ಈ ಮೂಲಕ ಕೊರೊನಾ ಸಂಕಷ್ಟ ಕಾಲದಲ್ಲಿ ನಾನಾಮಾರ್ಗ ಗಳಿಂದ ಜನರನ್ನು ಯಾಮಾರಿಸಿ ಹಣದೋಚುತ್ತಿದ್ದ ಸೈಬರ್ ವಂಚಕರಿಗೆ “ಖಾತೆಗಳ ಜಪ್ತಿಯೋಜನೆ’ ಮುಳುವಾಗಿದೆ.