Advertisement
ಒಂದೊಂದು ಮೂಲೆಯಲ್ಲಿ ಒಂದೊಂದು ನಮೂನೆಯ ಒಡವೆಗಳ ವಿನ್ಯಾಸಗಳ ವಿಭಿನ್ನತೆ ನಮ್ಮ ದೇಶದ ಸಾಂಸ್ಕೃತಿಕವಾದ ವೈವಿಧ್ಯದ ಪ್ರತೀಕವೂ ಹೌದು. ಕೆಲವು ಮನೆತನಗಳಂತು ಪಾರಂಪರಿಕವಾದ ಒಡವೆಗಳು ತಲೆಮಾರಿನಿಂದ ತಲೆಮಾರಿಗೆ ಹಸ್ತಾತಂತರಗೊಂಡು ಬಂದಿರುತ್ತದೆ. ಹಿರಿಯರಿಂದ ಬಂದ ಒಡವೆಗಳನ್ನು ಜೀವದಷ್ಟೇ ಬೆಲೆಕೊಟ್ಟು ಕಾಪಾಡುವ ಮನಸ್ಸು ಕೆಲವು ಕಿರಿಯರದ್ದು. ಇನ್ನೊಂದೆಡೆ ಹೆಣ್ಣುಮಕ್ಕಳು ದುಡಿದದ್ದು, ಕೂಡಿಟ್ಟದ್ದು, ಚೀಟಿ ಹಾಕಿದ್ದು , ಕೈ ಸಾಲ- ಹೀಗೆ ಎಲ್ಲವನ್ನು ಕಲೆಹಾಕಿ ಬಂಗಾರದ ಆಭರಣವನ್ನು ಮಾಡಿಸುತ್ತಾರೆ. ಅದೇನೆ ಇರ್ಲಿ, ಚಿನ್ನದ ಮೌಲ್ಯ ಗಗನ ಮುಟ್ಟುವಂತಹ ಅದೆಷ್ಟೇ ಎತ್ತರದ್ದಾಗಿದ್ದರೂ ಸ್ವಲ್ಪ ಪ್ರಮಾಣದ್ದಾದರೂ ಚಿನ್ನ ತನ್ನ ಪಾಲಿನದಾಗಿಸಿಕೊಳ್ಳಬೇಕೆಂಬ ಮನುಷ್ಯನ ಹಂಬಲ ಹೆಚ್ಚಿನದ್ದು ಮತ್ತು ಅದನ್ನು ಜೋಪಾನ ಮಾಡುವ ಕಾಳಜಿ ಅದಕ್ಕಿಂತ ಹೆಚ್ಚಿನದ್ದು. ನಾವು ಇಷ್ಟು ಇಷ್ಟ ಪಟ್ಟು ಕೊಳ್ಳುವ ಚಿನ್ನಾಭರಣ ಕಳೆದು ಹೋಗಬಾರ್ಧು ಅಂತ ಮಾಡುವ ಜೋಪಾನದ ಹಾಗೆ ಕರಗಿಯೂ ಹೋಗ್ಬಾರ್ಧು ಅನ್ನುವ ಜಾಗ್ರತೆಯೂ ಮುಖ್ಯ ಅಲ್ವಾ?
Related Articles
Advertisement
ಆ ದ್ರಾವಣ ಪೊಟ್ಯಾಶಿಯಂ ಸಯನೈಡ್. ಈ ಪೊಟ್ಯಾಶಿಯಂ ಅದೇ ಬಂಗಾರದೂರಿನ 19ನೇ ಮನೆಯ ನಿವಾಸಿ. ಇನ್ನು ಈ ಊರ ಹೊರಗಿನ ಸಯನೈಡ್ ಬಗ್ಗೆ ಕೇಳಿದ್ದೀರಲ್ವಾ? ಅದೊಂದು ಸಂಯುಕ್ತ ರಾಸಾಯನಿಕ. ಇವೆರಡು ರಾಸಾಯನಿಕ ಬಂಧದೊಂದಿಗೆ ಸೇರಿ ಪೊಟ್ಯಾಶಿಯಂ ಸಯನೈಡ್ ಉಂಟಾಗುತ್ತದೆ. ಈ ದ್ರಾವಣದಲ್ಲಿ ಚಿನ್ನವನ್ನು ಪಾಲಿಶ್ ಮಾಡಿದ್ರೆ ಅರ್ಧಾಂಶ ಚಿನ್ನ ದ್ರಾವಣದ ಪಾಲಾಗುತ್ತದೆ ಅನ್ನೋದು ವಿಜ್ಞಾನ ಹೇಳುವ ಸತ್ಯಾಂಶ.
ಇದ್ರಿಂದ ಈವರೆಗೆ ಲಾಭ ಹೇಗೆ ಅಂತ ಕೇಳ್ತಿದ್ದೀರಾ? ಆ ದ್ರಾವಣದಲ್ಲಿರುವ ಚಿನ್ನವನ್ನ ಬೇರ್ಪಡಿಸ್ತಾರೆ. ಹನಿ ಹನಿ ಸೇರಿ ಹಳ್ಳ ಅಂದರೆ ಆಯ್ತಲ್ಲಾ ಅವರ ಜೀವನೋಪಾಯ. ಹೀಗೆ ಚಿನ್ನವನ್ನು ಬೇರ್ಪಡಿಸಲು ಮತ್ತೆ ಅದೇ ಊರಿನ 30ನೇ ಮನೆಯ ನಿವಾಸಿ ಸತುವನ್ನು ಕರೆಯುತ್ತಾರೆ ! ಇದು ತಾನು ಪೊಟ್ಯಾಶಿಯಂ ಸಯನೈಡ್‌ನೊಂದಿಗೆ ಬಂಧನಕ್ಕೊಳಪಟ್ಟು , ಚಿನ್ನವನ್ನು ವಿಮುಕ್ತಿಗೊಳಿಸುತ್ತದೆ. ಆನಂತರ ಸೋಸುವಿಕೆ ವಿಧಾನ ಬಳಸಿ ಚಿನ್ನವನ್ನ ಪಡೀತಾರೆ. ಒಂದಿಷ್ಟು ವಿಜ್ಞಾನ ತಿಳಿದವರು ಇಂತಹ ವಂಚಿಸುವ ಕೆಲಸ ಮಾಡ್ತಾರೆ ಅನ್ನೋದು ವಿಷಾದದ ಸಂಗತಿ.
ನಿಜ, ಪಾಲಿಶ್‌ಗೆ ಕೊಟ್ಟ ಮೊದಲೊಮ್ಮೆ, ಪಾಲಿಶ್ ಮುಗಿಸಿದ ನಂತರ ಮರಳಿಸುವ ಮುನ್ನ ಒಮ್ಮೆ ಚಿನ್ನಾಭರಣದ ತೂಕವನ್ನು ನಿಮ್ಮ ಕಣ್ಣೆದುರೆ ಪರೀಕ್ಷಿಸಿ ತೋರಿಸಿ, ಹೊಳಪನ್ನು ಹೆಚ್ಚಿಸಿ ಕೊಡುವ ಹಾಗೆ ಮಾಡಿದ ಕೆಲಸದಷ್ಟೇ ಬಿಲ್ ಹಾಕಿ ಕೊಡುವ ಆಭರಣ ಮಳಿಗೆಗಳೇ ಸುರಕ್ಷಿತ ಅನ್ನುವ ತಿಳುವಳಿಕೆ ಕೊಟ್ಟ ನಮ್ಮ ಕೆಮಿಸ್ಟ್ರಿ ಸರ್ ಥ್ಯಾಂಕ್ಯೂ ಸೊ ಮಚ್…
ಪಲ್ಲವಿ ಶೇಟ್ತೃತೀಯ ಬಿ. ಎಸ್ಸಿ.
ಜಿ. ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಡುಪಿ