Advertisement
ಅವರು ಬುಧವಾರ ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಸಂಬಂಧಿಸಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಹಾತ್ಮಾ ಗಾಂ ಧಿ ಅವರ 150ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ 150 ಕಿ.ಮೀ. ಪಾದಯಾತ್ರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ ನಡೆಯುವ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.
Related Articles
ಬಂದರು, ಮೀನುಗಾರಿಕೆ ಮತ್ತು ಮುಜರಾಯಿ ಖಾತೆಯ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ನೆರೆ ಪರಿಹಾರಕ್ಕೆ ಕೇಂದ್ರ ಸರಕಾರ ಗರಿಷ್ಠ ಮೊತ್ತ ಬಿಡುಗಡೆ ಮಾಡುವ ವಿಶ್ವಾಸವಿದೆ. ಸಂತ್ರಸ್ತರನ್ನು ಗುರುತಿಸುವ ಬಗ್ಗೆ ಅಧಿಕಾರಿಗಳನ್ನು ಮಾತ್ರ ನಂಬಿದರೆ ಆಗದು, ಜನಸಾಮಾನ್ಯರ ಗೊಂದಲ ನಿವಾರಿಸಲು ಪಕ್ಷ ಕೂಡ ಮುತುವರ್ಜಿಯಿಂದ ಕೆಲಸ ಮಾಡ ಬೇಕು ಎಂದರು. ವಿಪಕ್ಷದವರ ಆರೋಪಗಳ ಬಗ್ಗೆ ಚಿಂತೆ ಮಾಡುವ ಆವಶ್ಯಕತೆ ಇಲ್ಲ ಎಂದರು.
Advertisement
ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಸ್ವಾಗತಿಸಿ ಪ್ರಸ್ತಾವನೆಗೈದರು. ಪಕ್ಷದ ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಸಹ ಪ್ರಭಾರಿ ಪ್ರತಾಪ ಸಿಂಹ ನಾಯಕ್ ವೇದಿಕೆಯಲ್ಲಿದ್ದರು.
ರಾಜಕೀಯದಲ್ಲಿ ಮಸಾಲೆ ಇದ್ದರೆ ಸುದ್ದಿ ರಾಜಕೀಯದಲ್ಲಿ ಮಸಾಲೆ ಬೇಕು. ಆಗ ಅದು ಸುದ್ದಿ ಆಗುತ್ತದೆ. ಅದಕ್ಕಾಗಿ ಕೆಲವು ಮಾಧ್ಯಮಗಳು ಬಿಜೆಪಿ ಬಗ್ಗೆ ಋಣಾತ್ಮಕ ಸುದ್ದಿಗಳನ್ನು ಬಿತ್ತರಿಸುತ್ತಿವೆ. ನಮ್ಮಲ್ಲಿ ಭಿನ್ನಾಪ್ರಾಯ ಇಲ್ಲ. ಕೋರ್ ಕಮಿಟಿ ಸಭೆ ಮುಖ್ಯಮಂತ್ರಿ ನೇತೃತ್ವದಲ್ಲಿಯೇ ನಡೆದಿದೆ. ಆರ್. ಅಶೋಕ್ ಅವರು ಸಭೆಗೆ ಹಾಜರಾಗದಿರಲು ಅಸೌಖ್ಯವೇ ಕಾರಣ ಎಂದು ನಳಿನ್ ಸ್ಪಷ್ಟಪಡಿಸಿದ್ದಾರೆ.