Advertisement

ಮಂಗಳೂರು: 1.46 ಕೋ.ರೂ. ಮೌಲ್ಯದ ಚಿನ್ನ ಅಕ್ರಮ ಸಾಗಾಟ ಪತ್ತೆ

07:47 AM Nov 02, 2022 | Team Udayavani |

ಮಂಗಳೂರು: ದುಬಾೖಯಿಂದ ಅ. 22ರಿಂದ ಅ. 31ರ ಅವಧಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 24 ಕ್ಯಾರೆಟ್‌ ಪರಿಶುದ್ಧತೆಯ 1,46,87,410 ರೂ. ಮೌಲ್ಯದ 2,870 ಗ್ರಾಂ ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ.

Advertisement

ಚಿನ್ನವನ್ನು ಆರು ಮಂದಿ ಪ್ರಯಾಣಿಕರು ಪೇಸ್ಟ್‌, ಪೌಡರ್‌ ರೂಪಕ್ಕೆ ಪರಿವರ್ತಿಸಿ ಬನಿಯನ್‌, ಜೀನ್ಸ್‌ ಪ್ಯಾಂಟ್‌, ಶೂಗಳು ಮತ್ತು ಗುದದ್ವಾರದಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದರು ಎಂದು ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಅ. 8ರಿಂದ 21ರ ನಡುವಿನ ಅವಧಿಯಲ್ಲಿ ವಿವಿಧ ಪ್ರಕರಣಗಳಲ್ಲಿ ಒಟ್ಟು 5 ಮಂದಿ ಪ್ರಯಾಣಿಕರು ದುಬಾೖಯಿಂದ ಸಾಗಾಟ ಮಾಡುತ್ತಿದ್ದ 1.59 ಕೋ.ರೂ. ಮೌಲ್ಯದ ಹಾಗೂ ಅ. 6ರಂದು 38.53 ಲ.ರೂ. ಮೌಲ್ಯದ ಅಕ್ರಮ ಚಿನ್ನವನ್ನು ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next