Advertisement

ಮಂಗಳೂರು : ಅಕ್ರಮವಾಗಿ ಸಾಗಿಸುತ್ತಿದ್ದ 196 ಗ್ರಾಂ ಚಿನ್ನ ವಶ

12:12 PM Apr 24, 2021 | Team Udayavani |

ಮಂಗಳೂರು : ವ್ಯಕ್ತಿಯು ಅಕ್ರಮವಾಗಿ ಸಾಗಿಸುತ್ತಿದ್ದ 9.6 ಲಕ್ಷ ರೂ. ಮೌಲ್ಯದ 196 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳ ತಂಡ ಶುಕ್ರವಾರ ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ.

Advertisement

ಬಂಧಿತನನ್ನು ಕಾಸರಗೋಡು ಮೂಲದ ಅಬ್ದುಲ್ ರಹೀಮ್ ಎರಿಯಲ್ ಜಾಫರ್ ಎಂದು ಗುರುತಿಸಲಾಗಿದೆ. ಈ ವ್ಯಕ್ತಿಯು ದುಬೈನಿಂದ ಏರ್ ಇಂಡಿಯಾ ಫ್ಲೈಟ್ ಐಎಕ್ಸ್ 384ನಲ್ಲಿ ಆಗಮಿಸಿದ್ದಾನೆ.

ಪ್ರವೀಣ್ ಕಂಡಿ ನೇತೃತ್ವದ ಕಸ್ಟಮ್ಸ್ ಆಧಿಕಾರಿಗಳ ತಂಡ ಕಾರ್ಯಾಚರಣೆ ಮಾಡಿ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ವಶಕ್ಕೆ ಪಡೆದಿದೆ. ಆರೋಪಿ ಜಾಫರ್ ಚಿನ್ನವನ್ನು ಕಿಚನ್‌ವೇರ್, ಗ್ಯಾಸ್ ಲೈಟರ್‌ , ಎಂಪಿ3 ಪ್ಲೇಯರ್ ಮತ್ತು ಇಯರ್‌ ಫೋನ್‌ ಗಳಿಗೆ ಲೇಪಿಸಿ  ಅಕ್ರಮವಾಗಿ  ಸಾಗಿಸುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳ ತಂಡ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next