Advertisement

2021ರಲ್ಲಿ ಚಿನ್ನ ಮತ್ತಷ್ಟು ದುಬಾರಿ; 10 ಗ್ರಾಂ. ಗೆ 63 ಸಾವಿರ

12:49 AM Dec 29, 2020 | mahesh |

ಭವಿಷ್ಯದ ಸುರಕ್ಷಿತ ಹೂಡಿಕೆ ಎಂದು ಕರೆಯಲ್ಪಡುವ ಚಿನ್ನವು 2021ರಲ್ಲಿ ಮತ್ತಷ್ಟು ದುಬಾರಿಯಾಗಲಿದೆ. ಆರ್ಥಿಕ ಚೇತರಿಕೆಯ ಕಾರಣ ಕೈಗೊಳ್ಳಲಾಗುವ ಹೊಸ ಕ್ರಮಗಳು ಮತ್ತು ಅಮೆರಿಕ ಡಾಲರ್‌ ದುರ್ಬಲಗೊಳ್ಳುತ್ತಿರುವುದರಿಂದ ಮುಂದಿನ ವರ್ಷ ಚಿನ್ನದ ಬೆಲೆ 10 ಗ್ರಾಂ.ಗೆ 63 ಸಾವಿರ ರೂ.ಗೆ ತಲುಪಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

Advertisement

ಜಾಗತಿಕ ಹಣಕಾಸು ನೀತಿಗಳಿಂದಾಗಿ ಚಿನ್ನದ ದರಗಳಲ್ಲಿ ಏರಿಳಿತಗಳು ಆಗುತ್ತಿವೆ. ಕೋವಿಡ್‌ ಸಾಂಕ್ರಾಮಿಕದಿಂದ ಉಂಟಾದ ಅನಿಶ್ಚಿತತೆಯಿಂದಾಗಿ 2020ರಲ್ಲಿ ಸುರಕ್ಷಿತ ಹೂಡಿಕೆಯ ರೂಪದಲ್ಲಿ ಚಿನ್ನಕ್ಕೆ ಭಾರೀ ಬೇಡಿಕೆ ಇತ್ತು. ಅದೇ ಕಾರಣಕ್ಕೆ ಹಳದಿ ಲೋಹವು ಈ ವರ್ಷದ ಆಗಸ್ಟ್‌ನಲ್ಲಿ 10 ಗ್ರಾಂ.ಗೆ 56,191 ರೂ.ಗೆ ತಲುಪಿತ್ತು.

ಕೈಗಾರಿಕಾ ಅಭಿವೃದ್ಧಿಯ ಅನಿಶ್ಚಿತತೆ ಮುಂದುವರಿದಿರುವುದರಿಂದ 2021ರಲ್ಲಿ ಚಿನ್ನಕ್ಕೆ ಬೇಡಿಕೆ ಇರಲಿದೆ ಎಂದು ಕಾಮ್‌ಟ್ರೆಂಡ್ಸ್‌ ರಿಸ್ಕ್ ಮ್ಯಾನೇಜ್ಮೆಂಟ್‌ ಸರ್ವೀಸಸ್‌ನ ಸಿಇಒ ಜ್ಞಾನಶೇಖರ್‌ ತ್ಯಾಗರಾಜನ್‌ ಹೇಳಿದ್ದಾರೆ. ತ್ಯಾಗರಾಜನ್‌ ಪ್ರಕಾರ ಅಮೆರಿಕನ್‌ ಡಾಲರ್‌ ಪತನವಾಗುತ್ತದೆ. ಹಣದುಬ್ಬರ ಹೆಚ್ಚಳವಾಗಿ ಹೂಡಿಕೆದಾರರು ಚಿನ್ನದ ಖರೀದಿಗೆ ಆಕರ್ಷಿತರಾಗುತ್ತಾರೆ.

ಚಿನ್ನದ ಮೇಲೆ ಅಮೆರಿಕ ಪ್ರಭಾವ!
ಅಮೆರಿಕದ ಸೆನೆಟ್‌ನಲ್ಲಿ ಚುನಾಯಿತ ಅಧ್ಯಕ್ಷ ಜೋ ಬಿಡೆನ್‌ ನೇತೃತ್ವದ ಪಕ್ಷವು ಸಂಪೂರ್ಣ ಬಹುಮತ ಹೊಂದಿಲ್ಲ. ಹೀಗಾಗಿ ನೂತನ ಸರಕಾರ ಜಾರಿಗೆ ತರುವ ಕೆಲವೊಂದು ಸುಧಾರಣೆ ಪ್ರಸ್ತಾವಗಳಿಗೆ ಸೆನೆಟ್‌ನಲ್ಲಿ ಸೋಲಾಗುವ ಸಾಧ್ಯತೆ ಇದೆ. ಹೀಗಾಗಿ ಸುಧಾರಣೆಗಳನ್ನು ತರಲು ಕಷ್ಟವಾಗಿ ಲೋಹಗಳ ಬೆಲೆ ಏರಿಕೆಗೆ ಕಾರಣವಾಗಬಹುದು ಎನ್ನಲಾಗಿದೆ.

ಭಾರತ-ಚೀನ
2021ರಲ್ಲಿ ಭಾರತ ಮತ್ತು ಚೀನದಲ್ಲಿ ಭೌತಿಕ ಚಿನ್ನದ ಬೇಡಿಕೆ ಮುಂದುವರಿಯಲಿದೆ. ಎರಡು ವರ್ಷಗಳಲ್ಲಿ ಈ ಎರಡು ದೇಶಗಳಿಂದ ಚಿನ್ನದ ಬೇಡಿಕೆ ಕಡಿಮೆಯಾಗಿದ್ದವು. ಈ ಕಾರಣದಿಂದಾಗಿ ಚಿನ್ನದ ಬೆಲೆ ಹತ್ತು ಗ್ರಾಂ.ಗೆ ಕನಿಷ್ಠ 60 ಸಾವಿರ ರೂ. ತಲುಪಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next