ಕುಣಿಗಲ್: ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ಸಂಬಂಧಿಕರೊಬ್ಬರ ಮನೆಯ ಬಾಗಿಲು ಮುರಿದು ನಗದು, ವಿದೇಶಿ ಕರೆನ್ಸಿ ಸೇರಿದಂತೆ ಲಕ್ಷಾಂತರೂ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಬಿಳಿದೇವಾಲಯ ಗ್ರಾಮದಲ್ಲಿ ನಡೆದಿದೆ.
ಕಸಬಾ ಹೋಬಳಿ ಬಿಳಿದೇವಾಲಯ ಗ್ರಾಮದ ನಿವಾಸಿ ಪದ್ಮಾ ಸಿದ್ದೇಶ ಹಣ, ಒಡವೆ ಕಳೆದುಕೊಂಡ ಮಹಿಳೆಯಾಗಿದ್ದಾರೆ.
ಪದ್ಮಾ ಸಿದ್ದೇಶ ಅವರ ಪತಿ ಕೊಬ್ಬರಿ ವ್ಯಾಪಾರಿಯಾಗಿದ್ದಾರೆ. ಇಬ್ಬರು ಮಕ್ಕಳಿದ್ದಾರೆ. ಕಳೆದ ಸುಮಾರು ಐದು ವರ್ಷದಿಂದ ಬಿಳಿದೇವಾಲಯ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರ ಪತಿ ಕೆಲಸದ ನಿಮಿತ್ತ ಬೇರೆ ಊರಿಗೆ ತೆರಳಿದ್ದರು ಪದ್ಮಾ ಅವರು ತನ್ನ ಮಕ್ಕಳೊಂದಿಗೆ ಮೇ 23 ರಂದು ಶಿವಮೊಗ್ಗಕ್ಕೆ ಹೋಗಿದ್ದರು. ಶುಕ್ರವಾರ (ಜೂ.17)ದಂದು ಮನೆಗೆ ಬಂದ ವೇಳೆ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಬಾಡಿಗೆಗೆ ಕಾರು ಪಡೆದು ಬೀಚ್‌ನಲ್ಲಿ ಹುಚ್ಚಾಟ: ಪೇಚಿಗೆ ಸಿಲುಕಿದ ಚಾಲಕ
ಮನೆಯ ಬಾಗಿಲು ಮುರಿದಿದ್ದನ್ನು ನೋಡಿ ಪದ್ಮಾ ಮನೆ ಒಳಗೆ ಹೋಗಿ ನೋಡಿದ್ದಾಗ ರೂಂ ನಲ್ಲಿ ಇದ್ದ ಕಪಾಟು ತೆರೆದಿತ್ತು. ಅದರಲ್ಲಿ ಇದ್ದ ಬಟ್ಟೆಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದವು. ಕಪಾಟಿನಲ್ಲಿ ಇಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಡೈಮಂಡ್ ಹಾಗೂ ಚಿನ್ನಾಭರಣ, ಒಂದು ಸಾವಿರ ಅಮೇರಿಕ ಡಾಲರ್, 5800 ಹಾಕಾಂಗ್ ಡಾಲರ್, ದುಬೈ ಜೀರಂ 3200 ಹಾಗೂ ಮೂರು ಲಕ್ಷ ರೂ. ನಗದು ಕಳವುಗೈದಿದ್ದಾರೆ.
ಪ್ರಕರಣ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.