Advertisement

ಸಾಗರ: ಕೂಲಿ ಕಾರ್ಮಿಕನ ಮನೆ ಬಂಗಾರ ಕಳ್ಳತನ

05:36 PM Jul 31, 2022 | Suhan S |

ಸಾಗರ: ತಾಲೂಕಿನ ಬೊಮ್ಮತ್ತಿಯಲ್ಲಿನ ಕೂಲಿ ಕಾರ್ಮಿಕರ ಮನೆಯೊಂದರಲ್ಲಿ 70 ಸಾವಿರ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳ ಕಳ್ಳತನ ಮಾಡಲಾಗಿದ್ದು, ಈ ಸಂಬಂಧ ಶನಿವಾರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಬೊಮ್ಮತ್ತಿಯ ರಾಮಪ್ಪ ಅವರ ಮನೆಯಲ್ಲಿ ಕಳ್ಳತನವಾಗಿದ್ದು, ಬೀರುವಿನಲ್ಲಿ ಪರ್ಸ್ ಒಳಗೆ ಇಡಲಾಗಿದ್ದ 12 ಗ್ರಾಂ ತೂಕದ ೪ ಜೊತೆ ಬಂಗಾರದ ಓಲೆ, 10 ಗ್ರಾಂ ತೂಕದ 2 ಜೊತೆ ಬೆಳ್ಳಿಯ ಗೆಜ್ಜೆಗಳನ್ನು ಕಳ್ಳತನ ಮಾಡಲಾಗಿದೆ. ರಾಮಪ್ಪ, ಪತ್ನಿ ಮತ್ತು ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರ ಕೂಲಿ ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಈ ಕಳ್ಳತನ ನಡೆದಿದೆ.

ಮನೆಯಲ್ಲಿ ಗುಪ್ತವಾಗಿ ಇಡುತ್ತಿದ್ದ ಬೀಗದ ಕೀಯನ್ನೇ ಬಳಸಿ ಕಳ್ಳರು ಮನೆಯೊಳಗೆ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಪರಿಚಿತರಿರುವವರೇ ಕಳ್ಳತನದಲ್ಲಿ ಪಾಲ್ಗೊಂಡಿರಬಹುದು ಎಂದು ಶಂಕಿಸಲಾಗಿದೆ.  ರಾಮಪ್ಪ ಅವರ ಪುತ್ರಿ ಶೋಭಾ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next