Advertisement

ಕೆಲಸಕ್ಕೆ ಸೇರಿದ ವಾರದಲ್ಲೇ 58 ಲಕ್ಷ ರೂ. ಚಿನ್ನ ಕದ್ದಳು!

03:52 PM Jan 08, 2023 | Team Udayavani |

ಬೆಂಗಳೂರು: ಕೆಲಸ ಮಾಡುತ್ತಿದ್ದ ಜ್ಯುವೆಲ್ಲರಿ ಶಾಪ್‌ನಲ್ಲಿ ನಕಲಿ ಚಿನ್ನಾಭರಣಗಳನ್ನು ಇಟ್ಟು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದ ಮಹಿಳೆಯನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಬೀದರ್‌ನ ವಾಣಿ ವಾಡೇಕರ್‌ (22)ಬಂಧಿತೆ. ಆರೋಪಿಯಿಂದ 58.60 ಲಕ್ಷ ರೂ.ಮೌಲ್ಯದ 36.455 ಗ್ರಾಂ ಚಿನ್ನದ ಸರಗಳು, 8.8 ಗ್ರಾಂ ವಜ್ರದ ಇಯರಿಂಗಳು, 21.34 ಗ್ರಾಂ ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ.

ಮಳಿಗೆಯ ಮ್ಯಾನೇಜರ್‌ ಮೊಹಮ್ಮದ್‌ ಅಫ್ಜಲ್‌ ಎಂಬುವರು ನೀಡಿದ ದೂರಿನ ನ್ವಯ ಪ್ರಕರಣ ದಾಖಲಿಸಿಕೊಂಡ ಈಕೆ ಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಯಲಹಂಕದ ಆರ್‌.ಎಂ.ಜೆಡ್‌ ಗ್ಯಾಲೆರಿಯಾ ಮಾಲ್‌ನಲ್ಲಿರುವ ಜ್ಯುವೆಲ್ಲರಿ ಶಾಪ್‌ನಲ್ಲಿ ಮಾರಾಟ ಪ್ರತಿನಿಧಿಯಾಗಿರುವ ವಾಣಿ ವಾಡೇಕರ್‌, ಕಳೆದ ವರ್ಷ ಡಿ.10ರಂದು ಕೆಲಸಕ್ಕೆ ಸೇರಿಕೊಂಡಿದ್ದರು. ಕೆಲಸಕ್ಕೆ ಸೇರಿದ ಒಂದೇ ವಾರದಲ್ಲಿ ಶಾಪ್‌ನಲ್ಲಿದ್ದ ಅಸಲಿ ಚಿನ್ನಾಭರಣಗಳನ್ನು ಹಂತ-ಹಂತವಾಗಿ ಕಳವು ಮಾಡಿ, ಬಳಿಕ ಅದೇ ಮಾದರಿಯ ನಕಲಿ ಚಿನ್ನಾಭರಣಗಳನ್ನು ಇಟ್ಟಿದ್ದಾಳೆ. ಕೆಲ ದಿನಗಳ ಹಿಂದೆ ಸ್ಟಾಕ್‌ ಪರಿಶೀಲಿಸಿದಾಗ ಚಿನ್ನಾಭರಣದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಜತೆಗೆ ನಕಲಿ ಚಿನ್ನಾಭರಣ ಕಂಡು ಬಂದಿದೆ. ಅದರಿಂದ ಅನುಮಾನಗೊಂಡು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ವಾಣಿಯ ಕೈಚಳಕ ಬಯಲಾಗಿದೆ ಎಂದು ಪೊಲೀಸರು ಹೇಳಿದರು. ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next