Advertisement

ಚಿನ್ನ ಕದಿಯುತ್ತಿದ್ದ ಟೆಕ್ಕಿ ಬಂಧನ

12:33 PM Apr 03, 2018 | Team Udayavani |

ಬೆಂಗಳೂರು: ಜ್ಯುವೆಲ್ಲರಿ ಶಾಪ್‌ಗ್ಳಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ಸಾಫ್ಟ್ವೇರ್‌ ಎಂಜಿನಿಯರ್‌ ಒಬ್ಬನನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಇಂಕಾ ಇಂಟರ್‌ನ್ಯಾಷನಲ್‌ ಎಂಬ ಹೋಟೆಲ್‌ ಮಾಲೀಕರ ಒಬ್ಬನೇ ಪುತ್ರ, ಪ್ರಸ್ತುತ ಯಲಹಂಕದಲ್ಲಿ ವಾಸವಿರುವ ಪ್ರಭು ಕನಕರತ್ನಂ (34) ಬಂಧಿತ. ಈತನಿಂದ 2.5 ಲಕ್ಷ ರೂ. ಮೌಲ್ಯದ 85 ಗ್ರಾಂನ 2 ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಪ್ರಭು ಕನಕರತ್ನಂ 2002ರಲ್ಲಿ ಬೆಂಗಳೂರಿಗೆ ಬಂದಿದ್ದು, ಎಂ.ಎಂಸ್‌.ರಾಮಯ್ಯ ಕಾಲೇಜಿನಲ್ಲಿ ಬಿಇ ಕಂಪ್ಯೂಟರ್‌ ಸೈನ್ಸ್‌ ವ್ಯಾಸಂಗ ಮಾಡಿದ್ದಾನೆ. 2011ರಲ್ಲಿ ಬ್ರಿಟನ್‌ನ ಡರ್ಬಿ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದ ಆರೋಪಿ, ತಮಿಳುನಾಡಿಗೆ ವಾಪಸಾಗಿ ಹೋಟೆಲ್‌ ವ್ಯವಹಾರ ನೋಡಿಕೊಳ್ಳುತ್ತಿದ್ದ. ಈ ನಡುವೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹೋಟೆಲ್‌ ಮಾರಾಟ ಮಾಡಿ ತಾಯಿಯೊಂದಿಗೆ ಬೆಂಗಳೂರಿಗೆ ಬಂದು ನೆಲೆಸಿದ್ದ. ಇಲ್ಲಿನ ಇಂದುಜಾ ಗ್ಲೋಬಲ್‌ ಸಲ್ಯೂಷನ್‌ ಎಂಬ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. 

ಈ ಮಧ್ಯೆ ಅನಾರೋಗ್ಯ ಸಮಸ್ಯೆಯಿಂದ ಕೆಲಸ ಬಿಟ್ಟಿದ್ದ ಪ್ರಭು ಕನಕರತ್ನಂ ಸ್ವಂತ ವ್ಯವಹಾರ ಆರಂಭಿಸಿದ್ದ. ನಿರೀಕ್ಷೆಯಂತೆ ಲಾಭ ಬಾರದ್ದರಿಂದ ಜೀವನ ನಿರ್ವಹಣೆ ಕಷ್ಟವಾಗಿ, ಕಳ್ಳತನಕ್ಕೆ ಕೈ ಹಾಕಿದ್ದ. 2018ರಲ್ಲಿ ಮಲ್ಲೇಶ್ವರದ ಜೋಯ್‌ಅಲುಕಾಸ್‌ ಅಂಗಡಿಯಿಂದ 24 ಗ್ರಾಂ. ಚಿನ್ನದ ಸÃ ಕಳವು ಮಾಡಿದ್ದ ಆರೋಪಿ, ಜಯನಗರ 4ನೇ ಬ್ಲಾಕ್‌ನ ವಿಜಿಜೆ ಜ್ಯೂವೆಲ್ಲರಿ ಮಳಿಗೆಯಲ್ಲಿ  60 ಗ್ರಾಂ ಚಿನ್ನದ ಸರ ಕಳವು ಮಾಡಿ ಅವುಗಳನ್ನು ತಮಿಳುನಾಡಿನಲ್ಲಿ ಗಿರವಿ ಇಟ್ಟು, ಬಂದ ಹಣವನ್ನು ಸಂಸಾರ ನಿರ್ವಹಣೆ ಮತ್ತು ಮಾವನ ಮಗಳ ಕಾಲೇಜು ಶುಲ್ಕ ಕಟ್ಟಲು ಬಳಸಿಕೊಂಡಿದ್ದ ಎಂದು ಪೊಲೀಸ್‌ ಅಧಿಕಾರಿ ವಿವರಿಸಿದ್ದಾರೆ.

ಮಾಹಿತಿ ನೀಡಿದ ಸೆಕ್ಯೂರಿಟಿ: ಗ್ರಾಹಕನ ಸೋಗಿನಲ್ಲಿ ಚಿನ್ನಾಭರಣ ಮಳಿಗೆಗೆ ತೆರಳುತ್ತಿದ್ದ ಪ್ರಭು, ಚಿನ್ನಾಭರಣ ಖರೀದಿ ನೆಪದಲ್ಲಿ ಹಲವು ಆಭರಣಗಳನ್ನು ತೆಗೆಸಿ, ಸಿಬ್ಬಂದಿ ಕಣ್ತಪ್ಪಿಸಿ 2.5 ಲಕ್ಷ ಮೌಲ್ಯದ 60 ಗ್ರಾಂ. ತೂಕದ ಚಿನ್ನದ ಸರ ಕಳವು ಮಾಡಿ ಪರಾರಿಯಾಗಿದ್ದ. ಈ ಕೃತ್ಯ ಮಳಿಗೆಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಘಟನೆ ಸಂಬಂಧ ಚಿನ್ನಾಭರಣ ಮಳಿಗೆ ಮ್ಯಾನೇಜರ್‌ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಎಲ್ಲ ಜ್ಯುವೆಲ್ಲರಿ ಮಳಿಗೆಗಳಿಗೆ ಆರೋಪಿಯ ಫೋಟೋ ಕೊಟ್ಟು ಮತ್ತೂಮ್ಮೆ ಬಂದರೆ ಮಾಹಿತಿ ನೀಡುವಂತೆ ಸೂಚಿಸಿದ್ದರು. ಅಂದರಂತೆ ಆರೋಪಿ ಜಯನಗರದ ಜ್ಯುವೆಲ್ಲರಿ ಮಳಿಗೆಗೆ ಹೋದಾಗ ಭದ್ರತಾ ಸಿಬ್ಬಂದಿಯೊಬ್ಬರು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next