Advertisement

ಚಿನ್ನ 150 ರೂ. ಕುಸಿತ; 10 ಗ್ರಾಂ ಧಾರಣೆ 30,850 ರೂ.

02:58 PM Sep 12, 2017 | udayavani editorial |

ಹೊಸದಿಲ್ಲಿ : ಇಲ್ಲಿನ ಬುಲಿಯನ್‌ ಮಾರುಕಟ್ಟೆಯಲ್ಲಿ ಚಿನ್ನ 150 ರೂ. ಕುಸಿಯುವುದರೊಂದಿಗೆ 10 ಗ್ರಾಮ್‌ ಶುದ್ಧ ಚಿನ್ನದ ಧಾರಣೆ 31,000 ರೂ.ಗಳಿಗಿಂತ ಕೆಳಮಟ್ಟಕ್ಕೆ ಜಾರಿತು. 

Advertisement

ಜಾಗತಿಕ ಮಟ್ಟದಲ್ಲಿ ಚಿನ್ನದ ಬೇಡಿಕೆ ಕುಸಿಯುತ್ತಿರವುದು, ಡಾಲರ್‌ ದರ ವರ್ಧಿಸುತ್ತಿರುವದು ಮತ್ತು ಇದಕ್ಕೆ ವ್ಯತಿರಿಕ್ತವಾಗಿ ಶೇರು ದರಗಳು ಏರುತ್ತಿರುವುದು ಗಮಮನಾರ್ಹವಾಗಿದೆ. 

ಇಂದು ಮಂಗಳವಾರದ ವಹಿವಾಟಿನ ಅಂತ್ಯಕ್ಕೆ 10 ಗ್ರಾಂ ಶುದ್ಧ ಚಿನ್ನದ ಧಾರಣೆ 30,850 ರೂ.ಗಳಲ್ಲಿ  ಸ್ಥಿತವಾಯಿತು. 

ಇದೇ ವೇಳೆ ಬೆಳ್ಳಿಯ ಧಾರಣೆ ಕೂಡ 50 ರೂ. ಇಳಿದು ಕೆಜಿಗೆ 41,650 ರೂ.ಗಳಲ್ಲಿ ಸ್ಥಿತವಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next