Advertisement
ಸುಮಾರು ಒಂದು ತಿಂಗಳ ಅವಧಿಯಲ್ಲಿ ವಿಮಾನ ನಿಲ್ದಾಣದಲ್ಲಿ ಒಂದೂವರೆ ಕೆ.ಜಿ.ಗೂ ಅಧಿಕ ಅಕ್ರಮ ಚಿನ್ನ ಸಾಗಾಟ ಪತ್ತೆಯಾಗಿದ್ದು, ಒಂದು ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ದುಬಾೖ ಮತ್ತು ಭಾರತದಲ್ಲಿರುವ ಕೆಲವು ಮಂದಿ ಸ್ಮಗ್ಲರ್‌ಗಳು ಅಕ್ರಮವಾಗಿ ಚಿನ್ನವನ್ನು ಸಾಗಿಸಲು ಕೆಲವು ಪ್ರಯಾಣಿಕರನ್ನು ಬಳಸುತ್ತಿರುವ ಬಗ್ಗೆಯೂ ಅಧಿಕಾರಿಗಳು ಬಲವಾದ ಸಂಶಯ ವ್ಯಕ್ತಪಡಿಸಿದ್ದಾರೆ. ಇಂತಹ ಸ್ಮಗ್ಲರ್‌ಗಳು ಅಕ್ರಮ ಚಿನ್ನ ಸಾಗಾಟ ಮಾಡುವ ಪ್ರಯಾಣಿಕರಿಗೆ ಉಚಿತ ವಿಮಾನಯಾನ ಟಿಕೆಟ್, ಹಣದ ಆಫರ್ ನೀಡುತ್ತಾರೆ ಎನ್ನಲಾಗಿದೆ. ಇನ್ನು ಕೆಲವು ಮಂದಿ ಸ್ವತಃ ಅವರಾಗಿಯೇ ಚಿನ್ನದ ಆಸೆಗೆ ಬಿದ್ದು ಕಸ್ಟಮ್ಸ್ ಇಲಾಖೆಯ ಕೈಗೆ ಸಿಕ್ಕಿಬಿದ್ದು ಅಪಾಯ ತಂದುಕೊಳ್ಳುತ್ತಿದ್ದಾರೆ.
Related Articles
Advertisement
2 ತಂಡಗಳಿಂದ ತಪಾಸಣೆಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆಯ ಒಟ್ಟು 20 ಅಧಿಕಾರಿ, ಸಿಬಂದಿಯನ್ನೊಳಗೊಂಡ 2 ತಂಡಗಳು ತಪಾಸಣೆ ನಡೆಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಅಕ್ರಮ ಚಿನ್ನ ಸಾಗಾಟಗಾರರು ಚಿನ್ನವನ್ನು ಬಚ್ಚಿಟ್ಟುಕೊಳ್ಳಲು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅದನ್ನು ಕೂಡ ಇಲಾಖೆ ಪತ್ತೆ ಹಚ್ಚುತ್ತಿದೆ. ಅಕ್ರಮವಾಗಿ ಸಾಗಿಸಿದ ಚಿನ್ನದ ಮೌಲ್ಯ 20 ಲ.ರೂ.ಗಳಿಗಿಂತ ಅಧಿಕವಿದ್ದರೆ ಆರೋಪಿಗಳನ್ನು ಬಂಧಿಸಲಾಗುತ್ತದೆ. ಅದಕ್ಕಿಂತ ಕಡಿಮೆ ಇದ್ದರೆ ಪ್ರಕರಣ ದಾಖಲಿಸಿ ದಂಡ ವಿಧಿಸಿ ತನಿಖೆ ನಡೆಸಲಾಗುತ್ತದೆ. – ಇಮಾಮುದ್ದೀನ್ ಅಹಮ್ಮದ್,
ಕಸ್ಟಮ್ಸ್ ಆಯುಕ್ತರು, ಮಂಗಳೂರು 12 ಮಂದಿಯ ಬಂಧನ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಈ ಹಿಂದಿನ ಎಲ್ಲ ವರ್ಷಗಳಿಗಿಂತಲೂ ಈ ವರ್ಷ ಅತ್ಯಧಿಕ ಪ್ರಮಾಣದಲ್ಲಿ ಪ್ರಕರಣಗಳು ಪತ್ತೆಯಾಗುತ್ತಿವೆ. 2021ರ ಜನವರಿಯಿಂದ ಎ. 19ರ ವರೆಗೆ ಕೇವಲ ಮೂರೂವರೆ ತಿಂಗಳಲ್ಲಿ 21 ಕೆ.ಜಿ.ಗೂ ಅಧಿಕ ತೂಕದ ಹಾಗೂ 10 ಕೋ.ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈ ವರ್ಷ ಇದುವರೆಗೆ 12 ಮಂದಿಯನ್ನು ಬಂಧಿಸಲಾಗಿದೆ.