Advertisement

ಒಂದೇ ದಿನ 990 ರೂ. ಜಿಗಿತ: ಚಿನ್ನ 10 ಗ್ರಾಮಿಗೆ 31,350 ರೂ.

05:21 PM Sep 08, 2017 | |

ಮುಂಬಯಿ : ಚಿನ್ನದ ಧಾರಣೆ ಇಂದು ಒಂದೇ ದಿನದಲ್ಲಿ 990 ರೂ. ಏರಿದ್ದು 10 ಗ್ರಾಂ ಚಿನ್ನದ ಬೆಲೆ 31,350 ರೂ.ಗಳಿಗೆ ನೆಗೆದಿದೆ.

Advertisement

ಕಳೆದ ಒಂದು ವರ್ಷಕ್ಕೂ ಮೀರಿದ ಅವಧಿಯಲ್ಲಿ ಚಿನ್ನ ಕಂಡಿರುವ ಗರಿಷ್ಠ ಎತ್ತರ ಇಂದಿನದ್ದಾಗಿದೆ. ಅಮೆರಿಕದಲ್ಲಿ ಉದ್ಯೋಗ ಅಂಕಿ ಅಂಶಗಳು ನಿರೀಕ್ಷೆಗಿಂತ ದುರ್ಬಲವಾಗಿ ದಾಖಲಾಗಿರುವುದು ಹಾಗೂ ಉತ್ತರ ಕೊರಿಯ ತನ್ನ ಪರಮಾಣು ಶಕ್ತಿಯ ದುಸ್ಸಾಹಸದ ಪ್ರದರ್ಶನಕ್ಕೆ ಇಳಿದಿರುವುದು ವಿಶ್ವಾದ್ಯಂತ ಚಿನ್ನದ ಧಾರಣೆ ಗಗನ ಮುಖೀಯಾಗಲು ಕಾರಣವಾಗಿದೆ. 

ಕಳೆದ ಎರಡು ದಿನಗಳಲ್ಲಿ ಚಿನ್ನದ ಧಾರಣೆ ಸುಮಾರು 240ರೂ.ಗಳಷ್ಟು ಕುಸಿದಿತ್ತು. ಇಂದು ಒಂದೇ ದಿನ ಅದು ಹತ್ತು ತಿಂಗಳ ಎತ್ತರಕ್ಕೆ ಏರಿತು. 

ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (ಎಂಸಿಎಕ್ಸ್‌) ಅಕ್ಟೋಬರ್‌ ಪೂರೈಕೆ ಚಿನ್ನವು 10 ಗ್ರಾಮಿಗೆ 30,380ರ ದರದಲ್ಲಿ, ಎಂದರೆ 98 ರೂ. ಹೆಚ್ಚಿನ ದರದಲ್ಲಿ (ಶೇ.0.32) ವ್ಯವಹಾರವಾಗುತ್ತಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next