ಹೊಸದಿಲ್ಲಿ: ಹಳದಿ ಲೋಹವು ಗುರುವಾರ ಗ್ರಾಂಗೆ 232 ರೂ.ಗಳಷ್ಟು ಏರಿಕೆ ದಾಖಲಿಸಿದ್ದು, 10 ಗ್ರಾಂಗಳಿಗೆ 50 ಸಾವಿರ ರೂ. ಗಡಿ ದಾಟಿ 50,184 ರೂ.ಗಳಿಗೇರಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳ ಹಿನ್ನೆಲೆಯಲ್ಲಿ ಈ ಏರಿಕೆ ದಾಖಲಾಗಿದೆ ಎಂದು ಚಿನಿವಾರ ಕಟ್ಟೆಯ ಮೂಲಗಳು ಹೇಳಿವೆ.
ಬುಧವಾರ ಚಿನ್ನ ಬೆಲೆ ದಿಲ್ಲಿ ಮಾರುಕಟ್ಟೆಯಲ್ಲಿ 10 ಗ್ರಾಂಗೆ 49,952 ರೂ.ಗಳಲ್ಲಿತ್ತು. ಬೆಳ್ಳಿಯೂ ಏರಿಕೆ ದಾಖಲಿಸಿದ್ದು, ಕೆ.ಜಿ.ಗೆ 1,275 ರೂ. ಏರಿ 52,930 ರೂ. ತಲುಪಿತ್ತು.
ಬುಧವಾರ ಇದು 51,655 ರೂ.ಗಳಲ್ಲಿತ್ತು.ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಜನರು ಚಿನ್ನವನ್ನು ಒಂದು ಸುರಕ್ಷಿತ ಹೂಡಿಕೆಯಾಗಿ ಪರಿಗಣಿಸಿ ಹೆಚ್ಚು ಮೊರೆ ಹೊಗುತ್ತಿದ್ದಾರೆ. ಹೀಗಾಗಿ ಬೇಡಿಕೆ ಹೆಚ್ಚುತ್ತಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.