Advertisement

ಜಿಎಂಐಟಿಗೆ ಚಿನ್ನದ ಪ್ರಾಶಸ್ತ್ಯ ಗೌರವ

03:21 PM Jan 14, 2021 | Team Udayavani |

ದಾವಣಗೆರೆ: ಎ.ಐ.ಸಿ.ಟಿ.ಇ ಹಾಗೂ ಸಿ.ಐ.ಐ ಸಂಸ್ಥೆಗಳು ನಡೆಸಿದ ಜಂಟಿ ಸಮೀಕ್ಷೆಯಲ್ಲಿ ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯಕ್ಕೆ ಚಿನ್ನದ ಪ್ರಾಶಸ್ತ್ಯ ಗೌರವ ದೊರೆತಿದೆ. ಕೈಗಾರಿಕೋದ್ಯಮ ಸಂಪರ್ಕದೊಂದಿಗೆ ಬೆಳೆಯುತ್ತಿರುವ ತಾಂತ್ರಿಕ ಮಹಾವಿದ್ಯಾಲಯಗಳ 2020ನೇ ಸಾಲಿನ ಸರ್ವೆಯಲ್ಲಿ ಜಿಎಂಐಟಿ ಕಾಲೇಜಿನ ಸತತ ಸಾಧನೆಗಳನ್ನು ಪರಿಗಣಿಸಿ ಚಿನ್ನದ ಪ್ರಾಶಸ್ತ್ಯಕ್ಕೆ ಆಯ್ಕೆ ಮಾಡಲಾಗಿದೆ.

Advertisement

ಜಿಎಂಐಟಿ ಈಗಾಗಲೇ 75ಕ್ಕೂ ಹೆಚ್ಚು ಕೈಗಾರಿಕೋದ್ಯಮಗಳೊಂದಿಗೆ ಸಹಯೋಗ ಹೊಂದಿದ್ದು, ಹಲವಾರು ಸಂಸ್ಥೆಗಳೊಂದಿಗೆ ಇಂಟರ್ನ್ಶಿಪ್‌, ಕನ್ಸಲ್ಟೆನ್ಸಿ, ಆರ್‌ ಅಂಡ್‌ ಡಿ ಚಟುವಟಿಗಳೊಂದಿಗೆ ತಾಂತ್ರಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ವಿದ್ಯಾರ್ಥಿಗಳ ಗುಣಮಟ್ಟ ಹಾಗೂ ಜ್ಞಾನವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. 6 ವರ್ಷ ಸತತವಾಗಿ ಶೇ. 80ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ ಇಂಟರ್‌ ವ್ಯೂನಲ್ಲಿ ಉದ್ಯೋಗ ದೊರೆತಿದೆ.

ಇದನ್ನೂ ಓದಿ:ಭಂಡಾರದೊಡೆಯನ ಜಾತ್ರೆಗೆ ಕೊರೊನಾ ವಿಘ್ನ

ಕೆಲವರು ಉದ್ಯಮಶೀಲರಾಗಿ ಹಾಗೂ ಹೆಚ್ಚಿನ ವಿದ್ಯಾಭ್ಯಾಸ ವ್ಯಾಸಂಗ ಮಾಡುತ್ತಿದ್ದಾರೆ. ಜಿಎಂಐಟಿ ಕಾಲೇಜಿಗೆ ಲಭಿಸಿರುವ ಚಿನ್ನದ ಪ್ರಾಶಸ್ತ್ಯ ಹೆಮ್ಮೆಯ ವಿಷಯ ಎಂದು ಸಂಸ್ಥೆಯ ಚೇರ್ಮನ್‌ ಜಿ.ಎಂ. ಲಿಂಗರಾಜು, ಆಡಳಿತಾಧಿ ಕಾರಿ ಸುಭಾಷ್‌ಚಂದ,ಪ್ರಾಂಶುಪಾಲ ಡಾ| ವೈ. ವಿಜಯಕುಮಾರ್‌ ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಸಮಸ್ತ  ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next