Advertisement

ಮಲೆ ಮಹದೇಶ್ವರ ಬೆಟ್ಟದ ಪಾರ್ವತಿ ಅಮ್ಮನವರ ಚಿನ್ನದ ಕರಡಿಗೆ ನಾಪತ್ತೆ!

12:32 PM Mar 25, 2021 | Team Udayavani |

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಪಾರ್ವತಿ ಅಮ್ಮನವರಿಗೆ ಧರಿಸಿದ್ದ 25 ಗ್ರಾಂ ತೂಕದ ಚಿನ್ನದ ಕರಡಿಗೆ ನಾಪತ್ತೆಯಾಗಿರುವ ಘಟನೆ ನಡೆದಿದೆ.

Advertisement

ಮಾ. 17ರಂದು ದೇವಾಲಯದಲ್ಲಿ ಉತ್ಸವ ನಡೆದ ಸಂದರ್ಭದಲ್ಲಿ ಪಾರ್ವತಿ ಅಮ್ಮನವರ ಉತ್ಸವ ಮೂರ್ತಿಗೆ ಈ ಚಿನ್ನದ ಕರಡಿಗೆಯನ್ನು ಧರಿಸಲಾಗಿತ್ತು. ಅಂದು ಸಂಜೆ ಚಿನ್ನಾಭರಣ ಲೆಕ್ಕ ಹಾಕಿದ ಸಂದರ್ಭದಲ್ಲಿ ಅಮ್ಮನವರ ಚಿನ್ನದ ಕರಡಿಗೆ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಪುತ್ತೂರು: ಪೊಲೀಸ್ ಠಾಣೆಯ 50 ಮೀ. ದೂರದಲ್ಲೇ ಜ್ಯುವೆಲ್ಲರಿ ಅಂಗಡಿಗೆ ನುಗ್ಗಿದ ಕಳ್ಳರು!

ಈ ಬಗ್ಗೆ ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರಕ್ಕೆ ಮೌಖಿಕವಾಗಿ ತಿಳಿಸಲಾಗಿದೆ. ಪೊಲೀಸರಿಗೂ ದೂರು ಸಲ್ಲಿಸಲಾಗಿದೆ ಎಂದು ಬೇಡಗಂಪಣ ಅರ್ಚಕರಾದ ಕೆ.ವಿ. ಮಾದೇಶ್‍ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next