ವಿಶಾಖಪಟ್ಟಣ: ದೇಗುಲಗಳಲ್ಲಿ ಚಿನ್ನದಿಂದ, ಹಣದಿಂದ ಅಲಂಕಾರ ಮಾಡುವುದು ಇತ್ತೀಚೆಗೆ ಮಾಮೂಲಿ. ಅಂತಹದ್ದೇ ಒಂದು ಅಲಂಕಾರದ ಕಾರಣದಿಂದ ಆಂಧ್ರಪ್ರದೇಶದ ದೇಗುಲವೊಂದು ಭಾರೀ ಸದ್ದು ಮಾಡಿದೆ.
ಪಶ್ಚಿಮ ಗೋದಾವರಿ ಜಿಲ್ಲೆಯ, ಪೆನುಗೊಂಡದಲ್ಲಿನ ವಾಸವಿ ಕನ್ನಿಕಾ ಪರಮೇಶ್ವರಿ ದೇಗುಲಕ್ಕೆ 135 ವರ್ಷದ ಇತಿಹಾಸ. ಆ ದೇಗುಲಕ್ಕೆ ಈಗ ನವರಾತ್ರಿ ಪ್ರಯುಕ್ತ ಹಣದಿಂದ, ಬಂಗಾರದಿಂದ ಅಲಂಕಾರ ಮಾಡಲಾಗಿದೆ.
ಇದರ ಒಟ್ಟು ಮೌಲ್ಯ 6 ಕೋಟಿ ರೂ.! ವಾಸವಿ ದೇವಿಯ ಮೂರ್ತಿಗೆ 6 ಕೆಜಿ ಬಂಗಾರ, 3 ಕೆಜಿ ಬೆಳ್ಳಿಯಿಂದ ಅಲಂಕಾರ ಮಾಡಲಾಗಿದೆ. ಹಾಗೆಯೇ ಗರ್ಭಗುಡಿಯ ಒಳಗೋಡೆಗಳ ಮೇಲೆ, ನೆಲದ ಮೇಲೆ ನೋಟುಗಳನ್ನು ಅಂಟಿಸಲಾಗಿದೆ.
20 ವರ್ಷದಿಂದ ಈ ಪದ್ಧತಿ ಅನುಸರಿಸಲಾಗುತ್ತದೆ. ಉತ್ಸವ ಮುಗಿದ ಮೇಲೆ ಅಷ್ಟನ್ನೂ ಅದನ್ನು ಕೊಟ್ಟ ಜನರಿಗೆ ಮರಳಿಸಲಾಗುತ್ತದೆ.
ಹೀಗೆ ನೋಟುಗಳನ್ನು ಉತ್ಸವದ ವೇಳೆ ನೀಡುವುದರಿಂದ ಸಂಪತ್ತು ಸಮೃದ್ಧಿಯಾಗುತ್ತದೆ ಎನ್ನುವುದು ಜನರ ನಂಬಿಕೆಯಾಗಿದೆ.