Advertisement

Gold medal; ಮುಂದಿನ ಏಷ್ಯನ್ ಗೇಮ್ಸ್‌ನಲ್ಲಿ ಆಡುವುದಿಲ್ಲ: ರೋಹನ್ ಬೋಪಣ್ಣ

06:26 PM Sep 30, 2023 | Team Udayavani |

ಹ್ಯಾಂಗ್ ಝೂ: ಇಲ್ಲಿ ನಡೆದ 19ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಟೆನಿಸ್ ಮಿಶ್ರ ಡಬಲ್ಸ್ ನಲ್ಲಿ ಶನಿವಾರ ಭಾರತದ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಅವರು ಬಂಗಾರದ ಪದಕಕ್ಕೆ ಕೊರಳೊಡ್ಡಿದ್ದಾರೆ.

Advertisement

ಚಿನ್ನ ಗೆದ್ದ ಸಂಭ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ 43 ರ ಹರೆಯದ ರೋಹನ್ ಬೋಪಣ್ಣ “ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ಭಾರತದ ಕ್ರೀಡಾ ಸಾಮರ್ಥ್ಯ ಹೆಚ್ಚುತ್ತಿದೆ ಎಂದು ನಾನು ಭಾವಿಸುತ್ತೇನೆ. ಟೆನಿಸ್ ಏರುಗತಿಯಲ್ಲಿದೆ. ನಾವು ಯಾವಾಗಲೂ ಟೆನಿಸ್‌ನಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇವೆ. ರುತುಜಾ ಮತ್ತು ನನಗೂ ಚಿನ್ನವನ್ನು ಗಳಿಸಲು ಸಾಧ್ಯವಾಯಿತು ಎಂಬುದು ನಿಜವಾಗಿಯೂ ದೊಡ್ಡ ಕ್ಷಣವಾಗಿದೆ. ಸರಕಾರ ಮತ್ತು ಫೆಡರೇಶನ್‌ನಿಂದ ಸ್ವಲ್ಪಮಟ್ಟಿನ ಬೆಂಬಲವು ಅಂತಹ ದೊಡ್ಡ ಬದಲಾವಣೆಯನ್ನು ಮಾಡುತ್ತದೆ ಎಂದು ತೋರಿಸುತ್ತದೆ’ ಎಂದು ಸಂತಸ ಹೊರ ಹಾಕಿದರು.

‘ನಾನು ಮುಂದಿನ ಏಷ್ಯನ್ ಗೇಮ್ಸ್‌ನಲ್ಲಿ ಆಡುವುದಿಲ್ಲ ಆದ್ದರಿಂದ ನಾನು ಕ್ರೀಡಾಗ್ರಾಮದಲ್ಲಿನ ವಾತಾವರಣವನ್ನು ಆನಂದಿಸುತ್ತಿದ್ದೇನೆ’ ಎಂದರು.

ರುತುಜಾ ಭೋಸಲೆ ಮಾತನಾಡಿ ‘ರೋಹನ್ ಬೋಪಣ್ಣ ಅವರು ನನ್ನೊಂದಿಗೆ ಡಬಲ್ಸ್ ಆಡಲು ಆಯ್ಕೆ ಮಾಡಿದಾಗ, ನಾನು ನಿಜವಾಗಿಯೂ ಉತ್ಸುಕಳಾಗಿದ್ದೆ. ಅವರು ನನ್ನೊಂದಿಗೆ ಅಂಗಳದಲ್ಲಿ ತುಂಬಾ ಚೆನ್ನಾಗಿದ್ದರು, ಇಂದು ನಾನು ಕೋರ್ಟ್‌ಗೆ ಕಾಲಿಟ್ಟಾಗ ನಾನು ಸ್ವಲ್ಪ ಉದ್ವೇಗಗೊಂಡಿದ್ದೆ.ಪಂದ್ಯದುದ್ದಕ್ಕೂ ಅವರು ನನಗೆ ಸಣ್ಣ ಸಣ್ಣ ಸಲಹೆಗಳನ್ನು ನೀಡುತ್ತಿದ್ದರು” ಎಂದರು.

Advertisement

ಬೋಪಣ್ಣ ಮತ್ತು ರುತುಜಾ ಜೋಡಿ ತೈವಾನ್ ಜೋಡಿ ತ್ಸುಂಗ್-ಹಾವೊ ಹುವಾಂಗ್ ಮತ್ತು ಎನ್-ಶುವೊ ಲಿಯಾಂಗ್ ವಿರುದ್ಧ 2-6 6-3 10-4 ಜಯ ಸಾಧಿಸಿ ಮಿಶ್ರ ಡಬಲ್ಸ್ ಚಿನ್ನದ ಪದಕವನ್ನು ಗೆದ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next