Advertisement
ಶುಕ್ರವಾರ ನಗರದ ಗಾಯನ ಸಮಾಜದಲ್ಲಿ ಜರಗಿದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ 8ನೇ ಘಟಿಕೋತ್ಸವದಲ್ಲಿ ಶುಕ್ಲ ಯಜುರ್ವೇದ ಕ್ರಮಾಂತ (ಬಿ.ಎ.) ವಿಷಯದಲ್ಲಿ ಮೈಸೂರಿನ ಅನಸೂಯಾ ಅವರು ಪರಮ ಪೂಜ್ಯ ಶ್ರೀ ಚಿದಂಬರ ಮೂರ್ತಿ ಚಕ್ರವರ್ತಿ ಮಹಾಸ್ವಾಮಿ ಸ್ವರ್ಣ ಪದಕ ಸ್ವೀಕರಿಸಿದ್ದಾರೆ. 36 ವರ್ಷಗಳ ಸುದೀರ್ಘ ಕಾಲ ಸೇನೆಯಲ್ಲಿ ವೈದ್ಯೆಯಾಗಿದ್ದ ಅವರು ನಿವೃತ್ತಿ ಬಳಿಕ ಮೈಸೂರಿನಲ್ಲೇ ವೈದ್ಯಕೀಯ ವೃತ್ತಿಯನ್ನು ಮುಂದುವರಿಸಿದರು. ಜತೆಗೆ ಸಂಸ್ಕೃತ ಅಧ್ಯಯನವನ್ನು ಆರಂಭಿಸಿದರು. ಮೈಸೂರಿನ ಮಹಾರಾಜ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಯಾಗಿರುವ ಅವರು ಶುಕ್ಲಯರ್ಜುವೇದ ಕ್ರಮಾಂತ ವಿಷಯದಲ್ಲಿ ಬಿ.ಎ. ಪದವಿಯನ್ನು ಸ್ವರ್ಣ ಪದಕದೊಂದಿಗೆ ಪೂರೈಸಿದ್ದಾರೆ. ಮುಂದೆ ಧನಂತ ವಿಷಯವಾಗಿ ಉನ್ನತಾಧ್ಯಯನ ಮಾಡುವ ಅಭಿಲಾಷೆ ಅವರದ್ದು.
ಸಂಸ್ಕೃತ ವಿದ್ವಾಂಸ ಪಂ| ಮಳಗಿ ಜಯತೀರ್ಥಾಚಾರ್ಯ ಅವರಿಗೆ ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥನಾರಾಯಣ ಅವರು ಕರ್ನಾಟಕ ಸಂಸ್ಕೃತ ವಿವಿಯ ಗೌರವ ಡಿ-ಲಿಟ್ ಪದವಿ ಪ್ರದಾನಿಸಿದರು.
Related Articles
Advertisement
ಪಶ್ಚಿಮ ಬಂಗಾಳ ಬೇಲೂರಿನ ಸ್ವಾಮಿ ವಿವೇಕಾನಂದ ವಿಶ್ವವಿದ್ಯಾ ನಿಲಯದ ವಿಶ್ರಾಂತ ಕುಲಪತಿ ಸ್ವಾಮಿ ಅತ್ಮಪ್ರಿಯಾನಂದ ಅವರು ಕೋಲ್ಕತಾದಿಂದಲೇ ವರ್ಚುವಲ್ ಮೂಲಕ ಘಟಿಕೋತ್ಸವ ಭಾಷಣ ಮಾಡಿದರು.
ಸೇನೆ ಯಲ್ಲಿ ಸೇವೆ ಸಲ್ಲಿಸಿದ್ದರಿಂದ ಉತ್ಸಾಹ ಎಂದೂ ಕುಂದಲಿಲ್ಲ. ಗುಜರಾತ್‌ನಲ್ಲಿದ್ದಾಗ ಗಾಯಾಳು ಯೋಧರಿಗೆ ಚಿಕಿತ್ಸೆ ನೀಡಿದ್ದು ಇಂದಿಗೂ ಸ್ಮತಿಪಟಲದಲ್ಲಿ ಅಚ್ಚಳಿಯದೆ ಉಳಿದಿದೆ. ಸಂಸ್ಕೃತದ ಬಗ್ಗೆ ಮೊದಲೇ ಆಸಕ್ತಿ ಇತ್ತು.– ರಾಮಯ್ಯ ಅನಸೂಯಾ