Advertisement

ಚಿನ್ನ ತಯಾರಿಸುವ ಉಪಾಯ!

06:00 AM Sep 20, 2018 | |

ಬಹಳ ಹಿಂದೆ ಮ್ಯಾನ್ಮಾರ್‌ನ ನದೀ ತೀರದಲ್ಲಿ ತುಝಾ ಹಾಗೂ ತೆಂಘೀ ಎಂಬ ದಂಪತಿಗಳಿದ್ದರು. ತೆಂ  ತನ್ನನ್ನು ತಾನು ರಾಸಾಯನಿಕ ಶಾಸ್ತ್ರಜ್ಞನೆಂದು ಕರೆದುಕೊಳ್ಳುತ್ತಿದ್ದ. ಅಲ್ಲದೆ ಯಾವಾಗಲೂ ಮಣ್ಣನ್ನು ಚಿನ್ನವನ್ನಾಗಿ ಪರಿವರ್ತಿಸುವ ಕನಸು ಕಾಣುತ್ತಿದ್ದ. ಪ್ರತಿದಿನ ಅದೇ ಪರಿಶೋಧನೆಯಲ್ಲಿ ತೊಡಗಿಕೊಂಡು ತನ್ನ ಸಮಯ ಮತ್ತು ಹಣವನ್ನು ವ್ಯಯಿಸುತ್ತಿದ್ದ. ಇದರಿಂದ ಬೇಸರಗೊಂಡ ಆತನ ಹೆಂಡತಿ “ಯಾವುದಾದರೂ ಒಳ್ಳೆಯ ಕೆಲಸಕ್ಕೆ ಸೇರಿಕೊಂಡು ಹಣ ಸಂಪಾದನೆ ಮಾಡಬಾರದಾ? ಜೀವನ ನಡೆಸುವುದೇ ದುಸ್ತರವಾಗಿದೆ’ ಎಂದು ಅಲವತ್ತುಕೊಳ್ಳುತ್ತಿದ್ದಳು. ಆದರೆ ಅದ್ಯಾವುದೂ ತೆಂ ಯ ಕಿವಿಗೆ ಬೀಳಲಿಲ್ಲ. ಆತ ತನ್ನ ಪಾಡಿಗೆ ತಾನು ಪ್ರಯೋಗಗಳನ್ನು ಮಾಡುತ್ತ, ಚಿನ್ನ ಗಳಿಸುವ ಮತ್ತು ಶ್ರೀಮಂತನಾಗುವ ಕನಸು ಕಾಣುತ್ತಲೇ ಇದ್ದ. ಇದರಿಂದ ಮನನೊಂದುಕೊಂಡ ತುಝಾ ತನ್ನ ವೃದ್ಧ ತಂದೆಯ ಬಳಿ ಬಂದು ತನ್ನ ಸಮಸ್ಯೆಯನ್ನು ನಿವೇದಿಸಿಕೊಂಡಳು. ತುಝಾಳ ತಂದೆ ಒಂದು ಸೂಕ್ತ ಉಪಾಯ ಯೋಚಿಸಿ, ತೆಂಘಿಯನ್ನು ತನ್ನ ಬಳಿಗೆ ಕರೆತರುವಂತೆ ಸೂಚಿಸಿದ.   

Advertisement

ಮರುದಿನ ತೆಂಘೀ ಮಾವನನ್ನು ಕಾಣಲು ಆತನ ಮನೆಗೆ ಹೋದ. ಮಾವ ತೆಂಘೀಯನ್ನು ತನ್ನ ಹತ್ತಿರ ಕೂರಿಸಿಕೊಂಡು “ನಾನೂ ಕೂಡ ಯೌವನದಲ್ಲಿ ನಿನ್ನ ಹಾಗೆ ರಾಸಾಯನಿಕ ಶಾಸ್ತ್ರಜ್ಞನಾಗಿದ್ದೆ. ಕೆಲ ಹಂತದವರೆಗೆ ನಾನೂ ಪ್ರಯೋಗಗಳನ್ನು ಮಾಡಿದ್ದೇನೆ. ನಿನ್ನ ಪ್ರಯೋಗಗಳನ್ನು ವಿವರಿಸು’ ಎಂದನು. ಇಬ್ಬರೂ ಅದೇ ವಿಷಯವಾಗಿ ತುಂಬಾ ಹೊತ್ತು ಚರ್ಚಿಸಿದರು. 

ಕೊನೆಗೆ ತೆಂ ಯ ಮಾವ ಎದ್ದು ನಿಂತು “ನೀನು ನಿನ್ನ ಸಂಶೋಧನೆಯಲ್ಲಿ ತುಂಬಾ ಮುಂದೆ ಹೋಗಿದ್ದಿ. ಅದಕ್ಕಾಗಿ ಹೃತೂ³ರ್ವಕ ಅಭಿನಂದನೆಗಳು. ಶೀಘ್ರವೇ ಮಣ್ಣನ್ನು ಬಂಗಾರವನ್ನಾಗಿ ಪರಿವರ್ತಿಸುವಲ್ಲಿ ನೀನು ಯಶಸ್ವಿಯಾಗಲಿದ್ದಿ. ಆದರೆ ನಿನ್ನ ಪ್ರಯೋಗದಲ್ಲಿ ಒಂದು ಮುಖ್ಯ ಪದಾರ್ಥವನ್ನು ಕಡೆಗಣಿಸಿದ್ದಿ. ನನಗೆ ಆ ವಸ್ತುವಿನ ಬಗ್ಗೆ ತಿಳಿದಾಗ ವೃದ್ಧಾಪ್ಯ ಸುàಪಿಸಿತ್ತು. ಹಾಗಾಗಿ ಬಳಸಲಾಗಲಿಲ್ಲ. ನೀನಾದರೂ ಪ್ರಯತ್ನಿಸು’ ಎಂದನು. ಈ ಮಾತುಗಳನ್ನು ಕೇಳಿ ತೆಂ ಯ ಉತ್ಸಾಹ ಮುಗಿಲು ಮುಟ್ಟಿತು. ಆತ ಕೂಡಲೆ “ಅದು ಯಾವ ಪದಾರ್ಥ? ನಾನು ಅದನ್ನು ಖಂಡಿತವಾಗಿಯೂ ಬಳಸುವೆ’ ಎಂದನು. ಅದಕ್ಕುತ್ತರವಾಗಿ ವೃದ್ದನು “ತುಂಬಾ ಸಂತೋಷ ಮಗನೇ. ಆ ರಹಸ್ಯ ಪದಾರ್ಥವು ಬಾಳೆ ಎಲೆಯಲ್ಲಿ ಸಿಗುವ ಬೆಳ್ಳಿಯಂಥ ಪುಡಿ. ಅದಕ್ಕಾಗಿ ನೀನು ಸ್ವತಃ ಬಾಳೆಗಿಡಗಳನ್ನು ಬೆಳೆದು, ಕೆಲವು ಮಂತ್ರಗಳನ್ನು ಹೇಳಬೇಕು. ಆಗ ಬೆಳೆದ ಎಲೆಯಲ್ಲಿ ಸಿಗುವ ಬೆಳ್ಳಿಯಂಥ ಪುಡಿಗೆ ಮಂತ್ರಶಕ್ತಿ ಲಭಿಸುತ್ತದೆ. ಒಂದು ಕಿಲೋಗ್ರಾಂ ನಷ್ಟು ಪುಡಿ ಇದ್ದರೆ ನಿನ್ನ ಪ್ರಯೋಗ ಯಶಸ್ವಿಯಾದಂತೆ’ ಎಂದನು. ಈ ಮಾತನ್ನು ಕೇಳಿ ಅದಮ್ಯ ಉತ್ಸಾಹದಿಂದ ತೆಂ  ಬಾಳೆ ಬೆಳೆಯಲು ಬೇಕಾದ ಹಣವನ್ನು ತೆಗೆದುಕೊಂಡು, ಮಂತ್ರವನ್ನೂ ಕಲಿತುಕೊಂಡು ಬಂದನು.    

ಮರುದಿನವೇ ಮನೆಯ ಹತ್ತಿರ ಒಂದು ಜಮೀನು ಖರೀದಿಸಿ, ನೆಲವನ್ನು ಹದಗೊಳಿಸಿ, ಮಂತ್ರವನ್ನು ಪಠಿಸುತ್ತ ತಾನೇ ಸ್ವತಃ ಬಾಳೆಯ ಗಿಡಗಳನ್ನು ನೆಟ್ಟನು. ಪ್ರತಿದಿನ ಶ್ರದ್ಧೆಯಿಂದ ಬಾಳೆಗಿಡಗಳನ್ನು ಕಾದನು. ಗಿಡಗಳು ದೊಡ್ಡವಾಗಿ, ಬಾಳೆಹಣ್ಣುಗಳ ಗೊನೆ ಕಾಣಿಸಿಕೊಂಡವು. ಆಗ ಅದರ ಎಲೆಗಳಿಂದ ಬೆಳ್ಳಿಯಂಥ ಪುಡಿಯನ್ನು ಸಂಗ್ರಸಿದನು. ಕೆಲ ಗ್ರಾಂಗಳಷ್ಟೆ ಪುಡಿ ಸಂಗ್ರಹವಾಯಿತು. ಒಂದು ಕೆ.ಜಿ ಯಷ್ಟಾಗಲು ತೆಂ  ಜಮೀನು ವಿಸ್ತರಿಸಿ, ಇನ್ನಷ್ಟು ಬಾಳೆ ಗಿಡಗಳನ್ನು ನೆಟ್ಟನು. 

ವರ್ಷಗಳು ಕಳೆದವು. ತೆಂ  ತನ್ನ ನಿರ್ಧಾರದಿಂದ ಹಿಂದೆ ಸರಿಯದೇ ಪ್ರಯತ್ನವನ್ನು ಮುಂದುವರಿಸಿದನು. ಕೊನೆಗೂ ಆತ ಒಂದು ಕೆ.ಜಿಯಷ್ಟು ಪುಡಿ ಸಂಗ್ರಹಿಸಿದನು. ಆ ದಿನ ಸಂತೋಷದಿಂದ ಓಡುತ್ತಾ ಮಾವನ ಮನೆಗೆ ಬಂದನು. ಮಾವನು “ತೆಂ , ನೀನು ತುಂಬಾ ಒಳ್ಳೆಯ ಕೆಲಸವನ್ನು ಮಾಡಿದ್ದೀಯಾ. ಈಗ ನಾನು ಮಣ್ಣನ್ನು ಹೇಗೆ ಚಿನ್ನವನ್ನಾಗಿ ಪರಿವರ್ತಿಸಬಹುದೆಂದು ತೋರಿಸುತ್ತೇನೆ.’ ಎಂದು ಹೇಳಿ ಮಗಳು ತುಝಾಳನ್ನು ಕೂಗಿ ಕರೆದನು. “ತುಝಾ, ಅಳಿಯಂದಿರು ಬಾಳೆಯ ಎಲೆಯ ಮೇಲಿನ ಪುಡಿಯನ್ನು ಸಂಗ್ರಹಿಸುತ್ತಿದ್ದಾಗ, ನೀನು ಏನು ಮಾಡಿದೆ?’ ಎಂದು ಕೇಳಿದನು. ಅವಳು, “ಅಪ್ಪಾ ನಾನು ಬಾಳೆಗೊನೆಗಳನ್ನೆಲ್ಲಾ ಮಾರಿ ಹಣವನ್ನು ಸಂಪಾದಿಸಿದೆ.’ ಎಂದು ಚೀಲದಿಂದ ಚಿನ್ನದ ನಾಣ್ಯಗಳನ್ನು ತೋರಿಸಿದಳು. ತೆಂ ಗೆ ತನ್ನ ಮೂರ್ಖತನದ ಅರಿವಾಯಿತು. ಇಬ್ಬರ ಬಳಿಯೂ ಅವನು ಕ್ಷಮಾಪಣೆ ಕೇಳಿದ. ತೆಂ  ಮತ್ತು ತುಝಾ ಆವತ್ತಿನಿಂದ ಸುಖವಾಗಿ ಬಾಳಿದರು.

Advertisement

ಅನುವಾದ: ಸುಮನ್‌ ದುಬೈ

Advertisement

Udayavani is now on Telegram. Click here to join our channel and stay updated with the latest news.

Next