Advertisement
ಒಡವೆಗಳನ್ನು ಒಲ್ಲೆ ಅನ್ನುವ ಮಹಿಳೆಯರಿದ್ದಾರೆಯೇ? ಹಬ್ಬ-ಹರಿದಿನ, ಮದುವೆಯಂಥ ಶುಭ ಸಮಾರಂಭಗಳಲ್ಲಿ ಎಲ್ಲರ ಕಣ್ಣು ಕುಕ್ಕುವಂತೆ ಆಭರಣ ಧರಿಸಬೇಕೆಂದು ಎಲ್ಲರೂ ಬಯಸುತ್ತಾರೆ. ಮೊದಲೆಲ್ಲ ಒಡವೆ ಅಂದಕೂಡಲೇ ಚಿನ್ನವೇ ಕಣ್ಮುಂದೆ ಬರುತ್ತಿತ್ತು. ಆದರೀಗ ಆಭರಣ ಚಿನ್ನದ್ದೇ ಆಗಬೇಕಿಲ್ಲ; ಬೆಳ್ಳಿಯೂ ಆಗಬಹುದು.
ಬೆಳ್ಳಿ ಆಭರಣಗಳನ್ನು ಬಹುವಾಗಿ ಮೆಚ್ಚಿಕೊಂಡಿರುವುದು ಕಾಲೇಜು ಯುವತಿಯರು. ಬಂಗಾರ ಈಗ ಓಲ್ಡ್ ಫ್ಯಾಷನ್ ಆಗಿಬಿಟ್ಟಿದೆ ಅನ್ನುವ ಅವರು, ಬೆಳ್ಳಿ ಚಾಂದ್‌ಬಾಲಿ, ಅಫ್ಘಾನಿ ಕಿವಿಯೋಲೆಗಳು, ಜುಮುಕಿಗಳು, ಕ್ಲಿಪ್‌ಮೂಗುತಿಗಳು, ಬ್ರೇಸ್ಲೆಟ್‌ನಂತೆ ಕಾಣುವ ದೊಡ್ಡ ಗಾತ್ರದ ಬಳೆಗಳು, ಉಂಗುರ ಹಾಗೂ ಬೆಳ್ಳಿ ನಾಣ್ಯದ ಪೆಂಡೆಂಟ್‌ಗಳಿಗೆ ಮಾರು ಹೋಗಿದ್ದಾರೆ.
Related Articles
ಬೆಳ್ಳಿ ಆಭರಣಗಳ ಮತ್ತೂಂದು ವೈಶಿಷ್ಟ್ಯವೆಂದರೆ, ಅವುಗಳನ್ನು ಸಾಂಪ್ರದಾಯಿಕ ಮತ್ತು ಪಾಶ್ಚಾತ್ಯ, ಎರಡೂ ಬಗೆಯ ಉಡುಗೆಗಳ ಜೊತೆ ಧರಿಸಬಹುದು. ಇಂಡೋ-ವೆಸ್ಟರ್ನ್ ಸ್ಟೈಲ್ ಜೊತೆಗೂ ಬೆಳ್ಳಿ ಮ್ಯಾಚ್ ಆಗುತ್ತದೆ. ಕುರ್ತಿ ಮತ್ತು ಡೆನಿಮ್ ಪ್ಯಾಂಟ್, ಚೂಡಿದಾರ, ಸಲ್ವಾರ್ ಕಮೀಜ್, ಉದ್ದಲಂಗ, ಮ್ಯಾಕ್ಸಿ ಡ್ರೆಸ್, ಸೀರೆ ಮತ್ತು ಇಂಡಿಯನ್ ಪ್ರಿಂಟ್ ಇರುವ ಡ್ರೆಸ್‌ಗಳು… ಹೀಗೆ ಎಲ್ಲವಕ್ಕೂ ಸಲ್ಲುವ ಒಡವೆ ಇದು.
Advertisement
ಬೆಳ್ಳಿ ಬೋರಿಂಗ್ ಅಲ್ಲಬೆಳ್ಳಿ ಆಭರಣಗಳಲ್ಲಿಯೂ ಬಗೆಬಗೆಯ ವಿನ್ಯಾಸಗಳು ಬಂದಿರುವುದರಿಂದ, ಬೋರಿಂಗ್ ಅನ್ನಿಸುವುದಿಲ್ಲ. ಬಣ್ಣ ಬಣ್ಣದ ದಾರಗಳಿಂದ ಮಾಡಿದ ಟ್ಯಾಸೆಲ್‌ಗಳು, ಮಿರರ್ ವರ್ಕ್, ಅಮೂಲ್ಯ ಕಲ್ಲುಗಳು, ಮಣಿ,ರತ್ನಗಳಂತೆ ಕಾಣುವ ವಸ್ತುಗಳು, ಗಾಜಿನ ಚೂರುಗಳು ಹಾಗೂ ಗೆಜ್ಜೆಗಳನ್ನು ಬಳಸಿ, ತಯಾರಿಸಲಾದ ಒಂದಕ್ಕಿಂತ ಒಂದು ಭಿನ್ನ ಹಾಗೂ ಸುಂದರವಾಗಿ ಕಾಣುವಂಥ ಆಭರಣಗಳು ಮಾರುಕಟ್ಟೆಯಲ್ಲಿವೆ. ಆನ್‌ಲೈನ್ ಮೂಲಕವೂ ಒಡವೆ ಖರೀದಿಸಬಹುದು. ಆದರೆ, ಖರೀದಿಸುವ ಮುನ್ನ ಗುಣಮಟ್ಟದ ಕಡೆ ಗಮನ ಕೊಡಿ. ಮಾಟಿ, ಕಿವಿಯೋಲೆ, ಮೂಗುತಿ, ಹಾರ, ಡಾಬು, ವಂಕಿ, ಸೊಂಟಪಟ್ಟಿ, ಸೀರೆಗೆ ಹಾಕುವ ಪಿನ್, ಬೀಗದ ಕೈಯಗುತ್ಛ, ಕಾಲುಂಗುರ, ಬಳೆ, ಉಂಗುರ ಸೇರಿದಂತೆ, ಎಲ್ಲಾ ಥರದ ಬೆಳ್ಳಿ ಆಭರಣಗಳು ಆನ್‌ಲೈನ್‌ನಲ್ಲಿ ದೊರೆಯುತ್ತವೆ. ಫ್ಯೂಷನ್ ಶೈಲಿ
ಅಫ್ಘಾನಿಸ್ಥಾನಿ ಮೂಲದ ಅಲೆಮಾರಿ ಜನಾಂಗದವರು ಲಂಬಾಣಿ, ಲಂಬಾಡಿ, ಬಂಜಾರ, ವಂಜಾರಿ ಹೆಸರುಗಳಿಂದ ಗುರುತಿಸಿಕೊಳ್ಳುತ್ತಾರೆ. ಈ ಜನಾಂಗದ ಮಹಿಳೆಯರು ತೊಡುವ ಬೆಳ್ಳಿ ಆಭರಣಗಳು ನೋಡಲು ಬಹಳ ಆಕರ್ಷಕವಾಗಿರುತ್ತವೆ. ಅದರಿಂದ ಪ್ರೇರಣೆ ಪಡೆದ ಆಭರಣ ವಿನ್ಯಾಸಕರು, ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿಯನ್ನು ಒಂದುಗೂಡಿಸಿ ಫ್ಯೂಷನ್ ಶೈಲಿಯ ಆಭರಣಗಳನ್ನು ಸೃಷ್ಟಿಸಿದ್ದಾರೆ. ಬೊಹೋ (ಬೊಹೆಮಿಯನ್) ಜೂಲ್ರಿ, ಜಂಕ್ಜೊಲ್ರಿ, ಇಂಡೋ-ವೆಸ್ಟರ್ನ್ ಜೂಲ್ರಿ ಮುಂತಾದ ಆಯ್ಕೆಗಳು ಫ್ಯೂಷನ್‌ಒಡವೆಗಳ ಹೆಸರಿನಲ್ಲಿ ದೊರೆಯುತ್ತವೆ. ಅಫ್ಘಾನಿಸ್ತಾನವಷ್ಟೇ ಅಲ್ಲ, ರಾಜಸ್ಥಾನ, ಗುಜರಾತ್, ಅಸ್ಸಾಂ ಮುಂತಾದ ಕಡೆಯ ಬುಡಕಟ್ಟು ಮತ್ತು ಅಲೆಮಾರಿ ಜನಾಂಗದವರ ಒಡವೆಗಳೇ ಈ ಫ್ಯೂಷನ್ ಸ್ಟೈಲ್‌ಗೆ ಪ್ರೇರಣೆ. ಸಿಲ್ವರ್ ಸ್ಟೈಲ್
-ರಿಪ್ಡ್ ಜೀನ್ಸ್, ಟ್ಯಾಂಕ್ ಟಾಪ್ ಮತ್ತು ಜೂತಿಗಳ ಜೊತೆ ಫ್ಯೂಷನ್ ಶೈಲಿಯ ಬೆಳ್ಳಿ ಜುಮುಕಿ ಧರಿಸಬಹುದು.
-ಬೆಳ್ಳಿಯ ಉಂಗುರ ಮತ್ತು ಕಡಗಗಳನ್ನು, ಜೆಗ್ಗಿಂಗ್ / ಫ್ಲೇರ್ಡ್ ಪ್ಯಾಂಟ್ /ಲೂಸ್ ಟಾಪ್ ಜೊತೆ ಮ್ಯಾಚ್ ಮಾಡಿ.
-ಆಫೀಸ್‌ವೇರ್ ಜೊತೆಗೂ ಬೆಳ್ಳಿ ಮ್ಯಾಚ್ ಆಗುತ್ತದೆ.
– ಗ್ರ್ಯಾಂಡ್ ಕ್ರಾಪ್ ಟಾಪ್ ಹಾಗೂ ಕಸೂತಿ ಇರುವ ಫ್ಲೇರ್x ಸ್ಕರ್ಟ್ ಜೊತೆಗೆ ಲಾಂಗ್ ಸಿಲ್ವರ್ ನೆಕ್‌ಲೇಸ್ ಧರಿಸಿ.
-ಬಿಳಿ ಕುರ್ತಾ ಜೊತೆ ಕಲರ್‌ಫುಲ್ ದುಪಟ್ಟಾ ತೊಟ್ಟು, ಕೈ ತುಂಬಾ ಬೆಳ್ಳಿ ಬಳೆಗಳನ್ನು/ ಕಡಗಗಳನ್ನು ಧರಿಸುವುದು ಈಗಿನ ಟ್ರೆಂಡ್ ಬೆಳ್ಳಿ ಟಿಪ್ಸ್
ಮೈ ಬೆವರು, ಧೂಳು, ಕೊಳೆಯಿಂದಾಗಿ ಬೆಳ್ಳಿ ಆಭರಣಗಳು ಹೊಳಪು ಕಳೆದುಕೊಳ್ಳುತ್ತವೆ. ಅದನ್ನು ತಡೆಯಲು ಈ ಟಿಪ್ಸ್‌ಗಳನ್ನು ಅನುಸರಿಸಬಹುದು.
– ಉಗುರು ಬೆಚ್ಚಗಿನ ನೀರಿಗೆ ಚಿಟಿಕೆ ಉಪ್ಪು ಸೇರಿಸಿ, ಅದರಲ್ಲಿ ಬೆಳ್ಳಿ ಆಭರಣಗಳನ್ನು ತೊಳೆಯಿರಿ.
-ಆಭರಣದಲ್ಲಿ ಹರಳುಗಳಿದ್ದರೆ ಉಪ್ಪುನೀರು ಬಳಸಬೇಡಿ.
-ಅಂಗಡಿಗಳಲ್ಲಿ ಸಿಗುವ ಸಿಲ್ವರ್ ಪಾಲಿಶರ್‌ಗಳನ್ನು ಬಳಸಬಹುದು.
-ಒಡವೆಗಳನ್ನು ಪೆಟ್ಟಿಗೆಯಲ್ಲಿ ಎತ್ತಿಡುವ ಮುನ್ನ, ಟಿಶ್ಯೂ ಪೇಪರ್‌ನಲ್ಲಿ ಒರೆಸಿ ಇಡಿ.
-ಪ್ರತಿ ಒಡವೆಗಳನ್ನು ಪ್ರತ್ಯೇಕವಾಗಿ ಟಿಶ್ಯೂ ಪೇಪರ್‌ನಲ್ಲಿ ಸುತ್ತಿಟ್ಟರೆ ಉತ್ತಮ.
-ಟೂತ್‌ಪೇಸ್ಟ್ ಅನ್ನು ನೀರಿನಲ್ಲಿ ಬೆರೆಸಿ, ಆ ಮಿಶ್ರಣದಿಂದ ಒಡವೆಗಳನ್ನು ತೊಳೆಯಬಹುದು. ಅದಿತಿಮಾನಸ ಟಿ.ಎಸ್.