Advertisement

ಕೇರಳದ ಚಿನ್ನ, ಕರ್ನಾಟಕದ ಡ್ರಗ್ಸ್‌!

12:56 AM Sep 10, 2020 | mahesh |

ಕೊಚ್ಚಿ: ಕೇರಳದ ಎಲ್‌ಡಿಎಫ್ ಸರ್ಕಾರದ ಪ್ರತಿಷ್ಠೆಗೆ ಮಸಿ ಬಳಿದಿರುವ ಬಹುಕೋಟಿ ಮೌಲ್ಯದ ಅಕ್ರಮ ಚಿನ್ನ ಸಾಗಣೆ ಪ್ರಕರಣಕ್ಕೂ ಕನ್ನಡ ಚಿತ್ರರಂಗದಲ್ಲಿ ಸ್ಫೋಟಗೊಂಡಿರುವ ಮಾದಕದ್ರವ್ಯ ಕೇಸಿಗೂ ಬಾಂಧವ್ಯ ಇರುವ ಅಂಶ ದೃಢಪಟ್ಟಿದೆ. ಚಿನ್ನದ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಕೊಚ್ಚಿಯ ವಿಶೇಷ ಕೋರ್ಟ್‌ಗೆ ಸಲ್ಲಿಸಿರುವ ವಿವರಗಳಲ್ಲಿ ಈ ಅಂಶ ಉಲ್ಲೇಖೀಸಲಾಗಿದೆ.

Advertisement

ಸ್ಯಾಂಡಲ್‌ವುಡ್‌ಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡಿದ ಆರೋಪದಲ್ಲಿ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್‌ಸಿಬಿ) ಈಗಾಗಲೇ ಅನೂಪ್‌ ಎಂಬಾತನನ್ನು ಬಂಧಿಸಿದೆ. ಆತ ಚಿನ್ನ ಸಾಗಣೆ ಪ್ರಕರಣದ ಆರೋಪಿಗಳಾದ ಸ್ವಪ್ನಾ ಸುರೇಶ್‌, ಸರಿತ್‌ ಪಿ.ಎಸ್‌.ಗೆ ನೆರವಾಗಿದ್ದಾನೆ. ಹೀಗಾಗಿ, ಬೆಂಗಳೂರಿನ ಡ್ರಗ್‌ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ವಿವರವನ್ನು ತಮ್ಮೊಂದಿಗೆ ಹಂಚಿಕೊಳ್ಳುವಂತೆ ಬೆಂಗಳೂರು ಎನ್‌ಸಿಬಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಕೋರ್ಟ್‌ಗೆ ಅರಿಕೆ ಮಾಡಿಕೊಳ್ಳಲಾ ಗಿದೆ. ಅತ್ಯಂತ ಪ್ರಭಾವಿ ವ್ಯಕ್ತಿ ಮಾದಕ ವಸ್ತು ಪೂರೈಕೆ ಜಾಲಕ್ಕೆ ನೆರವಾಗುತ್ತಿದ್ದಾರೆ ಎಂದೂ ಇ.ಡಿ. ಹೇಳಿದೆ.

ಬಿನೀಶ್‌ ಹಾಜರು: ಮತ್ತೂಂದು ಬೆಳವ ಣಿಗೆಯಲ್ಲಿ ಸ್ಯಾಂಡಲ್‌ವುಡ್‌ ಡ್ರಗ್‌ ಪ್ರಕರಣ ಸಂಬಂಧ ಕೇರಳದ ಗೃಹ ಖಾತೆ ಮಾಜಿ ಸಚಿವ ಕೊಡಿಯೇರಿ ಬಾಲ ಕೃಷ್ಣನ್‌ ಪುತ್ರ ಬಿನೀಶ್‌ ಕೊಡಿಯೇರಿ ಇ.ಡಿ. ಮುಂದೆ ವಿಚಾರಣೆಗೆ ಬುಧವಾರ ಹಾಜರಾಗಿದ್ದಾರೆ. ಬೆಂಗಳೂರಿನಲ್ಲಿ ಎನ್‌ಸಿಬಿಯಿಂದ ಬಂಧಿತರಾಗಿರುವ ಮೊಹ ಮ್ಮದ್‌ ಮತ್ತು ಅನೂಪ್‌ 2015ರಲ್ಲಿ ಕಮ್ಮನಹಳ್ಳಿಯಲ್ಲಿ ಹೊಟೇಲ್‌ ಉದ್ದಿಮೆ ಶುರು ಮಾಡಿದ್ದರು. ಈ ಉದ್ಯಮದಲ್ಲಿ ಬಿನೀಶ್‌ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದರು. ಹೀಗಾಗಿ, ಇವರ ನಂಟಿನ ಕುರಿತು ತನಿಖೆಯಾಗಬೇಕು ಎಂದು ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ನ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಫಿರೋಸ್‌ ಇತ್ತೀಚೆಗೆ ಆಗ್ರಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next