Advertisement

ಮತ್ತೆ ಹೊಳಪು ಪಡೆದ ಚಿನ್ನ : 250 ರೂ. ಜಿಗಿತ, 10 ಗ್ರಾಮಿಗೆ 31,550

03:47 PM Sep 29, 2018 | |

ಹೊಸದಿಲ್ಲಿ : ನಿರಂತರ ಮೂರು ದಿನಗಳ ಕಾಲ ಇಳಿಕೆಯ ಹಾದಿಯಲ್ಲಿದ್ದ ಚಿನ್ನ ಇಂದು ಮತ್ತೆ ತನ್ನ ಹೊಳಪನ್ನು ಪಡೆದುಕೊಂಡಿದೆ. ಹತ್ತು ಗ್ರಾಂ ಶುದ್ಧ ಚಿನ್ನದ ಬೆಲೆ ಇಂದು ಶನಿವಾರ 250 ರೂ. ಜಿಗಿತವನ್ನು ಕಂಡು 31,550 ರೂ. ತಲುಪಿದೆ. ಈ ಹಿನ್ನೆಲೆಯಲ್ಲಿ ಹೂಡಿಕೆ ಅವಕಾಶವನ್ನು ಕಂಡಿರುವ ಚಿನ್ನದ ಉದ್ಯಮಿಗಳು ವ್ಯಾಪಕ ಖರೀದಿಯಲ್ಲಿ ತೊಡಗಿಕೊಂಡಿರುವುದು ಕಂಡು ಬಂದಿದೆ. 

Advertisement

ಚಿನ್ನವನ್ನು ಅನುಸರಿಸಿ ಬೆಳ್ಳಿ ಕೂಡ ಇಂದು ಕೆಜಿಗೆ 1,100 ರೂ. ಜಿಗಿತವನ್ನು ಕಂಡು 39,000 ರೂ. ಗಡಿಯನ್ನು ದಾಟಿ ಕೆಜಿಗೆ 39,100 ರೂ. ತಲುಪಿದೆ. ಕೈಗಾರಿಕಾ ಘಟಕಗಳು ಮತ್ತು ನಾಣ್ಯ ಟಂಕಸಾಲೆಯವರಿಂದ ಬಂದ ಉತ್ತಮ ಖರೀದಿಯ ಪರಿಣಾಮವಾಗಿ ಬೆಳ್ಳಿ ಗಮನಾರ್ಹ ಏರಿಕೆಯನ್ನು ಕಂಡಿತು.

ಸಾಗರೋತ್ತರ ಮಾರುಕಟ್ಟೆಯಲ್ಲಿ ಸ್ಥಿರತೆಯ ಪ್ರವೃತ್ತಿ ತೋರಿ ಬಂದದ್ದೇ ಚಿನ್ನ ಮತ್ತು ಬೆಳ್ಳಿಯ ಧಾರಣೆಯಲ್ಲಿ ಜಿಗಿತ ಕಂಡು ಬರಲು ಕಾರಣವಾಯಿತೆಂದು ಉದ್ಯಮ ಪರಿಣತರು ಹೇಳಿದ್ದಾರೆ. 

ನ್ಯೂಯಾರ್ಕ್‌ ಮಾರುಕಟ್ಟೆಯಲ್ಲಿ ನಿನ್ನೆ ಶುಕ್ರವಾರ ಚಿನ್ನದ ಧಾರಣೆ ಶೇ.0.83ರಷ್ಟು ಏರಿದ ಪರಿಣಾಮವಾಗಿ ಔನ್ಸ್‌ ಚಿನ್ನದ ಬೆಲೆ 1,192.20 ಡಾಲರ್‌ಗೆ ಏರಿತು. ಬೆಳ್ಳಿ ಕೂಡ ಶೇ.2.85ರ ಏರಿಕೆಯನ್ನು ದಾಖಲಿಸಿ ಔನ್ಸ್‌ಗೆ 14.64 ಡಾಲರ್‌ಗೆ ಜಿಗಿಯಿತು. 

ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ  ಶೇ. 99.9 ಮತ್ತು ಶೇ.99.5 ಪರಿಶುದ್ಧತೆಯ 10 ಗ್ರಾಂ ಚಿನ್ನವು ತಲಾ 250 ರೂ. ಜಿಗಿತವನ್ನು ಕಂಡು ಅನುಕ್ರಮವಾಗಿ 31,550 ಮತ್ತು 31,400 ರೂ.ಗೆ ಏರಿತು. ಕಳೆದ ಮೂರು ದಿನಗಳ ವಹಿವಾಟಿನಲ್ಲಿ ಚಿನ್ನ ಗ್ರಾಮಿಗೆ 425 ರೂ. ಕುಸಿತವನ್ನು ಕಂಡಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next