Advertisement
ದುಡ್ಡಿದೆ ಚಿನ್ನ ಖರೀದಿಸಿ ಇಟ್ಟರಾಯಿತು ಎನ್ನುವವರೂ, ಅವರ ಬಳಿ ಇರುವ ಚಿನ್ನದ ಪ್ರಮಾಣವನ್ನು ಮುಚ್ಚಿಡುವ ಹಾಗಿಲ್ಲ. ಇದು ಒಂದು ಆಸ್ತಿ ಖರೀದಿಯ ಹಾಗೆ. ಅದಕ್ಕಾಗಿಯೇ ಚಿನ್ನದ ಬೆಲೆಯಲ್ಲಿ ಧಿಡೀರ್ ಏರಿಕೆ ಆಗುವುದಿಲ್ಲ. ಒಂದು ರೇಂಜಿನಲ್ಲಿ ವಹಿವಾಟಾಗುತ್ತಿದೆ. ಉಳಿತಾಯ ಮಾಡಲೇ ಬೇಕಿದ್ದರೆ ಇವತ್ತಿಗೂ ಬ್ಯಾಂಕಿನ ಆರ್.ಡಿ ಉಪಯುಕ್ತವಾಗಿ ಇದ್ದೇ ಇದೆ. ಮ್ಯೂಚುವಲ್ ಫಂಡ್‌ನ ಸಿಸ್ಟಮ್ಯಾಟಿಕ್ ಇನ್‌ವೆಸ್ಟ್‌ಮೆಂಟ್ ಪ್ಲಾನ್ (ಎಸ್.ಐ.ಪಿ.) ಸಣ್ಣ ಹೂಡಿಕೆದಾರರಿಗೆ, ಉಳಿತಾಯ ಮಾಡುವವರಿಗೆ ಸೂಕ್ತವಾಗಿದೆ.
Related Articles
Advertisement
ಲಾಭ ಕಡಿಮೆ.ಚಿನ್ನದ ಬೆಲೆ ಕಳೆದ 3-4 ವರ್ಷಗಳಿಂದ ತೀವ್ರ ಏರಿಕೆ ಕಾಣಲಿಲ್ಲ. ಈಗಾಗಲೇ ಏರಿರುವಾಗ ಇನ್ನಷ್ಟು ಏರುತ್ತದೆ ಎಂದು ಕಾಯುವುದು ತಪ್ಪು. ಕೆಳಗಿದ್ದಾಗ ಮೇಲೇರಲು ಅವಕಾಶ ಇರುತ್ತದೆ. ಅದೇ ಮೇಲೇರಿರುವಾಗ ಮತ್ತೆ ಏರುವುದಕ್ಕಿಂತ ಇಳಿಯುವ ಸಾಧ್ಯತೆ ಹೆಚ್ಚು. ಇದನ್ನು ಅರಿತಾಗ ಈಗ ಏರಿಕೆಯಲ್ಲಿರುವ ಚಿನ್ನದಲ್ಲಿ ಹಣ ಹೂಡಿಕೆ ಮಾಡಿದರೆ ಲಾಭ ಕಡಿಮೆ ಎನ್ನುವುದು ಯಾರಿಗಾದರೂ ಅರಿವಾಗುವ ವಿಚಾರ. ಇನ್ನೂ ಬೆಲೆ ಏರುತ್ತದೆಂದು ಭಾವಿಸಿ ಚಿನ್ನ ಖರೀದಿಸಿದವರು ಅಧಿಕ ಲಾಭ ಕಾಣಲಿಲ್ಲ. ಚಿನ್ನಕ್ಕೆ ಕೈಗಾರಿಕಾ ಬಳಕೆಯೂ ಹೆಚ್ಚಿಲ್ಲ. ಆಭರಣಕ್ಕೆ ಬೇರೆ ಲೋಹಗಳೂ ಬರುತ್ತಿದೆ. ಸರ್ಕಾರವಂತೂ ಚಿನ್ನದ ಆಮದು ಕಡಿಮೆ ಮಾಡಲು ಬೇರೆ ಬೇರೆ ಕ್ರಮ ತೆಗೆದುಕೊಂಡಿದೆ. ಈಗಂತೂ ಚಿನ್ನ ಖರೀದಿ ಕೂಡ ಲೆಕ್ಕಾಚಾರದ ವ್ಯಾಪ್ತಿಯಲ್ಲಿದೆ. ಬೇಕಾದಷ್ಟು ದುಡ್ಡಿದೆ ಚಿನ್ನ ಖರೀದಿಸಿ ಇಟ್ಟರಾಯಿತು ಎನ್ನುವವರೂ ಅವರ ಬಳಿ ಇರುವ ಚಿನ್ನದ ಪ್ರಮಾಣವನ್ನು ಮುಚ್ಚಿಡುವ ಹಾಗಿಲ್ಲ. ಇದು ಒಂದು ಆಸ್ತಿ ಖರೀದಿಯ ಹಾಗೆ. ಅದಕ್ಕಾಗಿಯೇ ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ ಆಗುವುದಿಲ್ಲ. ಒಂದು ರೇಂಜಿನಲ್ಲಿ ವಹಿವಾಟಾಗುತ್ತಿದೆ. ಉಳಿತಾಯ ಮಾಡಲೇ ಬೇಕಿದ್ದರೆ ಇವತ್ತಿಗೂ
ಬ್ಯಾಂಕಿನ ಆರ್.ಡಿ ಉಪಯುಕ್ತವಾಗಿ ಇದ್ದೇ ಇದೆ. ಮ್ಯೂಚುವಲ್ ಫಂಡ್‌ನ ಸಿಸ್ಟಮ್ಯಾಟಿಕ್ ಇನ್‌ವೆಸ್ಟ್‌ಮೆಂಟ್ ಪ್ಲಾನ್ (ಎಸ್.ಐ.ಪಿ.) ಸಣ್ಣ ಹೂಡಿಕೆದಾರರಿಗೆ, ಉಳಿತಾಯ ಮಾಡುವವರಿಗೆ ಸೂಕ್ತವಾಗಿದೆ. ಕಮಾಡಿಟಿ ವಹಿವಾಟು
ಚಿನ್ನವನ್ನು ಹೂಡಿಕೆಯ ದೃಷ್ಟಿಯಿಂದ,ಉಳಿತಾಯದ ದೃಷ್ಟಿಯಿಂದ ನೋಡುವಂತೆ ಚಿನ್ನ ಕೂಡ ಒಂದು ಕಮಾಡಿಟಿಯಾಗಿ. ಇದು ಅತಿ ಹೆಚ್ಚು ವಹಿವಾಟಾಗುತ್ತದೆ. ವಾಯದಾ ಪೇಟೆಯಲ್ಲಿಯೂ ಚಿನ್ನದ ವಹಿವಾಟಿದೆ. ಚಿನ್ನದ ಬಾಂಡ್‌ಗಳ ವಹಿವಾಟಿದೆ. ಕಮಾಡಿಟಿ ಮಾರುಕಟ್ಟೆಯಲ್ಲಿ ವಹಿವಾಟಾಗುವುದರಿಂದ ಚಿನ್ನದ ಬೆಲೆಯಲ್ಲಿ ಏರಿಳಿತವನ್ನು ಕಾಣುತ್ತಿದ್ದೇವೆ. ಷೇರುಗಳು ವಹಿವಾಟಾದಂತೆ ಇದು ಈಗ ಹೆಚ್ಚು ಜನಪ್ರಿಯ ಕಮಾಡಿಟಿಯಾಗಿದೆ. ಇದರೊಂದಿಗೆ ಬೆಳ್ಳಿಯ ವಹಿವಾಟೂ ಇದೆ. ವಹಿವಾಟುದಾರರು ಚಿನ್ನ ಬೆಳ್ಳಿಯನ್ನು ಇಂತಹ ವಹಿವಾಟಾಗಿ ನೋಡಿದಾಗ ಅದು ಹೂಡಿಕೆಯಾಗದೇ ಕೇವಲ ವಹಿವಾಟಾಗುತ್ತದೆ. ಚಿನ್ನ ಬೆಳ್ಳಿಯ ವ್ಯಾಪ್ತಿ ಹಿಗ್ಗಿದೆ. ನಮ್ಮ ಆಯ್ಕೆ ಏನು?
ಹಾಗಾದರೆ ಈಗ ನಮ್ಮ ಆಯ್ಕೆ ಯಾವುದು. ನಮಗೆ ಹಣದ ಉಳಿತಾಯ ಆಗಬೇಕಾ? ಉಳಿಸಿದ ಹಣ ಮತ್ತೆ ಬೆಳೆಯ ಬೇಕಾ ಅಥವಾ ಕೇವಲ ಚಿನ್ನ ಖರೀದಿಸಿ ಮನೆಯಲ್ಲಿ ಇರಲಿ ಯಾವಾಗಾದರೂ ಆಭರಣವಾಗಲಿ, ಇಲ್ಲ ಸ್ಥಿರ ಆಸ್ಥಿಯಂತೆ ಇದೂ ಇರಲಿ ಎಂದು ಭಾವಿಸುತ್ತೀರಾ? ಇಂತಹ ಹಲವು ಆಯ್ಕೆಗಳು ಎದುರಿಗಿದೆ. ಮೊದಲು ನಮಗೆ ನಮ್ಮ ಹಣಕಾಸಿನ ಶಿಸ್ತು ಇದ್ದರೆ ಹಣಕಾಸು ನಿರ್ವಹಣೆ ಸುಲಭ. ಈಗ ಏನನ್ನೇ ಆದರೂ ಬೆರಳ ತುದಿಯಲ್ಲಿ ಕೊಳ್ಳಬಹುದು. ಅಷ್ಟು ಸುಲಭ, ಸರಳ.
ನೆನಪಿಡಬೇಕು; ಹಾಗಾಗಿಯೇ ಕಷ್ಟವೂ ಆಗಿದೆ. ಹಲವು ಆಯ್ಕೆಗಳಿವೆ ನಿಜ, ಆದರೆ ಇದನ್ನೆಲ್ಲ ಆಯ್ಕೆ ಮಾಡಿಕೊಳ್ಳುವಾಗ ನಮಗೆ ಇವುಗಳ ಬಗೆಗೆ ಅರಿವಿರಬೇಕು. ಹಳೆಯ ಕಾಲದ ಯೋಚನಾ ಕ್ರಮದಿಂದ ನಾವು ಹೊರ ಬರಬೇಕು. ಹೊಸ ಕಾಲದ ಬದಲಾವಣೆಗೆ, ಈಗಿರುವ ಅವಕಾಶಕ್ಕೆ ತೆರೆದುಕೊಂಡಾಗ ಹೂಡಿಕೆಯ, ಉಳಿತಾಯದ ಇನ್ನಷ್ಟು ದಾರಿಗಳು ಸುಲಭವಾಗಿ ಸಿಗುತ್ತದೆ. ಉಳಿತಾಯ
ಸ್ನೇಹಿತರೊಬ್ಬರಿಗೆ ಆಫೀಸಿನಲ್ಲಿ ಸಂಬಳ ಹೆಚ್ಚಾಯಿತು. ಅಂತಹ ಸಂದರ್ಭದಲ್ಲಿ ಎಲ್ಲರೂ ಕೇಳುವ ಹಾಗೆ ನಾನೂ ಕೇಳಿದೆ ಹೆಚ್ಚಿಗೆ ಹಣ ಬಂತಲ್ಲಾ ಏನು ಮಾಡಿದಿರಿ? ಏನಾದರೂ ಇನ್‌ವೆಸ್ಟ್ ಮಾಡಬಹುದಲ್ಲಾ? ಅದಕ್ಕವರು ಅಂದರು. ಚಿನ್ನವನ್ನು ಕೊಂಡೆವು. ಚಿನ್ನದ ಗಟ್ಟಿಯ ರೂಪದಲ್ಲಾ? ನಾನು ಕೇಳಿದೆ “ಇಲ್ಲಾ ಆಭರಣವೇ. ಚಿನ್ನದ ಆಭರಣ. ಇದರಲ್ಲಿ ವೇಸ್ಟೇಜ್ ಕಳೆಯಲ್ಲ ಅಂದಿದ್ದಾರೆ, ಯಾವಾಗಾದರೂ ಹಾಕಿಕೊಳ್ಳೋದಕ್ಕೂ ಆಗತ್ತೆ. ಚಿನ್ನದ ಗಟ್ಟಿ ಆದರೆ ಸುಮ್ಮನೇ ಮನೆಯಲ್ಲಿ ಇಡಬೇಕಲ್ಲಾ? ಇದು ಹಾಗಾದರೆ ಹೂಡಿಕೆ ಅಲ್ಲ ‘ ಅಂದೆ ಹೌದು, ನನಗೂ ಅನ್ನಿಸಿತು ಆದರೆ ಏನು ಮಾಡೋದು ಚಿನ್ನದ ಮೇಲಿನ ವ್ಯಾಮೋಹ ನೋಡಿ. ಅವರು ನಕ್ಕರು. ಕಷ್ಟ ಕಾಲಕ್ಕೆ ಆಗತ್ತೆ ಎಂದು ಆಭರಣ ಕೊಳ್ಳುವುದು ಹೂಡಿಕೆ ಅಲ್ಲ. ಚಿನ್ನದ ಮೇಲೆ ಹೂಡಿಕೆ ಮಾಡಿದರೂ ಲಾಭ ಬಂದಾಗ ಮಾರುವುದೂ ಇಲ್ಲ. ಯಾವುದೇ ಹೂಡಿಕೆ ಎಂದಾಗ ಲಾಭವನ್ನು ಮರು ಬಳಕೆ ಮಾಡಿಕೊಳ್ಳಬೇಕು. ಇಲ್ಲವಾದರೆ ಅದನ್ನು ಮರು ಹೂಡಿಕೆ ಮಾಡಬೇಕು. ಈ ಮೂಲಕ ಹೂಡಿಕೆಯ ಮೊತ್ತ ಹೆಚ್ಚುತ್ತದೆ. ಹೂಡಿಕೆಯ ಉದ್ದೇಶವೇ ಒಟ್ಟೂ ಮೊತ್ತದಲ್ಲಿ ಆಗುವ ಏರಿಕೆ. ಆದರೆ ಗಮನಿಸಿ; ಚಿನ್ನವನ್ನು ಕೊಳ್ಳುವಾಗ ಯಾರೂ ಸುಮ್ಮ ಸುಮ್ಮನೇ ಮಾರುವುದಿಲ್ಲ. ಬದಲಾಗಿ ಇರಲಿ ಬಿಡಿ ಎನ್ನುತ್ತಾರೆ. ಹಳದಿ ಲೋಹದ ಮೋಹವೇ ಹಾಗೆ. ಕಷ್ಟ ಕಾಲದಲ್ಲಿ ಆಗುತ್ತದೆ ಎನ್ನುತ್ತಾರೆ. ಹಾಗಾಗಿ ಚಿನ್ನದ ಮೇಲಿನ ಹೂಡಿಕೆಯ ಲಾಭವೂ ಒಂದು ಭಾವನಾತ್ಮಕವೇ ಹೊರತು ನಿಜದಲ್ಲಿ ಅನುಭವಿಸುವವರ ಸಂಖ್ಯೆ ಕಡಿಮೆಯೇ. ಇಷ್ಟಾಗಿಯೂ ಹಣವನ್ನು ಬಟ್ಟೆಗೋ, ದಿನ ನಿತ್ಯದ ವಸ್ತುಗಳಿಗೋ, ಸೋಫಾ ಇತ್ಯಾದಿಗಳಿಗೋ ಬಳಸಿದ್ದರೆ ಅದು ವ್ಯರ್ಥವಾಗುತಿತ್ತು. ಬದಲಾಗಿ ಹೀಗೆ ಚಿನ್ನಕ್ಕೆ ಹಾಕಿರುವುದು ಉಳಿತಾಯ ಆದದ್ದು ಸುಳ್ಳಲ್ಲ. ಚಿನ್ನ ಹೂಡಿಕೆ ಆಗದಿದ್ದರೂ ಉಳಿತಾಯದ ದಾರಿಯಾಗುತ್ತಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಚಿನ್ನಕೊಳ್ಳುವ ನಮ್ಮ ಮೋಹ ಹೀಗೆ ಉಳಿತಾಯದ ಇನ್ನೊಂದು ಮಾರ್ಗವಾಗುತ್ತಿದೆ. ಆದರೆ ಸಾಲ ಮಾಡಿ ಚಿನ್ನ ಖರೀದಿಸುವುದು ಮಾತ್ರ ಸೂಕ್ತವಲ್ಲವೇ ಅಲ್ಲ. – ಸುಧಾಶರ್ಮಾ ಚವತ್ತಿ