Advertisement

“ಬಾಲಗೋಕುಲದಿಂದ ಸಂಸ್ಕಾರಯುತ ವ್ಯಕ್ತಿತ್ವ ನಿರ್ಮಾಣ’

11:27 PM Jan 23, 2020 | sudhir |

ಮಂಜೇಶ್ವರ: ಸೇವಾಭಾರತಿಯಿಂದ ಮಂಜೇಶ್ವರ ತಾಲೂಕು ಬಾಲಗೋಕುಲಗಳ “ಗೋಕುಲೋತ್ಸವ’ ಕುಬಣೂರು ಶ್ರೀ ರಾಮ ಎ.ಯು.ಪಿ ಶಾಲೆಯಲ್ಲಿ ನಡೆಯಿತು.

Advertisement

ಬಾಲಗೋಕುಲಗಳ ಮಕ್ಕಳಿಂದ ಶ್ರೀ ಸತ್ಯನಾರಾಯಣ ಭಜನ ಮಂದಿರದಿಂದ ಶ್ರೀ ರಾಮ ಎಯುಪಿ ಶಾಲೆ ಕುಬಣೂರು ತನಕ ಶೋಭಾಯಾತ್ರೆ ನಡೆಯಿತು. ಅನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ “ಗೋಕುಲೋತ್ಸವ’ದ ಉದ್ಘಾಟನೆಯನ್ನು ಕುಬಣೂರು ಶ್ರೀ ರಾಮ ಎ.ಯು.ಪಿ. ಶಾಲೆಯ ಮುಖ್ಯೋಪಾಧ್ಯಾಯಿನಿ ಅರುಣಾ ಕೆ. ದೀಪ ಪ್ರಜ್ವಲನದ ಮೂಲಕ ನಡೆಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಶೆಟ್ಟಿ, ಬಾಲಗೋಕುಲ ತಾಲೂಕು ಪ್ರಮುಖ್‌ ರಾಮಚಂದ್ರ ಭಟ್‌ ಹಳೆಮನೆ ಉಪಸ್ಥಿತರಿದ್ದರು.

ಉದ್ಘಾಟನೆ ಸಂದರ್ಭದಲ್ಲಿ ಪ್ರಾಸ್ತಾವಿಕ ಭಾಷಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾಲೇಜು ವಿದ್ಯಾರ್ಥಿ ಪ್ರಮುಖ ಪುರುಷೋ ತ್ತಮ ಪ್ರತಾಪನಗರ ಮಾತನಾಡುತ್ತಾ ಧರ್ಮದ ರಕ್ಷಣೆ ಸಂಸ್ಕಾರಯುತ ವ್ಯಕ್ತಿಗಳಿಂದ ಆಗಬೇಕಿದೆ. ಅಂತಹ ಸಂಸ್ಕಾರಯುತ ವ್ಯಕ್ತಿ ಸಮಾಜ ನಿರ್ಮಾಣದ ಕೆಲಸ ಬಾಲಗೋಕುಲ ಗಳಿಂದ ಆಗುತ್ತಿದೆ. ಇಂದು ನಾವು ಒಬ್ಬ ವ್ಯಕ್ತಿಯ ಕುಟುಂಬದಿಂದ ಹಿಡಿದು ಇಡೀ ರಾಷ್ಟ್ರಕ್ಕೆ ಸಂಬಂ ಧಿಸಿದಂತೆ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಈ ಎಲ್ಲ ಸಮಸ್ಯೆಗಳಿಗೆ ವ್ಯಕ್ತಿಯೇ ಕಾರಣ. ಆದರೆ ವ್ಯಕ್ತಿ ಸಂಸ್ಕಾರವಂತನಾಗಿ ಆತ್ಮಕ್ಕೆ ಪೂರಕವಾಗಿ ಬದುಕಿದಾಗ ವ್ಯಕ್ತಿಯ ಜೀವನಕ್ಕೆ ಸರಿಯಾದ ದಿಕ್ಕು ಸಿಗಲು ಸಾಧ್ಯ. ಈ ಬಾಲಗೋಕುಲಗಳ ಮೂಲಕ ಬಾಲ್ಯದಿಂದಲೇ ಹಿಂದೂ ಸಂಸ್ಕಾರ ಕಲಿಸಿ ಕೊಡುವ ಕೆಲಸ ಆಗುತ್ತಿದೆ ಎಂದು ಹೇಳಿದರು.

ಬಳಿಕ ಬಾಲಗೋಕುಲಗಳ ಮಕ್ಕಳಿಗೆ ದೇಶ ಭಕ್ತಿಗೀತೆ, ವಂದೇ ಮಾತರಂ ಹಾಡುವ ಸ್ಪರ್ಧೆ, ಕುಣಿತ ಭಜನೆ ಹಾಗೂ ವಿವಿಧ ಆಟಗಳ ಸ್ಪರ್ಧೆಗಳು ನಡೆದವು. ಗೋಕುಲೋತ್ಸವದಲ್ಲಿ ಮಂಜೇಶ್ವರ ತಾಲೂಕಿನ 27 ಬಾಲಗೋಕುಲಗಳ ಒಟ್ಟು 436 ಮಕ್ಕಳು ಭಾಗವಹಿಸಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ರಾಮ ಎಯುಪಿ ಶಾಲೆಯ ಸಂಚಾಲಕಿ ಮೋಕ್ಷದಾ ಬಿ. ಶೆಟ್ಟಿ ವಹಿಸಿದ್ದರು. ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರು ಸಮಾರೋಪ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಆರೆಸ್ಸೆಸ್‌ನ ಪ್ರಾಂತ ಸೇವಾ ಪ್ರಮುಖ್‌ ಸುಬ್ರಾಯ ನಂದೋಡಿ ಉಪಸ್ಥಿತರಿದ್ದರು.

Advertisement

ವಿವಿಧ ಸ್ಪರ್ಧೆಗಳಲ್ಲಿ ಗೆದ್ದ ಬಾಲಗೋಕುಲಗಳ ಮಕ್ಕಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next