Advertisement
ಸಾಯನ್ ಪೂರ್ವದ ಗೋಕುಲ ಸಭಾಗೃಹದಲ್ಲಿ ಮಂಗಳವಾರ ಗೋಕುಲದ ಬ್ರಹ್ಮಕಲಶೋತ್ಸವ ಸಮಾರಂಭದ ಮೂರನೇ ದಿನದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ಬಳಿಕ ಡಾ| ಶ್ರೀಪಾದ್ ಭಟ್ ಪರಿಕಲ್ಪನೆ, ನಿರ್ದೇಶನದ ಅವಳ ಕಗಡ ರಬೀಂದ್ರನಾಥ ಠಾಗೋರ್ ಕಥೆಯ ನಾಟಕೀಯ ತುಣುಕನ್ನು ಅಹಲ್ಯಾ ಬಲ್ಲಾಳ್ ಪ್ರಸ್ತುತಪಡಿಸಿದರು ಗೋಕುಲದ ಕಲಾವಿದರು ನ್ಯಾಯವಾದಿ ಗೀತಾ ಆರ್.ಎಲ್. ಭಟ್ ನಿರ್ದೇಶನದಲ್ಲಿ ಕೃಷ್ಣ ಲೀಲೆ – ಕಂಸ ವಧೆ ಯಕ್ಷಗಾನ ಪ್ರದರ್ಶಿಸಿದರು.
ಬಿಎಸ್‌ಕೆಬಿ ಅಸೋಸಿಯೇಶನ್ ಮತ್ತು ಗೋಪಾಲ ಕೃಷ್ಣ ಪಬ್ಲಿಕ್ ಟ್ರಸ್ಟ್‌ನ ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್ ಕಟೀಲು, ಬಿಎಸ್‌ಕೆಬಿ ಉಪಾಧ್ಯಕ್ಷ ವಾಮನ ಹೊÙ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರಭಾಕರ ಎಲ್. ಶೆಟ್ಟಿ, ಡಾ| ಸುರೇಂದ್ರಕುಮಾರ್ ಹೆಗ್ಡೆ, ಪದ್ಮನಾಭ ಸಸಿಹಿತ್ಲು, ಯು.ಬಿ. ಆನಂದ ಶೆಟ್ಟಿ, ಬಿ. ವಿವೇಕ್ ಶೆಟ್ಟಿ, ಶ್ಯಾಮ ಎನ್. ಶೆಟ್ಟಿ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‌ನ ಕಾರ್ಯದರ್ಶಿ ಎ.ಪಿ.ಕೆ. ಪೋತಿ, ಜತೆ ಕಾರ್ಯದರ್ಶಿಗಳಾದ ಪಿ.ಸಿ.ಎನ್. ರಾವ್ ಮತ್ತು ಚಿತ್ರಾ ಮೇಲ್ಮನೆ, ಜತೆ ಕೋಶಾಧಿಕಾರಿ ಪಿ.ಬಿ. ಕುಸುಮಾ ಶ್ರೀನಿವಾಸ್, ಮಹಿಳಾ ವಿಭಾಗಧ್ಯಕ್ಷೆ ಐ.ಕೆ. ಪ್ರೇಮಾ ಎಸ್. ರಾವ್, ವಿಜಯಲಕ್ಷಿ ¾à ಸುರೇಶ್ ರಾವ್, ಡಾ| ಶ್ರುತಿ ಕೃಷ್ಣಮೂರ್ತಿ ಹೆಬ್ಟಾರ್ ಮತ್ತಿತರ ಪದಾಧಿಕಾರಿಗಳು, ಸದಸ್ಯರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಶ್ರೀಕೃಷ್ಣ ದೇವರ ಕೃಪೆಗೆ ಪಾತ್ರರಾದರು.
ಭಾರತಿ ಉಡುಪ ಪ್ರಾರ್ಥನೆಗೈದರು. ಉಪಾಧ್ಯಕ್ಷೆ ಶೈಲಿನಿ ರಾವ್ ಸ್ವಾಗತಿಸಿದರು. ಡಾ| ಅಧಿತಿ ಆರ್.ಎಲ್. ಭಟ್ ಸಭಾ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಸಿಎ ಹರಿದಾಸ ಭಟ್ ವಂದಿಸಿದರು.
ನನಗೆ ಧಾರ್ಮಿಕತೆಯ ಅನುಭವವಿಲ್ಲ. ಆದರೆ ಜೀವನ ಏನೆಂದು ತಿಳಿದಿದ್ದೇನೆ. ನಮ್ಮ ಕುಟುಂಬಸ್ಥರ ಎಲ್ಲ ಧಾರ್ಮಿಕ ವಿಧಿಗಳು ಹಳೇ ಗೋಕುಲದಲ್ಲಿ ನೇರವೇರಿವೆ. ಇಂತಹ ಗೋಕುಲ ಶ್ರೀಕೃಷ್ಣನ ಮಂದಿರವಾಗಿ ಸಿದ್ಧಗೊಂಡಿರುವುದು ಅಭಿಮಾನ ಎನಿಸುತ್ತದೆ.–ಸದಾಶಿವ ರಾವ್, ಸಿಇಒ, ಎನ್‌ಐಐಎಫ್ ಇನ್‌ಫ್ರಾಸ್ಟ್ರಕ್ಚರ್ ಫೈನಾನ್ಸ್ ಲಿ.
ಮಹಾರಾಷ್ಟ್ರದವರಿಗೆ ಕರ್ನಾಟಕದ ಜನತೆ ಎಷ್ಟು ಆಧ್ಯಾತ್ಮಿಕರು ಎಂದು ತೋರಿಸಿದ್ದೇವೆ. ಈ ಗೋಕುಲವನ್ನು ಇಷ್ಟೊಂದು ದೊಡ್ಡದಾಗಿ ನಿರ್ಮಿಸಿದ ಡಾ| ಸುರೇಶ್ ರಾವ್ ಬಳಗವು ಶಕ್ತಿಶಾಲಿ ಆಗಿದೆ. ಅಖಂಡ ಬ್ರಾಹ್ಮಣ ಕುಲಕ್ಕೆ ಡಾ| ಸುರೇಶ್ ರಾವ್ ಕುಲ ತಿಲಕರಾಗಿದ್ದಾರೆ. ಗೋಕುಲ ಸಭಾಗೃಹವನ್ನು ಶ್ರೀ ಗೋಪಾಲಕೃಷ್ಣನ ದೇವಾಲಯವನ್ನಾಗಿ ಪರಿವರ್ತಿಸಿರುವುದು ದೊಡ್ಡ ಸಾಧನೆ.–ಡಾ| ಶಂಕರ್ ಶೆಟ್ಟಿ ವಿರಾರ್ ಅಧ್ಯಕ್ಷರುಫೆಡರೇಶನ್ ಆಫ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ಸ್ ಮಹಾರಾಷ್ಟ್ರ
ಮುದ್ದು ಕೃಷ್ಣ ಮತ್ತು ನಮ್ಮ ಕುಟುಂಬಿಕರಿಗೆ ಅತ್ಯಂತ ನಂಟು. ಈ ಗೋಕುಲದ ಪುನರ್ ಪ್ರತಿಷ್ಠೆಯಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿರುವುದೇ ನನ್ನ ಸೌಭಾಗ್ಯ. ನಮಗೆ ಎಲ್ಲ ತರಹ ಮಾಧ್ಯಮವೇ ಗೋಕುಲವಾಗಿದೆ. ಆದುದರಿಂದ ನಮಗೆ ರಾಮಾವತಾರಕ್ಕಿಂತ ಕೃಷ್ಣಾವತಾರವೇ ಪ್ರಧಾನ. –ಉಷಾ ಚಡಗ, ಸಂಸ್ಕೃತ ವಿದ್ವಾಂಸೆ