Advertisement

Gokarna; ಸೆ. 27,28,29 ರಂದು ಪ್ರಧಾನಿ ಮೋದಿ ಹೆಸರಲ್ಲಿ ಮಹಾರುದ್ರಯಾಗ

05:28 PM Sep 22, 2023 | Team Udayavani |

ಕಾರವಾರ : ಶಿವನ ಆತ್ಮಲಿಂಗ ಇರುವ ಪುಣ್ಯಕ್ಷೇತ್ರ ಗೋಕರ್ಣದಲ್ಲಿ ಸೆ 27,28,29 ರಂದು ಮೂರು ದಿನಗಳ ಕಾಲ ಮಹಾರುದ್ರ ಯಾಗ ಮಾಡುತ್ತಿರುವುದಾಗಿ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಹೇಳಿದರು‌ .

Advertisement

ಕಾರವಾರದ ಪತ್ರಿಕಾಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಮಾಡಿದ ಅವರು ಮೋದಿ ಅವರಿಗೆ ಹೆಚ್ಚಿನ ಆಯುಷ್ಯ, ಆರೋಗ್ಯ ಕೊಡಲಿ ಎಂದು ಮಹಾರುದ್ರ ಯಾಗ ಮಾಡಲಾಗುತ್ತಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು, ಮೋದಿ ಪ್ರಧಾನಿ ಆಗಲೆಂದು ಯಾಗ ಹಮ್ಮಿಕೊಂಡಿದ್ದೇನೆ. ನೂರಾರು ವೈದಿಕರಿಂದ ಮೂರು ದಿನಗಳ ಕಾಲ ಪೂಜಾ ಕಾರ್ಯಾಕ್ರಮ ನಡೆಯಲಿದೆ. ಮೋದಿ ಅಭಿಮಾನಿಗಳು ಸಾರ್ವಜನಿಕರು ಆಗಮಿಸಿ ಮೋದಿ ಅವರಿಗಾಗಿ ಪ್ರಾರ್ಥಿಸುವಂತೆ ಅವರು ಮನವಿ ಮಾಡಿದರು.ಮೋದಿ ,ಅಮಿತ್ ಶಾ ಅವರಿಗೂ ಆಮಂತ್ರಣ ಹೋಗಿದೆ. ಅವರು ಬರದಿದ್ದರೂ, ಅವರ ಸಂದೇಶ ಬರಲಿದೆ ಎಂದರು.

ಅನಂತಮೂರ್ತಿ ಚಾರಿಟೇಬಲ್ ಟ್ರಸ್ಟ್ ಮೂಲಕ ನಾನಾ ಸಮಾಜಸೇವಾ ಕಾರ್ಯ ಮಾಡುತ್ತಾ ಬಂದಿದ್ದೆನೆ. ಮೊದಲು ಸಾಮಾಜಿಕ ಸೇವೆಯನ್ನ ಕೇವಲ ಬೆಂಗಳೂರಿನ ಯಶವಂತಪುರದಲ್ಲಿ ಮಾತ್ರ ಮಾಡುತ್ತಿದ್ದೆ. ಆದರೆ ಈಗ ಶಿರಸಿಗೂ ವ್ಯವಹಾರ ವಿಸ್ತರಿಸಿದ್ದು ಜಿಲ್ಲೆಯಲ್ಲಿ ಸಾಮಾಜಿಕ ಸೇವಾ ಕಾರ್ಯಕ್ರಮ ಮಾಡುತ್ತಿದ್ದೇವೆ. ಮುಂದಿನ ದಿನದಲ್ಲಿ ಕಿತ್ತೂರು,‌ ಖಾನಾಪುರ ಭಾಗದಲ್ಲಿಯೂ ಸಹ ಸಾಮಾಜಿಕ ಮಾಡುವೆ ಎಂದರು‌. 43 ಶಾಲೆಗಳಿಗೆ ಶುದ್ಧ ನೀರಿನ ಘಟಕ ಮಾಡಿಸಿದ್ದೇನೆ. ಬಸ್ ನಿಲ್ದಾಣಗಳಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡುತ್ತಿದ್ದೇನೆ. ಆಟೋ ಚಾಲಕರ ಕ್ಷೇಮಾಭಿವೃದ್ಧಿಗೆ ಕೆಲಸ ಮಾಡುತ್ತಿರುವೆ. ಆಟೋ ಚಾಲಕರಲ್ಲಿ ಎಲ್ಲಾ ಧರ್ಮದವರು ಇದ್ದಾರೆ. ಅವರಿಗೆ ನೆರವು ನೀಡುವಲ್ಲಿ ನನಗೆ ಸಮಾಧಾನವಿದೆ ಎಂದರು. ಸಾಮಾಜಿಕ ಸೇವೆ ಮಾಡುವ ಮನಸು ಬಂತು, ಮಾಡಲು ಆರಂಭಿಸಿದೆ.‌ ಇದರ ಹಿಂದೆ ರಾಜಕೀಯ ಉದ್ದೇಶವಿಲ್ಲ ಎಂದರು.‌

ಯೋಗ್ಯತೆ ಇದ್ದರೆ ಯೋಗ
ಯೋಗ್ಯತೆ ಇದ್ದರೆ ಯೋಗ ತಾನಾಗಿಯೇ ಬರಲಿದೆ.‌ ನನ್ನ‌ ಹಣೆಬರಹದಲ್ಲಿ ಎಂಪಿ ಟಿಕೆಟ್ ಸಿಗಬೇಕು ಅಂತಿದ್ದರೆ ,ಅದು ತಾನಾಗಿಯೇ ಒಲಿದು ಬರಲಿದೆ. ನಾನಾಗಿಯೇ ಟಿಕೆಟ್ ಕೇಳಲ್ಲ. ಅವರಾಗಿಯೇ ಕೊಟ್ಟರೆ ಬಿಡಲ್ಲ. ಚುನಾವಣೆ ಎದುರಿಸುವೆ ಎಂದರು.

ರಾಜಕೀಯ ಕಾರಣಕ್ಕೆ ಸಾಮಾಜಿಕ ಸೇವೆ ಮಾಡುತ್ತಿಲ್ಲ. ಉದ್ಯಮದಲ್ಲಿ ಬಂದ ಲಾಭದ ಒಂದಂಶವನ್ನು ಜನತೆಗೆ ಬಳಸುತ್ತಿದ್ದೇನೆ. ಮುಂದೆ ಪೌರಕಾರ್ಮಿಕರ ಹಿತಕ್ಕೆ ಕೆಲಸ ಮಾಡುವೆ ಎಂದರು‌ . ಕಾರವಾರ, ಅಂಕೋಲಾ, ಸಿದ್ದಾಪುರ ಆಟೋ ಚಾಲಕರಿಗೆ ಬಟ್ಟೆ , ಇನ್ಸುರೆನ್ಸ್ ವಿಷಯದಲ್ಲಿ ಸಹಾಯ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದರು. ಅವರ ಜತೆ ಸಂತೋಷ ನಾಯ್ಕ ಬ್ಯಾಗದ್ದೆ ಇದ್ದರು‌.

Advertisement
Advertisement

Udayavani is now on Telegram. Click here to join our channel and stay updated with the latest news.

Next