Advertisement

ಗೋಕಳ್ಳರ ಪರೇಡ್‌: ಗೂಂಡಾ ಕಾಯ್ದೆ ಜರಗಿಸುವ ಎಚ್ಚರಿಕೆ

09:35 PM Jul 15, 2019 | Sriram |

ಉಡುಪಿ: ಜಿಲ್ಲೆಯಲ್ಲಿ ದಾಖಲಾದ ಗೋಕಳ್ಳತನ ಹಾಗೂ ಅಕ್ರಮ ಗೋಸಾಗಾಟ ಪ್ರಕರಣಗಳಲ್ಲಿ ಭಾಗಿಯಾ ದವರ ಪರೇಡನ್ನು ಉಪವಿಭಾಗವಾರು ನಡೆಸಲಾಯಿತು.

Advertisement

ಕುಂದಾಪುರ ಉಪ ವಿಭಾಗ
ಕುಂದಾಪುರ ಉಪವಿಭಾಗದ ಪರೇಡನ್ನು ಕುಂದಾಪುರದ ರಕ್ತೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಸಲಾಯಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ…, ಕುಂದಾಪುರ ಪೊಲೀಸ್‌ ಉಪವಿಭಾಗಾಧಿಕಾರಿ ಬಿ.ಪಿ. ದಿನೇಶ್‌ ಕುಮಾರ್‌ ಮತ್ತು ಕುಂದಾಪುರ ಉಪ ವಿಭಾಗದ ಪೊಲೀಸ್‌ ಅಧಿಕಾರಿಯವರು ಭಾಗವಹಿಸಿದ್ದರು.

ಉಪವಿಭಾಗದ ಠಾಣೆಗಳಾದ ಕುಂದಾ ಪುರದಿಂದ 15, ಕುಂದಾಪುರ ಗ್ರಾಮಾಂ ತರದಿಂದ 14, ಬೈಂದೂರಿನಿಂದ 6, ಶಂಕರನಾರಾಯಣದಿಂದ 5, ಕೊಲ್ಲೂರು ಮತ್ತು ಗಂಗೊಳ್ಳಿಯಿಂದ ತಲಾ 4 ಜನ ಹಾಗೂ ಅಮಾಸೆಬೈಲು ಠಾಣಾ ವ್ಯಾಪ್ತಿಯಿಂದ ಇಬ್ಬರು ಒಟ್ಟು 50 ಜನ ಆರೋಪಿಗಳು ಭಾಗವಹಿಸಿದ್ದರು.

ಉಡುಪಿ ಉಪ ವಿಭಾಗ
ಉಡುಪಿ ಉಪವಿಭಾಗದಲ್ಲಿ ನಡೆದ ಪರೇಡನ್ನು ಉಡುಪಿ ಉಪವಿಭಾಗದ ಡಿವೈಎಸ್‌ಪಿ ಟಿ.ಆರ್‌. ಜೈಶಂಕರ ಅವರ ನೇತೃತ್ವದಲ್ಲಿ ಪೊಲೀಸ್‌ ವೃತ್ತ ನಿರೀಕ್ಷಕರ ಕಚೇರಿ ಆವರಣದಲ್ಲಿ ನಡೆಸಲಾಯಿತು. ಉಪವಿಭಾಗದ ಪೊಲೀಸ್‌ ಅಧಿ ಕಾರಿಯವರು ಭಾಗವಹಿಸಿದ್ದರು. ಕೋಟಾ ಠಾಣೆಯಿಂದ 11, ಹಿರಿಯಡ್ಕ ಠಾಣೆಯಿಂದ 10, ಮಲ್ಪೆ ಠಾಣೆಯಿಂದ 7 ಹಾಗೂ ಬ್ರಹ್ಮಾವರ ಠಾಣಾ ಸರಹದ್ದಿನಿಂದ 4 ಸಹಿತ ಒಟ್ಟು 32 ಜನರು ಭಾಗವಹಿಸಿದ್ದರು.

ಕಾರ್ಕಳ ಉಪ ವಿಭಾಗ
ಕಾರ್ಕಳ ಉಪವಿಭಾಗದ ಪರೇಡನ್ನು ಕಾರ್ಕಳ ಪೊಲೀಸ್‌ ಉಪವಿಭಾಗ ಕಚೇರಿಯ ಮುಂಭಾಗದಲ್ಲಿ ನಡೆಸ ಲಾಯಿತು. ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಕುಮಾರಚಂದ್ರ, ಕಾರ್ಕಳ ಪೊಲೀಸ್‌ ಉಪವಿಭಾಗಾಧಿಕಾರಿ ಪಿ. ಕೃಷ್ಣಕಾಂತ್‌ ಮತ್ತು ಕಾರ್ಕಳ ಉಪ ವಿಭಾಗದ ಪೊಲೀಸ್‌ ಅಧಿಕಾರಿಗಳು ಭಾಗವಹಿಸಿದ್ದರು. ಉಪವಿಭಾಗದ ಠಾಣೆಗಳಾದ ಕಾರ್ಕಳ ನಗರದಿಂದ 7, ಕಾರ್ಕಳ ಗ್ರಾಮಾಂತರದಿಂದ 14, ಹೆಬ್ರಿಯಿಂದ 15, ಅಜೆಕಾರಿನಿಂದ 8, ಕಾಪುವಿನಿಂದ 9, ಪಡುಬಿದ್ರಿಯಿಂದ 10, ಶಿರ್ವಾ ಠಾಣಾ ವ್ಯಾಪ್ತಿಯಿಂದ 12 ಸಹಿತ ಒಟ್ಟು 75 ಜನರು ಭಾಗವಹಿಸಿದ್ದರು.

Advertisement

ಎಚ್ಚರಿಕೆ
ಪರೇಡ್‌ನ‌ಲ್ಲಿ ಭಾಗಿಯಾದವರಿಗೆ ಇನ್ನು ಮುಂದೆ ಇಂತಹ ಕೃತ್ಯಗಳಲ್ಲಿ ಭಾಗಿಯಾಗಬಾರದಾಗಿ ಸೂಚಿಸಿ, ಮುಂದುವರಿಸಿದಲ್ಲಿ ಗಡೀಪಾರು / ಗೂಂಡಾ ಕಾಯ್ದೆಯನ್ವಯ ಕ್ರಮ ಜರಗಿಸುವುದಾಗಿ ಎಚ್ಚರಿಕೆ ನೀಡಲಾಯಿತು. ಇಂತಹ ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ಸನ್ನಡತೆಗಾಗಿ ತಾಲೂಕು ದಂಡಾಧಿಕಾರಿಯವರಿಗೆ ಈಗಾಗಲೇ ವರದಿ ಸಲ್ಲಿಸಿದ್ದು, ಅಧಿಕ ಮೊತ್ತದ ಬಾಂಡ್‌ ಮುಚ್ಚಳಿಕೆಯನ್ನು ಬರೆಯಿಸಿಕೊಳ್ಳಲಾಗಿದೆ. ಕಳೆದ ತಿಂಗಳಿನಲ್ಲಿ ಪರೇಡನ್ನು ಠಾಣಾವಾರು ನಡೆಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next