Advertisement

Hindi ಹೇರಿದರೆ ಗೋಕಾಕ್‌ ಮಾದರಿ ಹೋರಾಟ: ಸಾ.ರಾ.ಗೋವಿಂದು

01:27 AM Dec 22, 2024 | Team Udayavani |

ಸಂಚಿ ಹೊನ್ನಮ್ನ ಮತ್ತು ಕಾದಂಬರಿ ಸಾಮ್ರಾÿ ತ್ರೀವೇಣಿ ವೇದಿಕೆ (ಮಂಡ್ಯ): ಕನ್ನಡ ನಾಡಿನ ಮೇಲೆ ಹಿಂದಿ ಭಾಷೆಯನ್ನು ಒತ್ತಾಯ ಪೂರ್ವಕವಾಗಿ ಹೇರಿಕೆ ಮಾಡಲು ಮುಂದಾದಲ್ಲಿ ಮತ್ತೂಮ್ಮೆ ಗೋಕಾಕ್‌ ಮಾದರಿ ಹೋರಾಟ ನಡೆಸಬೇಕಾಗುತ್ತದೆ ಎಂದು ಅಖೀಲ ಕರ್ನಾಟಕ ಡಾ| ರಾಜ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಎಚ್ಚರಿಸಿದರು.

Advertisement

ಸಮಾನಾಂತರ ವೇದಿಕೆ-2ರಲ್ಲಿ ಶನಿವಾರ ನಡೆದ “ಕರ್ನಾಟಕದ ಚಿತ್ರಣ ಬದಲಿಸಿದ ಚಳವಳಿಗಳು’ ಗೋಷ್ಠಿಯಲ್ಲಿ ಆಶಯ ನುಡಿಗಳನ್ನಾಡಿದ ಅವರು, ರಾಜ್ಯದಲ್ಲಿ ಮೂರ್ನಾಲ್ಕು ದಶಕಗಳ ಕಾಲ ಇದ್ದ ಒಂದೇ ಆಡಳಿತವನ್ನು ಬದಲಿಸಿದ್ದು, ಕನ್ನಡ, ದಲಿತರ ಮತ್ತು ರೈತಪರ ಚಳವಳಿಗಳು. ಗೋಕಾಕ್‌ ಚಳವಳಿಗೆ ವರನಟ ಡಾ| ರಾಜ್‌ಕುಮಾರ್‌ ಧುಮುಕುವ ಮೂಲಕ ಸಂಚಲನ ಸೃಷ್ಟಿಸಿದ್ದರು ಎಂದು ಮೆಲುಕು ಹಾಕಿದರು.

70, 80ರ ದಶಕದಲ್ಲಿ ಚಳವಳಿಗಳಿಗೆ ಪ್ರಬಲವಾದ ಶಕ್ತಿ ಇತ್ತು. ಇಂದು ಆ ರೀತಿಯ ವಾತಾವರಣ ಕಡಿಮೆ ಯಾಗಿರುವುದು ಯಾಕೆ ಎಂಬುದನ್ನು ನಾವೆಲ್ಲರೂ ಅವಲೋಕಿಸಬೇಕು. ದೇವರಾಜ ಅರಸು ಅವರು ಕರ್ನಾಟಕ ಎಂದು ನಮ್ಮ ನಾಡಿಗೆ ನಾಮಕರಣ ಮಾಡಿದ್ದನ್ನು, ಕಾವೇರಿ ವಿಚಾರದಲ್ಲಿ ಸುಗ್ರೀವಾಜ್ಞೆ ಹೊರಡಿಸಿ ನಾಡಿನ ರೈತರ ಹಿತ ಕಾಪಾಡಿದ ಬಂಗಾರಪ್ಪ ಅವರನ್ನು ನಾವು ಸ್ಮರಿಸಬೇಕಾಗುತ್ತದೆ. ಕನ್ನಡದ ವಿಚಾರದಲ್ಲಿ ರಾಜಕಾರಣಿಗಳು ಇಂತಹ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಾಕೀತು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next