Advertisement

ಅನೈತಿಕ ಸಂಬಂಧ: ಅಕ್ಕತಂಗೇರಹಾಳದಲ್ಲಿ ಡಬಲ್ ಮರ್ಡರ್

06:47 PM Jul 04, 2023 | |

ಬೆಳಗಾವಿ: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಗೋಕಾಕ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.

Advertisement

ಅಕ್ಕತಂಗೇರಹಾಳ ಗ್ರಾಮದ ರೇಣೂಕಾ ಯಲ್ಲಪ್ಪ ಮಾಳಗಿ (42) ಹಾಗೂ ಮಲ್ಲಿಕಾರ್ಜುನ ಜಗದಾರ (40) ಎಂಬವರು ಕೊಲೆಗೀಡಾಗಿದ್ದಾರೆ. ಕೊಲೆ ಮಾಡಿರುವ ರೇಣುಕಾಳ ಪತಿ ಯಲ್ಲಪ್ಪ ಮಾಳಗಿ (45) ಎಂಬಾತನನ್ನು ಬಂಧಿಸಲಾಗಿದೆ.

ಇದನ್ನೂ ಓದಿ:ಉಚಿತ ಬಸ್ ಯೋಜನೆ; 40 ದಿನದಲ್ಲಿ ಅಂಜನಾದ್ರಿ ಹುಂಡಿಗೆ ಬಿತ್ತು 26.57 ಲಕ್ಷ ರೂ.!

ಅಕ್ರಮ ಸಂಬಂಧ ಶಂಕಿಸಿ ಪತಿ ಯಲ್ಲಪ್ಪ ಮನೆಯಲ್ಲಿದ್ದ ರೇಣುಕಾಳನ್ನು ಕೊಲೆ ಮಾಡಿದ್ದಾನೆ. ಬಳಿಕ ಅಲ್ಲಿಂದ ಮಲ್ಲಿಕಾರ್ಜುನ ಮನೆಗೆ ಹೋಗಿದ್ದಾನೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಲ್ಲಿಕಾರ್ಜುನ ಮನೆ ಹೊರ ಭಾಗದಲ್ಲಿ ಸ್ನಾನ ಮಾಡುತ್ತಿದ್ದಾಗಲೇ ಮಾರಕಾಸ್ತ್ರದಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಅಂಕಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next