Advertisement

“ಗೋಕಾಕ ಸ್ವಾತಂತ್ರ್ಯಕ್ಕಾಗಿ ಹೋರಾಟ’

11:23 PM Sep 13, 2019 | Lakshmi GovindaRaju |

ಬೆಳಗಾವಿ: ಗೋಕಾಕ ಕ್ಷೇತ್ರದ ಜನರನ್ನು ರಮೇಶ ಜಾರಕಿಹೊಳಿ ಗುಲಾಮರಂತೆ ಕಾಣುತ್ತಿದ್ದು, ಇದೇ ಕಾರಣದಿಂದ ನಾವು ಗೋಕಾಕಕ್ಕೆ ಸ್ವಾತಂತ್ರ್ಯ ಕೊಡಿಸಲು ಹೋರಾಟ ಮಾಡುತ್ತಿದ್ದೇವೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ಒಂದು ಕಡೆ ಮಾಜಿ ಸಚಿವರು ಜನರನ್ನು ಗುಲಾಮರಂತೆ ಕಂಡರೆ, ಇನ್ನೊಂದು ಕಡೆ ಅಂಬಿರಾವ್‌ ದರ್ಬಾರ್‌ ನಡೆದಿದೆ. ಇವೆರಡರಿಂದಲೂ ಗೋಕಾಕ ಜನರಿಗೆ ಸ್ವಾತಂತ್ರ್ಯ ದೊರಕಿಸಿ ಕೊಡಲು ನಾವು ಹೋರಾಟ ಆರಂಭಿಸಿದ್ದೇವೆ ಎಂದರು. ಗೋಕಾಕ ಜನರ ಒಳಿತಿ ಗಾಗಿ ಜಾರಕಿಹೊಳಿ ಸಾಮ್ರಾಜ್ಯ ಕಟ್ಟಲಾಗಿತ್ತು. ಆದರೆ ಇದು ಈಗ ಒಳ್ಳೆಯದಕ್ಕೆ ಉಪಯೋಗವಾಗುತ್ತಿಲ್ಲ.

ಆದ್ದರಿಂದ ನಾವೇ ಕಟ್ಟಿದ ಕೋಟೆ ಕೆಡವಲು ಅನಿವಾರ್ಯವಾಗಿ ಹೋರಾಟ ಮಾಡಬೇಕಾಗಿದೆ. ರಮೇಶ ವಿರುದ್ಧ ಹಿಂದೆ ಸಾಕಷ್ಟು ಹೋರಾಟ ಮಾಡಲಾಗಿದೆ. 6 ತಿಂಗಳ ಹಿಂದೆಯೇ ಕೋಟೆಯಲ್ಲಿ ಬಿರುಕು ಕಂಡಿದೆ. ರಮೇಶ ಅವರ ಭಯದಿಂದ ಕ್ಷೇತ್ರದ ಜನರು ಹೊರಗಡೆ ಬರುತ್ತಿಲ್ಲ. ಆದರೆ ಉಪಚುನಾವಣೆಯಲ್ಲಿ ಅವರ ವಿರುದ್ಧ ಮತ ಹಾಕಲು ಬರುತ್ತಾರೆ. ಇದರ ಮೂಲಕ ರಮೇಶಗೆ ಪಾಠ ಕಲಿಸುತ್ತೇವೆ ಎಂದರು.

ಡಿಕೆಶಿ ವಿರುದ್ಧ ದ್ವೇಷದ ರಾಜಕೀಯ
ಬೆಳಗಾವಿ: ಡಿ.ಕೆ.ಶಿವಕುಮಾರ ಅವರಿಗಿಂತ ದೊಡ್ಡವರು ಬಿಜೆಪಿಯಲ್ಲಿದ್ದಾರೆ. ಡಿಕೆಶಿ ಬಿಜೆಪಿಗೆ ಸೇರಲಿಲ್ಲ ಎಂಬ ಕಾರಣಕ್ಕೆ ಅವರ ಮೇಲೆ ರಾಜಕೀಯ ದ್ವೇಷ ಸಾಧಿಸಲಾಗು ತ್ತಿದೆ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಆರೋಪಿಸಿ ದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅನರ್ಹ ಶಾಸಕ ರಮೇಶ ಜಾರಕಿಹೊಳಿ ಮೇಲೂ ಈ ಹಿಂದೆ ಐಟಿ ದಾಳಿಯಾಗಿತ್ತು.

ಈಗ ಅವರಿಗೆ ರಕ್ಷಣೆ ನೀಡಿರುವ ಬಿಜೆಪಿ, ಶಿವಕುಮಾರ ಮೇಲೆ ದಾಳಿ ಮಾಡುತ್ತಿದೆ. ಈ ಹಿಂದೆ ಡಿಕೆಶಿಗೆ ಬಿಜೆಪಿ ಸೇರುವ ಆಹ್ವಾನ ಬಂದಿತ್ತು. ಆದರೆ ಅವರು ಈ ಆಹ್ವಾನ ನಿರಾಕರಿಸಿದ್ದರು. ಇದೇ ಕಾರಣದಿಂದ ಅವರನ್ನು ರಾಜಕೀಯವಾಗಿ ಕಟ್ಟಿ ಹಾಕುತ್ತಿದ್ದಾರೆ ಎಂದರು. ಕಾಂಗ್ರೆಸ್‌ನ ಎಷ್ಟೋ ಜನರ ಮೇಲೆ ಪ್ರಕರಣಗಳಿದ್ದವು. ಅಂತಹವರು ಬಿಜೆಪಿಗೆ ಸೇರಿದ ಮೇಲೆ ಈ ರೀತಿಯ ಪ್ರಕರಣಗಳನ್ನು ಮುಚ್ಚಿ ಹಾಕಲಾಗುತ್ತಿದೆ.

Advertisement

ನೆರೆ ಹಾವಳಿ ಹಾಗೂ ಸಂತ್ರಸ್ತರ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಗಂಭೀರತೆಯೇ ಇಲ್ಲ. ಕೇಂದ್ರ ಇದುವರೆಗೂ ನೆರೆ ಹಾನಿ ಪರಿಹಾರ ಕೊಟ್ಟಿಲ್ಲ. ಇದೇ ಕಾರಣಕ್ಕೆ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗು ತ್ತಿದೆ. ಎಂ.ಬಿ ಪಾಟೀಲ್‌ ಸೇರಿ ಕಾಂಗ್ರೆಸ್‌ನ ಪ್ರಮುಖ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next