Advertisement

ಕಣ್ಮನ ಸೆಳೆಯುವ ಗೋಕಾಕ್ ಜಲಪಾತ

12:47 PM May 16, 2021 | Team Udayavani |

ಬೆಳಗಾವಿ ಜಿಲ್ಲೆಯಲ್ಲಿರುವ ಗೋಕಾಕ್ ಜಲಪಾತ ಉತ್ತರ ಕರ್ನಾಟಕದ ಜನಪ್ರಿಯ ಜಲಪಾತಗಳಲ್ಲಿ ಒಂದಾಗಿದೆ.

Advertisement

ಗೋಕಾಕ್ ಜಲಪಾತವು ಅಮೇರಿಕ ದೇಶದ ನಯಾಗರ ಜಲಪಾತವನ್ನು ಹೊಲುವುದರಿಂದ ಇದನ್ನು ಭಾರತದ ನಯಾಗಾರವೆಂದು ಕರೆಯಲಾಗುತ್ತದೆ. ಈ ಜಲಪಾತವು 180 ಅಡಿ ಎತ್ತರದಿಂದ ಧುಮ್ಮುಕ್ಕುತ್ತದೆ. ಇಲ್ಲಿಗೆ ಮಳೆಗಾಲದಲ್ಲಿ ಭೇಟಿ ನೀಡುವುದು ಸೂಕ್ತವಾಗಿದೆ. ವಿದ್ಯುತ್ತನ್ನು ಮೊದಲ ಬಾರಿಗೆ ಉತ್ಪಾದಿಸಿದ್ದು ಇಲ್ಲೇ ಎನ್ನಲಾಗುತ್ತದೆ.

ಘಟಪ್ರಭಾ ನದಿ ಕುದುರೆಯ ಲಾಳದ  ಆಕಾರದ ಬಂಡೆಯ ಮೇಲ್ಭಾಗದಿಂದ ಸುಮಾರು 52 ಮೀಟರ್ ಎತ್ತರದಿಂದ ಧುಮುಕಿದಾಗ ಗೋಕಾಕ್ ಜಲಪಾತವು ರೂಪುಗೊಳ್ಳುತ್ತದೆ. ಇತರ ಜಲಪಾತಗಳಿಗೆ ಹೋಲಿಸಿದರೆ ಗೋಕಾಕ ಜಲಪಾತ ಸಾಕಷ್ಟು ಅಗಲವಿದ್ದು (ಒಟ್ಟು 177 ಮೀಟರ್) ದೂರದಿಂದ ನೋಡಿದರೂ ತುಂಬಾ ರಮಣೀಯವಾಗಿ ಕಾಣಿಸುತ್ತದೆ ಮತ್ತು ಜಲಪಾತದ ಭೋರ್ಗೆರೆತ ದೂರದಿಂದಲೇ ಕೇಳಿಸುತ್ತದೆ.

ಗೋಕಾಕ್ ಜಲಪಾತವನ್ನು ಭೇಟಿ ನೀಡಲು ಕಾರಣಗಳು:

Advertisement

ತೂಗು ಸೇತುವೆ: 200 ಮೀಟರ್ ಉದ್ದದ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗು ಸೇತುವೆ ಗೋಕಾಕ್ ಜಲಪಾತದ ಎತ್ತರದ ನೋಟವನ್ನು ನೀಡುತ್ತದೆ.

ಚಾಲುಕ್ಯ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾದ ಭಗವಾನ್ ಮಹಾಲಿಂಗೇಶ್ವರ ದೇವಸ್ಥಾನ.

ಕೆಂಪಲ್ ಸಸ್ಯ ಉದ್ಯಾನ

ಯೋಗಿ ಕೊಳ್ಳ ಚಾರಣ: ಗೊಕಾಕ್ ಜಲಪಾತದಿಂದ 3 ಕಿ.ಮೀ ದೂರದಲ್ಲಿರುವ ಜನಪ್ರಿಯ ಚಾರಣ ತಾಣ.

ಮಲ್ಲಪ್ರಭಾ ಬೋಟಿಂಗ್: ಮಾರ್ಕಂಡೇಯ ನದಿಯಲ್ಲಿ ಬೋಟಿಂಗ್ ವಿಹಾರ ಮಾಡಬಹುದಾಗಿದೆ, ಗೋಕಾಕ್ ಜಲಪಾತದಿಂದ 8 ಕಿ.ಮೀ. ದೂರದಲ್ಲಿದೆ.

ದೇವಾಲಯಗಳು: ಯೋಗಿಕೊಳ್ಳ ಮಲ್ಲಿಕರ್ಜುನ ದೇವಸ್ಥಾನ, ಕರಿಯಮ್ಮ ದೇವಸ್ಥಾನ, ಲಕ್ಷ್ಮಿ ದೇವಸ್ಥಾನ, ಹನುಮಾನ್ ದೇವಾಲಯ ಇತ್ಯಾದಿ.

ಹತ್ತಿರದಲ್ಲಿ ಇನ್ನೇನಿದೆ?

ಗೋಕಾಕ್ ಜಲಪಾತದ ಜೊತೆಗೆ ಗೋಡಚಿನಮಲ್ಕಿ ಜಲಪಾತಗಳು (ಗೋಕಾಕ್ ಜಲಪಾತದಿಂದ 13 ಕಿ.ಮೀ) ಮತ್ತು ಸವದತ್ತಿ ಯಲ್ಲಮ್ಮ (73 ಕಿ.ಮೀ) ಕ್ಷೇತ್ರಕ್ಕೆ ಭೇಟಿ ಕೊಡಬಹುದಾಗಿದೆ.

ಗೋಕಾಕ್ ಜಲಪಾತವನ್ನು ತಲುಪುವುದು ಹೇಗೆ?

ಗೋಕಾಕ್ ಜಲಪಾತ ಬೆಂಗಳೂರಿನಿಂದ 622 ಕಿ.ಮೀ ಮತ್ತು ಬೆಳಗಾವಿಯಿಂದ 62 ಕಿ.ಮೀ ದೂರದಲ್ಲಿದೆ. ಬೆಳಗಾವಿ ಹತ್ತಿರದ ವಿಮಾನ ನಿಲ್ದಾಣ ಮತ್ತು ಪ್ರಮುಖ ರೈಲು ನಿಲ್ದಾಣವಾಗಿದೆ. ಬೆಳಗಾವಿ ವಾಯು, ರೈಲು ಮತ್ತು ರಸ್ತೆಯ ಮೂಲಕ ಕರ್ನಾಟಕದ ಉಳಿದ ಭಾಗಗಳಿಗೆ ಉತ್ತಮ ಸಂಪರ್ಕ ಹೊಂದಿದೆ. ಬೆಳಗಾವಿಯಿಂದ ಟ್ಯಾಕ್ಸಿ ಪಡೆದು ಗೋಕಾಕ್ ಜಲಪಾತವನ್ನು ತಲುಪಬಹುದಾಗಿದೆ.

ವಸತಿ: ಜಲಪಾತದಿಂದ 6 ಕಿ.ಮೀ ದೂರದಲ್ಲಿರುವ ಗೋಕಾಕ್ ನಗರದಲ್ಲಿ ಹೋಟೆಲ್‌ಗಳಿವೆ.

ಗೋಕಾಕ್ ಜಲಪಾತವು ಮಳೆಗಾಲದಲ್ಲಿ ತುಂಬಿ ತುಳುಕುತ್ತದೆ. ಮೇಲಿನಿಂದ ಬೀಳುವ ನೀರು ಪ್ರವಾಸಿಗರ ಕಣ್ಣುಗಳನ್ನು ಸೆಳೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next