ಸುವ ಸುಮಾರು 50 ಕಂಪೆನಿಗಳ 200ಕ್ಕೂ ಹೆಚ್ಚು ಔಷಧಗಳ ದರ ಶೇ. 50ರಿಂದ ಶೇ. 70ರಷ್ಟು ಇಳಿಕೆ ಆಗಲಿದೆ. ಆಗಸ್ಟ್ ಅಂತ್ಯದ ವೇಳೆಗೆ ಇದು ಜಾರಿಗೆ ಬರಲಿದೆ ಎಂದು ಔಷಧೋದ್ಯಮ ಕ್ಷೇತ್ರದ ಮೂಲಗಳು ತಿಳಿಸಿವೆ.
Advertisement
ಕೆಲವು ಕಂಪೆನಿಗಳು ಹೊಂದಿರುವ ಔಷಧ ಗಳ ಪೇಟೆಂಟ್ ಅವಧಿ ಮುಕ್ತಾಯಗೊಳ್ಳುವುದು ಇದಕ್ಕೆ ಕಾರಣ. ಟೈಪ್-2 ಮಧುಮೇಹಕ್ಕೆ ವೈದ್ಯರು ಶಿಫಾರಸು ಮಾಡುವ ಮೆರ್ಕ್ ಆ್ಯಂಡ್ ಕೊ. ಅಭಿವೃದ್ಧಿಪಡಿಸಿರುವ ಸ್ಟಿಯಾಗ್ಲಿಪ್ಟಿನ್ ಔಷಧದ ಪೇಟೆಂಟ್ ಶೀಘ್ರವೇ ಅಂತ್ಯ ವಾಗಲಿದೆ. ಮುಂಬಯಿಯ ಗ್ಲೆನ್‌ಮಾರ್ಕ್ ಫಾರ್ಮಾ ದೇಶದ ಔಷಧ ಮಾರುಕಟ್ಟೆಯಲ್ಲಿ ಈ ಔಷಧದ ಜೆನರಿಕ್ ರೂಪವನ್ನು ವಿತರಿಸಲಿದೆ. ಪ್ರತೀ ಮಾತ್ರೆಗೆ 10.5 ರೂ.ಗಳಿಂದ 19 ರೂ. ವರೆಗೆ ಇರಲಿದೆ.