Advertisement

ಗೋಡ್ಸೆ ಪೂಜೆ ಸಂಸ್ಕೃತಿ ಅಪಾಯಕಾರಿ: ಸೈಯ್ಯದ್‌ ಹನೀಫ್‌

05:58 PM Oct 20, 2021 | Team Udayavani |

 ಚಿಕ್ಕಮಗಳೂರು: ಅಹಿಂಸೆಯಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂ ಧೀಜಿ ಅವರನ್ನು ಹತ್ಯೆ ಮಾಡಿದ ಗೋಡ್ಸೆ ಪೂಜಿಸುವ ಸಂಸ್ಕೃತಿಯನ್ನು ಬಿಜೆಪಿ ಬೆಳೆಸುತ್ತಿದೆ. ಇದು ಅಪಾಯದ ಸಂಕೇತವೆಂದು ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಸೈಯ್ಯದ್‌ ಹನೀಫ್‌ ಹೇಳಿದರು.

Advertisement

ಮಂಗಳವಾರ ನಗರದ ಹಿರೇಮಗಳೂರು ಬ್ಲಾಕ್‌ ಕಾಂಗ್ರೆಸ್‌, ನಗರ ಕಾಂಗ್ರೆಸ್‌ ಮತ್ತು ವಾ ರ್ಡ್‌ ಕಾಂಗ್ರೆಸ್‌ ಸಮಿತಿಯಿಂದ ಆಯೋಜಿಸಿದ್ದ ಮಹಾತ್ಮ ಗಾಂ ಧೀಜಿ ಗ್ರಾಮ ಸ್ವರಾಜ್‌ ಅಭಿಯಾನ ಮತ್ತು ಗಾಂಧಿ  ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಆಡಳಿತ ನಡೆಸಿದವರ್ಯಾರೂ ಕೋಮುವಾದವನ್ನು ಬೆಳೆಸಲಿಲ್ಲ. ಸ್ವಾತಂತ್ರ್ಯಾ ನಂತರ ದೇಶದಲ್ಲಿ ಬಿಜೆಪಿಯಂತಹ ಸಂಘಟನೆಗಳು ಅಧಿ ಕಾರಕ್ಕಾಗಿ ಕೋಮುವಾದ ಪ್ರಚೋದಿಸಿ ಅಧಿ ಕಾರಕ್ಕೆ ಬಂದಿವೆ ಎಂದರು.

ಮಹಾತ್ಮ ಗಾಂ ಧೀಜಿ, ಲಾಲ್‌ ಬಹದ್ದೂರ್‌ ಶಾಸ್ತ್ರಿ, ಸರ್ದಾರ್‌ ವಲ್ಲಭಬಾಯ್‌ ಪಟೇಲ್‌, ನೇತಾಜಿ ಸುಭಾಷ್‌ಚಂದ್ರ ಬೋಸ್‌ ಸೇರಿದಂತೆ ದೇಶಭಕ್ತರ ಜೀವನ ಸಾಧನೆಗಳು ಮತ್ತು ಸ್ವಾತಂತ್ರ್ಯ ಚಳುವಳಿಯ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಹಾತ್ಮ ಗಾಂ ಧೀಜಿ ಗ್ರಾಮ ಸ್ವರಾಜ್‌ ಅಭಿಯಾನವನ್ನು ಕಾಂಗ್ರೆಸ್‌ ಹಮ್ಮಿಕೊಂಡಿದೆ ಎಂದು ತಿಳಿ ಸಿದರು. ಜಿಲ್ಲಾ ಕಾಂಗ್ರೆಸ್‌ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ಮಹಾತ್ಮ ಗಾಂ ಧೀಜಿ ಹಾಕಿಕೊಟ್ಟ ಅಹಿಂಸಾ ಮಾರ್ಗ ಮತ್ತು ಡಾ|ಬಿ. ಆರ್‌. ಅಂಬೇಡ್ಕರ್‌ ಅವರ ತತ್ವ- ಸಿದ್ಧಾಂತಗಳ ನ್ನು ಮರೆಯುತ್ತಿರುವುದರಿಂದ ನಾವಿಂದು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಗರ ಕಾಂಗ್ರೆಸ್‌ ಅಧ್ಯಕ್ಷ ತನೋಜ್‌ ನಾಯ್ಡು ಮಾತನಾಡಿ, ಆಧುನಿಕತೆಯ ಸೋಗಿನಲ್ಲಿ ಗಾಂಧಿ ಧೀಜಿಯಂತಹ ದೇಶ ಭಕ್ತರ ಆದರ್ಶ, ಬದುಕು- ಬರಹಗಳನ್ನು ಮರೆಯುತ್ತಿದ್ದೇವೆ. ಎಲ್ಲಾ ಸಮ ಸ್ಯೆಗಳಿಗೆ ಅವರ ಸಿದ್ಧಾಂತಗಳು ಪರಿಹಾರವಾಗುತ್ತವೆ. ಬೆಳೆಯುವ ಮಕ್ಕಳಿಗೆ ಅವರ ಆದರ್ಶದ ಬದುಕು ತಿಳಿಸಿಕೊಡಬೇಕು ಎಂದು ಹೇಳಿದರು. ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ, ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿ ಎಚ್‌.ಟಿ. ವೆಂಕಟೇಶ್‌, ನಗರ ಕಾಂಗ್ರೆಸ್‌ ಎಸ್ಸಿ ಘಟಕದ ಅಧ್ಯಕ್ಷ ಎಚ್‌. ಎಸ್‌. ಜಗದೀಶ್‌, ಸಿಡಿಎ ಮಾಜಿ ಸದಸ್ಯ ಉಂಡೆದಾಸರಹಳ್ಳಿ ಚಂದ್ರು ಮಾತನಾಡಿದರು. ಕಾರ್ಯಕ್ರಮದಲ್ಲಿ ಜೆಡಿಎಸ್‌ ಮುಖಂಡ ಎಚ್‌.ಪಿ. ಪ್ರದೀಪ್‌, ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿ ಸೃದೀಪ್‌, ತಾಲೂಕು ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಾಜಶೇಖರ್‌, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಚ್‌.ಜೆ. ಶಿವಕುಮಾರ್‌, ಕಾಂಗ್ರೆಸ್‌ ಮುಖಂಡರಾದ ಧರ್ಮರಾಜ್‌, ಎಚ್‌.ಡಿ. ರಾಕೇಶ್‌ ಸೇರಿದಂತೆ ಅನೇಕರು ಇದ್ದರು. ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಎಚ್‌.ಸಿ. ಗಂಗಾಧರ್‌ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next