Advertisement

ಗಾಂಧಿ ಸಿದ್ದಾಂತ ಕಡಿಮೆಯಾಗಿ, ಗೋಡ್ಸೆ ಸಿದ್ಧಾಂತವು ಪ್ರಬಲವಾಗುತ್ತಿದೆ: ಗಾಂಧಿ ಮರಿ ಮೊಮ್ಮಗ

09:29 AM Jan 31, 2022 | Team Udayavani |

ಜಲ್ನಾ (ಮಹಾರಾಷ್ಟ್ರ): ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಬೋಧನೆಗಳನ್ನು ಪಾಲಿಸುವವರ ಸಂಖ್ಯೆ ದೇಶದಲ್ಲಿ ಕಡಿಮೆಯಾಗುತ್ತಿದ್ದು, ಅವರ ಹಂತಕ ನಾಥೂರಾಂ ಗೋಡ್ಸೆಯ ಸಿದ್ಧಾಂತ ಪ್ರಬಲವಾಗುತ್ತಿದೆ ಎಂದು ಗಾಂಧೀಜಿ ಮರಿ ಮೊಮ್ಮಗ ತುಷಾರ್ ಗಾಂಧಿ ವಿಷಾದ ವ್ಯಕ್ತಪಡಿಸಿದರು.

Advertisement

75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ‘ಆಜಾದಿ ಕಾ ಅಮೃತ್ ಮಹೋತ್ಸವ’ಆಚರಿಸುತ್ತಿದ್ದರೆ, ಸಮಾಜದಲ್ಲಿ ದ್ವೇಷದ ವಿಷ ಹರಡುತ್ತಿರುವುದು ಕಣ್ಣಿಗೆ ರಾಚುತ್ತಿದೆ ಎಂದರು.

ಇಲ್ಲಿನ ಜೆಇಎಸ್ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರವು ಮಹಾತ್ಮಾ ಗಾಂಧೀಜಿಯವರ ಪುಣ್ಯತಿಥಿಯಂದು ಆಯೋಜಿಸಿದ್ದ ‘ಕರ್ ಕೆ ದೇಖೋ’  ಎಂಬ ವರ್ಚುವಲ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಗತಿಪರ ಭಾರತ ಮತ್ತು ಅದರ ಶ್ರೀಮಂತ ಇತಿಹಾಸದ 75 ವರ್ಷಗಳ ವೈಭವವನ್ನು ಸ್ಮರಿಸಲು ಸರ್ಕಾರವು ‘ಆಜಾದಿ ಕಾ ಅಮೃತ್ ಮಹೋತ್ಸವ’ವನ್ನು ಆಚರಿಸುತ್ತಿದೆ, ಆದರೆ ಈಗ ‘ಅಮೃತ’ ದ್ವೇಷದ ವಿಷವಾಗಿ ಮಾರ್ಪಟ್ಟಿದೆ, ಆ ವಿಷ ಹೆಚ್ಚುತ್ತಿದೆ ಮತ್ತು ಹರಡುತ್ತಿದೆ” ಎಂದರು.

ಇದನ್ನೂ ಓದಿ:ನಕಲಿ ಎನ್‌ಆರ್‌ಐನಿಂದ ಪಂಗನಾಮ!; ದೆಹಲಿ ಯುವತಿಯಿಂದ ಹೊಸ ರೀತಿಯ ಮೋಸದ ಜಾಲ!

Advertisement

“ಮಹಾತ್ಮ ಗಾಂಧಿಯವರ ಬೋಧನೆಗಳು ಕ್ಷೀಣಿಸುತ್ತಿವೆ ಮತ್ತು ಅವರ ಹಂತಕ ನಾಥೂರಾಂ ಗೋಡ್ಸೆಯ ಸಿದ್ಧಾಂತವು ಅದರ ಮೇಲೆ ಪ್ರಾಬಲ್ಯ ಸಾಧಿಸುತ್ತಿದೆ. ಒಂದು ವರ್ಗದ ಜನರು ಇತಿಹಾಸವನ್ನು ವಿರೂಪಗೊಳಿಸುತ್ತಿದ್ದಾರೆ, ಅಲ್ಲದೆ ಇತಿಹಾಸವನ್ನು ತಮ್ಮದೇ ಆದ ರೀತಿಯಲ್ಲಿ ಪುನಃ ಬರೆಯುತ್ತಿದ್ದಾರೆ. ಆದರೆ ನಾವು ನೈಜ ಇತಿಹಾಸವನ್ನು ಮತ್ತೆ ತರಬೇಕಾಗಿದೆ. ಸಮಾಜದಲ್ಲಿನ ದ್ವೇಷ ಮತ್ತು ವಿಭಜನೆಯ ವಿರುದ್ಧ ಧ್ವನಿ ಎತ್ತಬೇಕು,’’ ಎಂದು ತುಷಾರ್ ಗಾಂಧಿ ಕರೆ ನೀಡಿದರು.

ನಾವು ಹಿಂಸೆ, ದ್ವೇಷ ಮತ್ತು ವಿಭಜನೆಯ ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದೇವೆ. ನಾವು ಧರ್ಮ, ಜಾತಿ ಮತ್ತು ಪ್ರದೇಶದ ಆಧಾರದ ಮೇಲೆ ವಿಭಜನೆಯಾಗಿದ್ದೇವೆ. ನಮ್ಮ ವಿಭಜನೆಯೇ ನಮ್ಮ ಗುರುತು, ಮನಸ್ಥಿತಿ; ಮತ್ತು ಸಾಮಾಜಿಕ ವ್ಯವಸ್ಥೆಗಳು ವಿಭಜನೆಯನ್ನು ಆಧರಿಸಿವೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next