ಮಂಗಳೂರು: ಸಮಾಜದ ಎಲ್ಲ ವೃತ್ತಿಗಳಿಗಿಂತಲೂ ನರ್ಸಿಂಗ್ ವೃತ್ತಿಗೆ ಅತ್ಯಂತ ಹೆಚ್ಚಿನ ಮಹತ್ವವಿದ್ದು, ನರ್ಸಿಂಗ್ ಬಲ್ಲವರು ದೇವರ ಕೆಲಸ ಮಾಡಿದಂತೆ ಎಂದು ದಾಯಿj ವರ್ಲ್ಡ್ ಆಡಳಿತ ನಿರ್ದೇಶಕ ವಾಲ್ಟರ್ ನಂದಳಿಕೆ ಹೇಳಿದರು.
ಫಳ್ನೀರ್‌ನ ಅಥೇನಾ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈಯನ್ಸಸ್‌ನ ಘಟಿಕೋತ್ಸವ ಹಾಗೂ ಅಥೇನಾ ಆಸ್ಪತ್ರೆಯ 20ನೇ ವಾರ್ಷಿಕೋತ್ಸವ ಮಂಗಳೂರು ಪುರಭವನದಲ್ಲಿ ಗುರುವಾರ ನಡೆಯಿತು.
ಆಸ್ಪತ್ರೆಗೆ ರೋಗಿಯೊಬ್ಬ ಆಗಮಿಸುವಾಗ ಆತನ ಬಣ್ಣ, ಜಾತಿ, ಆರ್ಥಿಕ ಸ್ಥಿತಿ ಸೇರಿದಂತೆ ಯಾವುದನ್ನೂ ಪರಿಗಣಿಸದೆ,ಆರೋಗ್ಯ ಸುಧಾರಣೆಯಷ್ಟೇ ಏಕ ಗುರಿ ಎಂಬ ದೃಷ್ಟಿಯಿಂದ ನರ್ಸಿಂಗ್ ಸಿಬಂದಿ ಸೇವೆ ಸಲ್ಲಿಸುವುದು ಶ್ಲಾಘನೀಯ. ಆಸ್ಪತ್ರೆಯಲ್ಲಿ ನರ್ಸ್‌ಗಳು ಇಲ್ಲದೆ ಯಾವುದೇ ಸೇವೆ ನಡೆಯುವುದು ಕಷ್ಟ ಎಂದು ಅವರು ಹೇಳಿದರು.
ಆರ್.ಎಸ್. ಶೆಟ್ಟಿಯಾನ್ ಅಧ್ಯಕ್ಷತೆಯ ಅಥೇನಾ ಸಂಸ್ಥೆ ಕರಾವಳಿಯಲ್ಲಿ ಬಹುಮುಖ್ಯ ಸೇವೆ ನೀಡುವಲ್ಲಿ ಯಶಸ್ವಿಯಾಗಿರುವುದು ಅಭಿನಂದನೀಯ ಎಂದು ಅವರು ಶ್ಲಾಘಿಸಿದರು.
ಎಂಎಸ್‌ಸಿ 6ನೇ ಬ್ಯಾಚ್, ಪಿಬಿ.ಬಿಎಸ್‌ಸಿ 6, ಬಿಎಸ್‌ಸಿ 9 ಹಾಗೂ ಜಿಎನ್‌ಎಂ 11ನೇ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್‌ನ ಅಸೋಸಿಯೇಟ್ ಡೀನ್ ಡಾ| ಜುಡಿತ್ ಎ. ನೊರೋನ್ಹಾ ಮುಖ್ಯ ಅತಿಥಿಯಾಗಿದ್ದರು. ಅಥೇನಾ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈಯನ್ಸಸ್‌ನ ಅಧ್ಯಕ್ಷ ಆರ್.ಎಸ್. ಶೆಟ್ಟಿಯಾನ್ ಅಧ್ಯಕ್ಷತೆ ವಹಿಸಿ ದ್ದರು. ಕಾರ್ಯದರ್ಶಿ ಆಶಾ ಶೆಟ್ಟಿಯಾನ್, ಪ್ರಾಂಶುಪಾಲರಾದ ಪ್ರೊ| ಜೆಸಿಂತ ಡಿ’ಸೋಜಾ, ಉಪಪ್ರಾಂಶುಪಾಲರಾದ ಅಲೊ#àನಾ ಅಲ್ವೆರಿನ್ ಉಪಸ್ಥಿತರಿದ್ದರು.