Advertisement
ಪೂಜೆಯ ವೇಳೆ ಬರುತ್ತಿದ್ದದೊಡ್ಡ ಗಾತ್ರವನ್ನು ಹೊಂದಿದ್ದರೂ ಸೌಮ್ಯ ಸ್ವಭಾವದ ನಂದಿ ನಿತ್ಯ ಮಧ್ಯಾಹ್ನದ ಪೂಜೆಯ ಸಂದರ್ಭದಲ್ಲಿ ದೇವಸ್ಥಾನದ ಮುಂಭಾಗಕ್ಕೆ ಬಂದು ವೀಕ್ಷಿಸುವುದು ಭಕ್ತರನ್ನು ಸೆಳೆಯುತ್ತಿತ್ತು.
ನಂದಿಯ ಗಾಂಭೀರ್ಯದ ನಡಿಗೆ ಭಕ್ತರಿಗೆ ಪ್ರಿಯವಾಗಿತ್ತು. ಗುರುವಾರ ಮಧ್ಯಾಹ್ನ ಪೂಜೆ ವೇಳೆಯೂ ದೇವಸ್ಥಾನದ ಮುಂಭಾಗ ಬಂದು ದೇವರ ಪೂಜೆ ವೀಕ್ಷಿಸಿ ತೆರಳಿತ್ತು ಎನ್ನುತ್ತಾರೆ ದೇವಾಲಯದ ಸಿಬಂದಿ. ವಿಶ್ರಾಂತಿಯಲ್ಲಿದ್ದ
ಸುಮಾರು 18 ವರ್ಷದ ಪ್ರಾಯದ ನಂದಿಗೆ ಎರಡು ವರ್ಷಗಳಿಂದ ಅನಾರೋಗ್ಯದ ಹಿನ್ನೆಲೆಯಲ್ಲಿ ಉತ್ಸವಗಳಲ್ಲಿ ಪಾಲ್ಗೊಳ್ಳದೆ ವಿಶ್ರಾಂತಿ ನೀಡಲಾಗಿತ್ತು. 2 ವರ್ಷಗಳ ಹಿಂದೆ ಸಜಿಪದಿಂದ ತರಲಾದ ಇನ್ನೊಂದು ಬಸವನನ್ನು ಬಳಸಲಾಗುತ್ತಿತ್ತು. ನಂದಿ ಗುರುವಾರ ರಾತ್ರಿ ದೇವರ ಪೂಜೆಯ ಬಳಿಕ ಹೃದಯಾಘಾತಕ್ಕೊಳಗಾಗಿ ಇಹಲೋಕ ಬಿಟ್ಟು ಶಿವನ ಪಾದ ಸೇರಿದೆ. ದೇವಾಲಯದ ಐತಿಹಾಸಿಕ ದೇವರಮಾರು ಗದ್ದೆಯಲ್ಲಿರುವ ಬಸವ ಮಾಯವಾದ ಜಾಗದಲ್ಲಿ ಸಕಲ ಗೌರವದೊಂದಿಗೆ ನಂದಿಯ ದಫನ ಕಾರ್ಯ ನಡೆಸಲಾಗಿದೆ ಎಂದು ದೇವಾಲಯದ ಸಿಬಂದಿ ತಿಳಿಸಿದ್ದಾರೆ.