Advertisement

ಆಭರಣ ಪ್ರದರ್ಶಿಸಲು ವಿರೋಧ

06:00 AM Jul 10, 2018 | |

ತಿರುವನಂತಪುರಂ: ಪದ್ಮನಾಭ ಸ್ವಾಮಿ ದೇಗುಲಕ್ಕೆ ಸೇರಿದ ಚಿನ್ನಾಭರಣ ವನ್ನು ಪ್ರದರ್ಶನಕ್ಕೆ ಇರಿಸುವುದು ಬೇಡ. ಅವುಗಳ ವಾಣಿಜ್ಯೀಕರಣಕ್ಕೆ ಆಕ್ಷೇಪವಿದೆ ಎಂದು ತಿರುವಾಂಕೂರು ರಾಜಮನೆತನ ಹೇಳಿದೆ. ರಾಜಮನೆತನದ ಸದಸ್ಯ ಆದಿತ್ಯ ವರ್ಮಾ ಮಾತನಾಡಿ, “ದೇವಸ್ಥಾನದ ಆಸ್ತಿಯನ್ನು ದೇವಸ್ಥಾನದ ಆವರಣದಿಂದ ಹೊರತರುವ ಯೋಜನೆಯೇ ತಪ್ಪು. ಬೇಕಿದ್ದರೆ ಕೆಲ ಅಪರೂಪದ ಆಭರಣಗಳ 3ಡಿ ಚಿತ್ರಗಳನ್ನು ಮಂದಿರದ ಆವರಣದ ಒಳಗೇ ಪ್ರದರ್ಶನಕ್ಕಿರಿಸಬಹುದು’ ಎಂದಿದ್ದಾರೆ. ಅದಕ್ಕೂ ಕೂಡ ದೇವಾಲಯದ ಮುಖ್ಯ ಅರ್ಚಕ ಮತ್ತಿತರರ ಅನುಮತಿ ಪಡೆಯಬೇಕು ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next