Advertisement

ದೇವರ ಮಕ್ಕಳಿಗೆ ಕಂಕಣಭಾಗ್ಯ

01:09 AM Jun 14, 2019 | Team Udayavani |

ಬಾಗಲಕೋಟೆ: ಯಾವುದೋ ಸಮಸ್ಯೆ ಅಥವಾ ಒತ್ತಡಕ್ಕೆ ಮಣಿದು ದೇವದಾಸಿ ಎಂಬ ಪದ್ಧತಿಗೆ ಸಿಲುಕಿ, ಬಳಿಕ ಆ ಅನಿಷ್ಠ ಪದ್ಧತಿಯಿಂದ ಹೊರ ಬಂದಿರುವ ಮಹಿಳೆಯರ ಮಕ್ಕಳಿಗೆ ಗುರುವಾರ ಕಂಕಣಭಾಗ್ಯ ಕಲ್ಪಿಸಲಾಯಿತು.

Advertisement

ಮಾಜಿ ದೇವದಾಸಿಯರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಇಲ್ಲಿನ ಜ್ಯೋತಿ ಜಿಲ್ಲಾ ಮಟ್ಟದ ಮಹಿಳಾ ಅಭಿವೃದ್ಧಿ ಸಂಸ್ಥೆಯ 12ನೇ ವಾರ್ಷಿಕೋತ್ಸವದ ನಿಮಿತ್ತ ತಾಲೂಕಿನ ಗದ್ದನಕೇರಿ ಕ್ರಾಸ್‌ ಬಳಿ ಇರುವ ಲಡ್ಡುಮುತ್ಯಾನ ದೇವಸ್ಥಾನದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ 18 ಮಂದಿ ಮಾಜಿ ದೇವದಾಸಿಯರ ಮಕ್ಕಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಿಶೇಷವೆಂದರೆ 18 ಮಂದಿ ವಧು-ವರರು ಮಾಜಿ ದೇವದಾಸಿಯರ ಮಕ್ಕಳೇ ಆಗಿದ್ದರು. ದೇವದಾಸಿಯರ ಮಕ್ಕಳು ಎಂಬ ಪ್ರತ್ಯೇಕ ದೃಷ್ಟಿಯಲ್ಲಿ ನೋಡುವುದನ್ನು ಬಿಟ್ಟು ಅವರೂ ಸಮಾಜದಲ್ಲಿ ಉತ್ತಮವಾಗಿ ಬದುಕು ನಡೆಸಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗಿದೆ ಎಂದು ಸಂಘಟಕರಲ್ಲಿ ಒಬ್ಬರಾದ ಸತೀಶ ಮಾದರ (ಸೂಳಿಕೇರಿ) ‘ಉದಯವಾಣಿ’ಗೆ ತಿಳಿಸಿದರು. ನೂತನ ವಧು-ವರರಿಗೆ ಹಿರಿಯೂರಿನ ಆದಿಜಾಂಬವ ಮಠದ ಶ್ರೀ ಷಡಕ್ಷರಿಮನಿ ಸ್ವಾಮೀಜಿ ಅಕ್ಷತೆ ಹಾಕಿ, ಆಶೀರ್ವದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next