Advertisement

67ನೇ ಹುಟ್ಟುಹಬ್ಬಕ್ಕೆ ʼಗಾಡ್‌ ಫಾದರ್‌ʼ ಆದ ಮೆಗಾಸ್ಟಾರ್ ಚಿರಂಜೀವಿ: ಟೀಸರ್‌ ಔಟ್

12:55 PM Aug 22, 2022 | Team Udayavani |

ಮುಂಬಯಿ: ಮೆಗಾಸ್ಟಾರ್‌ ಚಿರಂಜೀವಿ ಅವರಿಗಿಂದು 67ನೇ ಹುಟ್ಟುಹಬ್ಬದ ಸಂಭ್ರಮ. ಅವರ ಅಭಿಮಾನಿಗಳಿಗೆ ನಟ ಚಿರಂಜೀವಿ ʼಗಾಡ್‌ ಫಾದರ್‌ʼ ಟೀಸರ್‌ ಗಿಫ್ಟ್‌  ಮೂಲಕ ಹುಟ್ಟುಹಬ್ಬದ ಖುಷಿಯನ್ನು ದುಪ್ಪಟ್ಟು ಮಾಡಿದ್ದಾರೆ.

Advertisement

2019 ರಲ್ಲಿ ಮಲಯಾಳಂನಲ್ಲಿ ಮೋಹನ್‌ ಲಾಲ್‌ ಮುಖ್ಯಭೂಮಿಕೆಯಲ್ಲಿ ಬಂದ ‘ಲೂಸಿಫರ್​’ ಚಿತ್ರ ರಿಮೇಕ್‌ ಚಿತ್ರ ʼಗಾಡ್‌ ಫಾದರ್‌ʼ. ಮೋಹನ್‌ ಲಾಲ್‌ ಚಿತ್ರದಲ್ಲಿ ಮಾಸ್‌ ಮ್ಯಾನ್ ಆಗಿ ಮಿಂಚಿದ್ದರು. ಅದೇ‌ ರೀತಿಯ ಖದರ್‌, ರಗಡ್‌ ಲುಕ್‌ ನಲ್ಲಿ ಟಾಲಿವುಡ್‌ ಸ್ಟಾರ್ ಚಿರಂಜೀವಿ ಕೂಡ ʼಗಾಡ್‌ ಫಾದರ್‌ʼ ಟೀಸರ್‌ ನಲ್ಲಿ ಹವಾ ಎಬ್ಬಿಸಿದ್ದಾರೆ.

ಹಿಂದಿ ಹಾಗೂ  ತೆಲುಗು ಭಾಷೆಯಲ್ಲಿ ಚಿತ್ರದ ಟೀಸರ್‌ ರಿಲೀಸ್‌ ಮಾಡಲಾಗಿದ್ದು, ಸಾಹಸ ದೃಶ್ಯ ಗಳಿರುವ ಟೀಸರ್‌ ನಲ್ಲಿ ಮೆಗಾಸ್ಟಾರ್‌ ಮಿಂಚಿದ್ದಾರೆ. ತೆಲುಗಿನಲ್ಲಿ 7  ಮಿಲಿಯನ್‌ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಹಿಂದಿಯಲ್ಲಿ 2 ಮಿಲಿಯನ್‌ ಗೂ ಅಧಿಕ ವೀಕ್ಷಣೆ ಯೂಟ್ಯೂಬ್‌ ನಲ್ಲಿ ಪಡೆದುಕೊಂಡಿದೆ. ಥಮನ್‌ ಎಸ್‌ ಸಂಗೀತ ಗಮನ ಸೆಳೆಯುತ್ತದೆ.

ಮೋಹನ್‌ ರಾಜಾ ನಿರ್ದೇಶನದ ಈ ಚಿತ್ರದಲ್ಲಿ ಚಿರಂಜೀವಿಯೊಂದಿಗೆ ಬಾಲಿವುಡ್‌ ನ ಸಲ್ಮಾನ್‌ ಖಾನ್‌ ಜತೆಯಾಗಿದ್ದಾರೆ. ನಯನತಾರಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಇದೇ ವರ್ಷದ ಅಕ್ಟೋಬರ್‌ 5 ರಂದು ʼಗಾಡ್‌ ಫಾದರ್‌ʼ ತೆರೆಗೆ ಬರಲಿದೆ.

67ನೇ ವಸಂತಕ್ಕೆ ಕಾಲಿಟ್ಟ ಮೆಗಾಸ್ಟಾರ್‌ ಇವತ್ತಿಗೂ ಚಿರ ಯುವಕನಂತೆ ಸಕ್ರಿಯವಾಗಿ ಚಿತ್ರರಂಗದಲ್ಲಿ ಭಾಗಿಯಾಗುತ್ತಿದ್ದಾರೆ. ಚಿರಂಜೀವಿ ಬರ್ತ್‌ ಡೇ ಸಂಭ್ರಮ ಜೋರಾಗಿದೆ. ಗಣ್ಯರು, ಸ್ಟಾರ್ಸ್‌ ಗಳು ಹಾಗೂ ಅಪಾರ ಅಭಿಮಾನಿಗಳು ಹುಟ್ಟುಹಬ್ಬದ  ಶುಭಾಶಯವನ್ನು ಕೋರುತ್ತಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next