Advertisement

ದೈವರಾಧನೆ ಸಮಾಜವನ್ನು ಒಗ್ಗೂಡಿಸುತ್ತದೆ: ಮಾಣಿಲ ಶ್ರೀ

10:58 PM Apr 24, 2019 | Team Udayavani |

ಸವಣೂರು: ದೈವರಾಧನೆಯಿಂದ ಸಮಾಜ ಒಂದಾಗುತ್ತದೆ. ವಿವಿಧ ಸಮುದಾಯದ ಜನರು ತಮ್ಮ ಕಟ್ಟುಪಾಡುಗಳಿಗೆ ಹೊಂದಿಕೊಂಡಂತೆ ದೈವರಾಧನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಮೂಲಕ ದೈವರಾಧನೆಯಿಂದ ಸಮಾಜ ಒಂದಾಗಲು ಸಾಧ್ಯ ಎಂದು ಶ್ರೀಕ್ಷೇತ್ರ ಮಾಣಿಲ ಶ್ರೀ ಮೋಹನದಾಸ ಪರಮಂಸ ಸ್ವಾಮೀಜಿ ಅವರು ಹೇಳಿದರು.

Advertisement

ಅವರು ಮಂಗಳವಾರ ರಾತ್ರಿ ಪಾಲ್ತಾಡಿ ಉಳ್ಳಾಕುಲು ಪ್ರಂಡ್ಸ್‌ ಕ್ಲಬ್‌ನ 10ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಪಾಲ್ತಾಡಿ ಚಾಕೊಟೆತ್ತಡಿಯ ಮಣ್ಣಿಗೆ ತನ್ನದೇ ಆದ ಸತ್ಯದ ಕಲೆ ಇದೆ ಎಂದು ಇಲ್ಲಿಗೆ ಬಂದಾಗ ಅರಿವಾಗುತ್ತದೆ. ಹಲವು ದೈವಗಳ ನೆಲೆಯಾಗಿರುವ ಈ ಸ್ಥಳ ಧರ್ಮದ ನೆಲೆವೀಡು. ದೈವಸ್ಥಾನಗಳ ಜೀರ್ಣೋದ್ಧಾರದಿಂದ ಊರಿನಲ್ಲಿ ಸುಭೀಕ್ಷೆ ನೆಲೆಯಾಗುತ್ತದೆ. ಪುರಾತನ ಆಚರಣೆಗಳನ್ನು ಪುನರುಜ್ಜೀವನ ಗೊಳಿಸು ವುದು ಉತ್ತಮ ಕಾರ್ಯ ಎಂದರು.

ಅಧ್ಯಕ್ಷತೆಯನ್ನು ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ, ನಳೀಲು ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್‌ ಕುಮಾರ್‌ ರೈ ನಳೀಲು ವಹಿಸಿದ್ದರು. ಧರ್ಮರಸು ಉಳ್ಳಾಕುಲು ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಂಜೀವ ಗೌಡ ಪಾಲ್ತಾಡಿ, ವಿನೋದ್‌ ರೈ ಪಾಲ್ತಾಡಿ ಗುತ್ತಿನಮನೆ, ಉದ್ಯಮಿ ಭಾಸ್ಕರ ರೈ ಮರೀಲು ಗೌರವ, ಉಳ್ಳಾಕುಲು ಫ್ರೆಂಡ್ಸ್‌ ಕ್ಲಬ್‌ನ ಅಧ್ಯಕ್ಷ ಭವಿತ್‌ ರೈ ನಡುಕೂಟೇಲು,ಕಾರ್ಯದರ್ಶಿ ವೆಂಕಟ್ರಮಣ ಗೌಡ ಉಪಸ್ಥಿತರಿದ್ದರು.

ಗೌರವಾರ್ಪಣೆ
ರಾಜನ್‌ ದೈವದ ಜೀರ್ಣೋದ್ಧಾರಕ್ಕೆ ದೇಣಿಗೆ ನೀಡಿದ ಸುಮಾ ಆನಂದ ಗೌಡ, ರಾಜನ್‌ ದೈವದ ಮಾವಿನಕಟ್ಟೆ ಗೋಪುರದ ಸೇವಾಕರ್ತರಾದ ಕೆಳಗಿನಮನೆಯ ಮುಖ್ಯಸ್ಥೆ ಸೇಸಮ್ಮ ಅವರ ಪರವಾಗಿ ಮಕ್ಕಳಾದ ಗಿರಿಜಾ, ಮನೋರಮಾ,ರಾಜಮ್ಮ ಅವರಿಗೆ, ದೈವದ ಮದ್ಯಸ್ಥ ಶಶಾಂಕ ನೆಲ್ಲಿತ್ತಾಯ, ಸಂಘಟಕ ಶೇಖರ ಮಣಿಯಾಣಿ, ಜಿ.ಪಂ. ಸದಸ್ಯೆ ಪ್ರಮೀಳಾ ಜನಾರ್ಧನ್‌, ವಿವಿಧ ಪ್ರಾಯೋಜಕರಾಗಿ ಸಹಕರಿಸಿದ ದಾಮೋದರ ನಾಯ್ಕ ಮತ್ತು ಮಕ್ಕಳು ನೆಲ್ಲಿಗುರಿ, ವಿಶ್ವನಾಥ ರೈ ಮತ್ತು ಮಕ್ಕಳು ನೀರ್ಕಜೆ ಕಡೆಶ್ವಾಲ್ಯ, ಸವಿತಾ ಪದ್ಮನಾಭ ಬರೆಮನೆ ಪಾಲ್ತಾಡಿ ಗೌರವಾರ್ಪಣೆ ಮಾಡಲಾಯಿತು. ದೈವಸ್ಥಾನದ ಜೀರ್ಣೋ ದ್ಧಾರ ಹಾಗೂ ಉಳ್ಳಾಕುಲು ಫ್ರೆಂಡ್ಸ್‌ ಕ್ಲಬ್‌ನ ಬೆಳವಣಿಗೆಯಲ್ಲಿ ಸಹಕರಿಸಿದವರನ್ನು ಶಾಲು ಹಾಕಿ ಅಭಿನಂದಿಸಲಾಯಿತು. ಅನಂತರ ಉಳ್ಳಾಕುಲು ಪ್ರಂಡ್ಸ್‌ ಕ್ಲಬ್‌ ಪ್ರಾಯೋಜಕತ್ವದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಯಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.

ಉಳ್ಳಾಕುಲು ಫ್ರೆಂಡ್ಸ್‌ ಕ್ಲಬ್‌ನ ಪೂರ್ವಾಧ್ಯಕ್ಷ ಪ್ರವೀಣ್‌ ರೈ ನಡುಕೂಟೇಲು ಸ್ವಾಗತಿಸಿ, ವಂದಿಸಿದರು.ಗಣೇಶ್‌ ರೈ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next