Advertisement

ದೇವರಗುಡ್ಡೆ : ಬ್ರಹ್ಮಕಲಶೋತ್ಸವ, ಅತಿರುದ್ರ ಮಹಾಯಾಗ ಸಂಪನ್ನ

11:43 PM Mar 02, 2020 | sudhir |

ಕಾಸರಗೋಡು: ಇತಿಹಾಸ ಪ್ರಸಿದ್ಧವಾದ ಕೂಡ್ಲು ರಾಮದಾಸನಗರ ಗಂಗೆ ದೇವರಗುಡ್ಡೆ ಶ್ರೀ ಶೈಲ ಮಹಾದೇವ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ಬ್ರಹ್ಮಕಲಶಾಭಿಷೇಕ ಮತ್ತು ಅತಿರುದ್ರ ಮಹಾಯಾಗದ ಪೂರ್ಣಾಹುತಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಕ್ತರು ಭಾಗವಹಿಸಿ ಕೃತಾರ್ಥರಾದರು.

Advertisement

ಫೆ. 25ರಿಂದ ಆರಂಭಗೊಂಡ ಬ್ರಹ್ಮಕಲಶೋತ್ಸವ ಹಾಗೂ ಅತಿರುದ್ರ ಮಹಾಯಾಗ ಸಂಪನ್ನಗೊಂಡಿತು. ಸೋಮವಾರ ಬೆಳಗ್ಗೆ ಶ್ರೀ ಶೈಲೇಶ್ವರ ಮಂಟಪದಲ್ಲಿ ಗಣಪತಿ ಹೋಮ, ಅಷ್ಟಬಂಧ ಲೇಪನ, ಬ್ರಹ್ಮಕಲಶಾಭಿಷೇಕ ಮಧ್ಯಾಹ್ನ ಪೂಜೆ ನಡೆಯಿತು. ಶ್ರೀ ಶಿವಶೈಲಂ ಯಾಗ ಶಾಲೆಯಲ್ಲಿ ಬೆಳಗ್ಗೆ ರುದ್ರ ಪಾರಾಯಣ, ಹೋಮ, ವಸೋ ಧಾರ ಪೂರ್ಣಾಹುತಿ, ಅತಿರುದ್ರ ಮಹಾಯಾಗದ ಪೂರ್ಣಾಹುತಿ ನಡೆಯಿತು. ಆ ಬಳಿಕ ಅನ್ನಸಂತರ್ಪಣೆ ಜರಗಿತು. ಕಾಸರಗೋಡು ಜಿಲ್ಲೆಯಲ್ಲೇ ವಿಶೇಷವಾಗಿ ನಡೆದ ಅತಿರುದ್ರ ಮಹಾಯಾಗವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಸಂಜೆ ಸಾಮರಸ್ಯ ಸಂಗಮ ನಡೆಯಿತು. ಕಾರ್ಯಕ್ರಮದಲ್ಲಿ ಹಿಂದೂ ಧರ್ಮದ ವಿವಿಧ ಪಂಗಡಗಳ, ದೇವಸ್ಥಾನಗಳ, ದೈವಸ್ಥಾನಗಳ, ಸ್ಥಾನಗಳು, ತರವಾಡು, ಭೂತ ಸ್ಥಾನಗಳ ಆಚಾರ್ಯವರ್ಯರಿಗೆ ಗೌರವಾರ್ಪಣೆ, ಸಮಾರೋಪ ಸಮಾರಂಭ ನಡೆಯಿತು.

ಮಾ. 1ರಂದು ಬೆಳಗ್ಗೆ ಗಣಪತಿ ಹೋಮ, ಭಜನೆ, ಮಹಾಮೃತ್ಯುಂಜಯ ಹೋಮ, ಅಂಕುರಪೂಜೆ, ಬ್ರಹ್ಮಕಲಶ ಪೂಜೆ, ಮಧ್ಯಾಹ್ನ ಪೂಜೆ, ಅನ್ನಸಂತರ್ಪಣೆ, ಸಂಜೆ ಕಲಶಾಧಿವಾಸ, ಅಧಿವಾಸ ಹೋಮ, ರಾತ್ರಿ ಪೂಜೆ, ಅನ್ನಸಂತರ್ಪಣೆ ಜರಗಿತು. ಶ್ರೀ ಶಿವಶೈಲಂ ಯಾಗ ಶಾಲೆಯಲ್ಲಿ ಬೆಳಗ್ಗೆ ರುದ್ರ ಪಾರಾಯಣ, ಶ್ರೀ ರುದ್ರ ಕಲಶ ಪೂಜೆ, ಶ್ರೀ ರುದ್ರ ಹೋಮ, ಶ್ರೀ ರುದ್ರ ಜಪ, ಮಧ್ಯಾಹ್ನ ಪೂಜೆ, ಸಂಜೆ ರುದ್ರ ಜಪ ಘನ ಪಾರಾಯಣ, ಶ್ರೀ ಮಹಾದೇವ ಮಂಟಪದಲ್ಲಿ ಸಂಜೆ ಯುವ ಸಂಗಮ ಜರಗಿತು.

ಮಾ.3 ರಂದು ಸಂಜೆ 6 ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ 9 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, 9.15 ಕ್ಕೆ ಶ್ರೀ ಶೈಲ ಬಾಲಗೋಕುಲದ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.

ಮಾ.4 ರಂದು ವಾರ್ಷಿಕ ಮಹೋತ್ಸವದ ಅಂಗವಾಗಿ ಪ್ರಾತ:ಕಾಲ ಗಣಪತಿ ಹೋಮ, ನವಕಾಭಿಷೇಕ, 10 ಕ್ಕೆ ಭಜನೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 1 ಗಂಟೆಗೆ ಬಲಿವಾಡು ಕೂಟ, ರಾತ್ರಿ 8 ರಿಂದ ಶ್ರೀ ಭೂತಬಲಿ, ದರ್ಶನ ಬಲಿ, ಬೆಡಿ ಸೇವೆ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next