Advertisement
ಹಳೆ ಪಿಬಿ ರಸ್ತೆಯ ಪಿಸಾಳೆ ಕಾಂಪೌಂಡ್‌ನಲ್ಲಿ ಮಂಗಳವಾರ ಗುಳ್ಳಮ್ಮದೇವಿ, ಬನ್ನಿಮಹಾಂಕಾಳಮ್ಮ, ಬಸವಣ್ಣ, ನಾಗರಕಟ್ಟೆ ದೇವರುಗಳ ಶಿಲಾಮೂರ್ತಿ ಪ್ರಾಣ ಪ್ರತಿಷ್ಟಾಪನಾ, ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಡಾಕ್ಟರ್‌ಗಳೇ ಇಲ್ಲದಂತಹ ಸಂದರ್ಭದಲ್ಲಿ ಕೆಲ ರೋಗಗಳು ಬಂದಾಗ ಗ್ರಾಮೀಣ ಜನರು ಶಕ್ತಿ ದೇವರಲ್ಲಿ ಮೊರೆ ಹೋಗುತ್ತಿದ್ದರು. ಈಗ ಸಾಕಷ್ಟು ಸಂಖ್ಯೆಯಲ್ಲೇ ಡಾಕ್ಟರ್‌ಗಳು ಇದ್ದಾರೆ. ಆದರೂ, ಈಗಲೂ ಜನರು ಕೂಡಾ ದೇವರ ಮೇಲೆ ಇಟ್ಟಿರುವಂತಹ ನಂಬಿಕೆ ಕಡಿಮೆಯಾಗಿಲ್ಲ ಎಂದರು. ಗ್ರಾಮೀಣ ಪ್ರದೇಶದಲ್ಲಿ ಹಿಂದಿನಿಂದಲೂ ಆರೋಗ್ಯ ಒಳಗೊಂಡಂತೆ ಅನೇಕ ಸಮಸ್ಯೆ ಬಂದಾಗ ದೇವರ ಮೊರೆ ಹೋಗುತ್ತಿದ್ದುದ್ದನ್ನ ಕಾಣಬಹುದು. ಈಗ ಸಹ ಅನೇಕರು ಅನೇಕ ಸಮಸ್ಯೆಗಳಿಗೆ ಪರಿಹಾರ ಕೋರಿ ದೇವರು-ದಿಂಡರ ಮೊರೆ ಹೋಗುತ್ತಾರೆ ಎಂದು ತಿಳಿಸಿದರು.
ಕಲ್ಯಾಣ ಮಂದಿರ ನಿರ್ಮಾಣಕ್ಕೆ ಸಹಾಯ ಕೋರುವುದಾಗಿ ತಿಳಿಸಿದರು. ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೇಯರ್ ಅನಿತಾಬಾಯಿ, ಸದಸ್ಯ ಡಿ.ಕೆ. ಕುಮಾರ್, ಶ್ರೀ ಶ್ರೀನಿವಾಸ ಸೇವಾ ಸಂಘದ ಅಧ್ಯಕ್ಷ ಪಿ.ಆರ್.ನಾಗರಾಜ್ ಪಿಸಾಳೆ, ಪಿಸಾಳೆ ಸತ್ಯನಾರಾಯಣರಾವ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತ್ ರಾವ್‌ಜಾಧವ್, ವಸಂತ್‌ರಾವ್ ಸಾಬಾಳೆ, ಮಾಲತೇಶ್‌ರಾವ್ ಜಾಧವ್, ಅಜೆಯ್‌ಕುಮಾರ್, ಅಜ್ಜಪ್ಪ ಪವಾರ್, ಗಿರಿರಾಜ್ ಪವಾರ್, ವಿಜಯ್ ಜಾಧವ್, ಪ್ರವೀಣ್ ಜಾಧವ್, ಪಿಸಾಳೆ ಕೃಷ್ಣ, ಬಾತಿ ಹೋಟೆಲ್ ಪ್ರವೀಣ್ ಇತರರು ಇದ್ದರು.