Advertisement

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

03:01 PM Mar 28, 2024 | Team Udayavani |

“ಗಾಡ್‌ ಪ್ರಾಮಿಸ್‌’ ಎಂಬ ಸಿನಿಮಾವೊಂದು ಚಿತ್ರೀಕರಣಕ್ಕೆ ಅಣಿಯಾಗಿದೆ. ಯುವ ಪ್ರತಿಭೆ ಸೂಚನ್‌ ಶೆಟ್ಟಿ ಹೊಸ ಹೆಜ್ಜೆ ಇಟ್ಟಿದ್ದಾರೆ. ನಟನಾಗಿ ಬಣ್ಣ ಹಚ್ಚುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿ ಕೂಡಾ ಇವರದ್ದೇ. ಇತ್ತೀಚೆಗೆ ಈ ಚಿತ್ರದ ಸ್ಕ್ರಿಪ್ಟ್ ಪೂಜೆ ಧರ್ಮಸ್ಥಳ ಮಂಜುನಾಥ ಸನ್ನಿಧಿಯಲ್ಲಿ ನಡೆಯಿತು.

Advertisement

ಮೇ ಮೊದಲ ವಾರದಿಂದ ಗಾಡ್‌ ಪ್ರಾಮಿಸ್‌ ಶೂಟಿಂಗ್‌ ಆರಂಭವಾಗಲಿದೆ. ಚಿತ್ರೀಕರಣದ ಅಖಾಡಕ್ಕೆ ಇಳಿಯುವುದಕ್ಕೂ ಮೊದಲೇ ಚಿತ್ರತಂಡ, ಆಡಿಷನ್‌ ಕರೆದಿದೆ. ಅದರಂತೆ ಆನ್‌ ಲೈನ್‌ನಲ್ಲಿ ಬರೋಬ್ಬರಿ 3800 ಅರ್ಜಿಗಳು ತಲುಪಿವೆ. ಇದೇ ತಿಂಗಳ 31ರಂದು ಆಡಿಷನ್‌ ನಡೆಯುತ್ತಿದ್ದು, ಎಲ್ಲಾ ವರ್ಗದ ವಯೋಮಾನದವರು ಭಾಗಿಯಾಗಿ ತಮ್ಮ ಪ್ರತಿಭೆ ಪ್ರದರ್ಶಿಸಬಹುದು ಎಂದಿದೆ ತಂಡ.

ಗಾಡ್‌ ಪ್ರಾಮಿಸ್‌ ಸಿನಿಮಾವನ್ನು ಮೈತ್ರಿ ಪ್ರೊಡಕ್ಷನ್‌ನಡಿ ಮೈತ್ರಿ ಮಂಜುನಾಥ್‌ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಕರಾವಳಿಯ ಭೂಗತ ಕಥೆ ಹಫ್ತಾ ಸಿನಿಮಾವನ್ನು ನಿರ್ಮಿಸಿತ್ತು.  ಗಾಡ್‌ ಪ್ರಾಮಿಸ್‌ ನೈಜ ಘಟನೆಯ ಸ್ಫೂರ್ತಿ ಪಡೆದ ಫ್ಯಾಮಿಲಿ ಹಾಗೂ ಕಾಮಿಡಿ ಕಥಾಹಂದರ ಹೊಂದಿದೆ.  ಗುರುಪ್ರಸಾದ್‌ ನರ್ನಾಡ್‌ ಛಾಯಾಗ್ರಹಣ, ಭರತ್‌ ಮಧುಸೂದನನ್‌ ಸಂಗೀತ ನಿರ್ದೇಶನ, ನವೀನ್‌ ಶೆಟ್ಟಿ  ಸಂಕಲನ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next