Advertisement

Kannada Cinema; ‘ಗಾಡ್‌ ಪ್ರಾಮಿಸ್‌’ ಮುಹೂರ್ತ ಮಾಡಿದ್ರು

03:37 PM May 16, 2024 | Team Udayavani |

ಯುವ ಪ್ರತಿಭೆ ಸೂಚನ್‌ ಶೆಟ್ಟಿ ನಟಿಸಿ ನಿರ್ದೇಶನ ಮಾಡುತ್ತಿರುವ ಚೊಚ್ಚಲ ಪ್ರಯತ್ನ “ಗಾಡ್‌ ಪ್ರಾಮಿಸ್‌’ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆದಿದೆ. ನಟ ಪ್ರಮೋದ್‌ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ರವಿ ಬಸ್ರೂರು ಸೂಚನ್‌ ಕನಸಿಗೆ ಸಾಥ್‌ ಕೊಟ್ಟಿದ್ದಾರೆ. ಗಾಡ್‌ ಪ್ರಾಮಿಸ್‌ ಸಿನಿಮಾಗೆ ರವಿ ಬಸ್ರೂರು ಕ್ಲ್ಯಾಪ್‌ ಮಾಡಿದ್ದು, ಪ್ರಮೋದ್‌ ಶೆಟ್ಟಿ ಕ್ಯಾಮೆರಾಗೆ ಚಾಲನೆ ನೀಡಿದರು.

Advertisement

ನಿರ್ದೇಶಕ ಸೂಚನ್‌ ಶೆಟ್ಟಿ ಮಾತನಾಡಿ, ಗಾಡ್‌ ಪ್ರಾಮಿಸ್‌ ಸಿನಿಮಾದ ಮುಹೂರ್ತ ನಡೆದಿದೆ. ಕಳೆದ ಆರೇಳು ತಿಂಗಳಿನಿಂದ ಈ ಚಿತ್ರಕ್ಕೆ ಪ್ರೀ ಪ್ರೊಡಕ್ಷನ್‌ ಕೆಲಸ ಶುರು ಮಾಡಿದ್ದೇವೆ. 2015ರಿಂದ ರವಿ ಬಸ್ರೂರು ಜೊತೆ ಕೆಲಸ ಮಾಡುತ್ತಿದ್ದೇನೆ. ಈಗ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದೇನೆ. ಸಿನಿಮಾ ಕುಂದಾಪುರ ಸುತ್ತಮುತ್ತ ನಡೆಯುತ್ತಿದೆ. ಫ್ಯಾಮಿಲಿ ಡ್ರಾಮಾ ಕಥೆಯನ್ನು ಒಳಗೊಂಡಿದೆ. ಆಡಿಷನ್‌ ನಡೆಸಿದ್ದೇವೆ. ಯಾರು ಆಯ್ಕೆಯಾಗಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ’ ಎಂದರು.

ಸಂಗೀತ ನಿರ್ದೇಶಕ ರವಿ ಬಸ್ರೂರು ಮಾತನಾಡಿ, “ಒಂದು ಸಿನಿಮಾ ಮಾಡುವುದರಿಂದ ಎಷ್ಟೋ ಜನ ಕಲಾವಿದರ ಭವಿಷ್ಯ ನಿರ್ಧಾರವಾಗುತ್ತದೆ. ನಮ್ಮ ಕರಾವಳಿಯವರಿಗೆ ಒಳ್ಳೆಯ ವೇದಿಕೆ ಸಿಗುತ್ತಿಲ್ಲ. ಆ ನಿಟ್ಟಿನಲ್ಲಿ ನಮ್ಮ ಜೊತೆ ಬಂದವರಿಗೆ ಎಲ್ಲಾಕೆಲಸ ಕಲಿಯಿರಿ ಎಂದು ಹೇಳುತ್ತೇನೆ. ಒಂದು ಸಿನಿಮಾದಿಂದ ಎಷ್ಟೋ ಜನರ ಬದುಕು ಹಸನಾಗಲಿ. ಇವರ ರೀತಿ ನಮ್ಮ ಭಾಗದಲ್ಲಿ ನೂರಾರು ಸಿನಿಮಾಗಳು ಆಗಲಿ. ಇಡೀ ತಂಡಕ್ಕೆ ಒಳ್ಳೆದಾಗಲಿ’ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next