Advertisement

Upendra: ‘ಭಗವಂತನೇ ಈ ಸಿನಿಮಾ ಮಾಡ್ಸಿದಾನೆ..’: ‘ಉಪೇಂದ್ರ’ ನೋಡಿ ಉಪೇಂದ್ರ ಭಾವುಕ

12:12 PM Sep 21, 2024 | Team Udayavani |

ರಿಯಲ್‌ ಸ್ಟಾರ್‌ ಉಪೇಂದ್ರ ನಟಿಸಿ, ನಿರ್ದೇಶಿಸಿದ “ಉಪೇಂದ್ರ’ ಚಿತ್ರ ಬಿಡುಗಡೆಯಾಗಿ 25 ವರ್ಷಗಳಾಗಿವೆ. ಉಪೇಂದ್ರ ಅವರ ಸಿನಿಮಾ ಕರಿಯರ್‌ನಲ್ಲಿ ಹಾಗೂ ಕನ್ನಡ ಸಿನಿ ರಂಗದಲ್ಲಿ ಈ ಚಿತ್ರ ಸಾಕಷ್ಟು ಹೆಸರು ಮಾಡಿದೆ. ಚಿತ್ರ ಬಿಡುಗಡೆಯಾಗಿ 25 ವರ್ಷಗಳಾದರೂ ಈ ಸಿನಿಮಾಗೆ ಇರುವ ಕ್ರೇಜ್‌ ಮಾತ್ರ ಕಡಿಮೆಯಾಗಿಲ್ಲ.

Advertisement

ಶುಕ್ರವಾರ ಚಿತ್ರ ಮರು ಬಿಡುಗಡೆಯಾದ ಹಿನ್ನೆಲೆ ನೂರಾರು ಅಭಿಮಾನಿಗಳು ಬೆಳಗಿನ ಪ್ರದರ್ಶನದಲ್ಲೇ ಸಿನಿಮಾ ನೋಡಲು ಕಿಕ್ಕಿರಿದು ಸೇರಿದ್ದರು. ನಟ ಉಪೇಂದ್ರ ಕೂಡ ಅಭಿಮಾನಿಗಳೊಂದಿಗೆ ನರ್ತಕಿ ಚಿತ್ರ ಮಂದಿರದಲ್ಲಿ ಚಿತ್ರ ವೀಕ್ಷಿಸಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

“ಈಗಲೂ ಈ ಸಿನಿಮಾ ನೋಡಿದ್ರೆ 20 ವರ್ಷ ಅಡ್ವಾನ್ಸ್‌ ಇದೆ ಅನ್ಸುತ್ತೆ. ಆ ಸಮಯದಲ್ಲಿ ನನ್ನಲ್ಲಿದ್ದ ಭಾವನೆಗಳು ನನ್ನಿಂದ ಈ ಸಿನಿಮಾ ಮಾಡಿಸಿದೆ. ಆ ಕ್ಷಣ ಹಾಗಿತ್ತು. ಭಗವಂತ ಈ ಪಿಚ್ಚರ್‌ ಮಾಡ್ಸಿದ್ದಾನೆ ಅಷ್ಟೇ. ನನ್ನ ಪ್ರಕಾರ ಮುಂದಿನ ಜನರೇಶನ್‌ ಕೂಡ ಇದೇ ರೀತಿ ಈ ಸಿನಿಮಾವನ್ನ ಎಂಜಾಯ್‌ ಮಾಡ್ತಾರೆ’ ಎನ್ನುತ್ತಲೇ ತುಸು ಭಾವುಕರಾಗಿದ್ದರು ಉಪೇಂದ್ರ.

ಸದ್ಯ ಉಪೇಂದ್ರ ಅವರು ನಿರ್ದೇಶಿಸಿ, ನಟಿಸಿದ ಹೊಸ ಚಿತ್ರ “ಯು-ಐ’ ಅಕ್ಟೋಬರ್‌ನಲ್ಲಿ ತೆರೆಗೆ ಬರಲು ಸಿದ್ಧವಾಗಿದ್ದು, ಬಿಡುಗಡೆಯ ದಿನಾಂಕ ಅಂತಿಮವಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next