Advertisement

ದೇವರು ದೊಡ್ಡವನು…ಸಾಕಾರಗೊಂಡ ಎಮ್ಮೆಕರೆ ಅಂತಾರಾಷ್ಟ್ರೀಯ ಈಜುಕೊಳ

11:05 AM Mar 09, 2023 | Team Udayavani |

ಮಂಗಳೂರು: ಎಮ್ಮೆಕರೆಯಲ್ಲಿ ಅಂತಾರಾಷ್ಟ್ರೀಯ ಈಜುಕೊಳ ನಿರ್ಮಾಣ ಸಂಬಂಧ 2014 ಮತ್ತು ಅದಕ್ಕೂ ಪೂರ್ವ ದಲ್ಲಿ ಚಟುವಟಿಕೆ ಆರಂಭವಾಗಿತ್ತು. ಕೊನೆಗೂ ಅಂತಿಮ ಹಂತಕ್ಕೆ ಬಂದಿದ್ದು, ಶೀಘ್ರ ಉದ್ಘಾಟನೆಯಾಗುವ ಸಂಭವವಿದೆ.

Advertisement

ಇದುವರೆಗೆ ಈಜು ಸ್ಪರ್ಧೆಗೆ ತರಬೇತು ಪಡೆಯುವ ಕ್ರೀಡಾಪಟುಗಳು ಮಹಾನಗರ ಪಾಲಿಕೆಯ ಲೇಡಿಹಿಲ್‌ ಬಳಿಯ ಈಜುಕೊಳವನ್ನೇ ಆಶ್ರಯಿಸಬೇಕಿತ್ತು. ಈ ಕೊಳದಲ್ಲಿ ತರಬೇತಿ ಪಡೆಯುವುದು ಕಷ್ಟ ಎನ್ನುವುದನ್ನು ಅರಿತು, ಆಗ ಕ್ರೀಡಾ ಸಚಿವರಾಗಿದ್ದ ಅಭಯಚಂದ್ರ ಅವರು ಎಮ್ಮೆಕೆರೆಯಲ್ಲಿ ಈಜು ಕೊಳ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದರು. ಆದರೆ ಅಲ್ಲಿ ಆಟದ ಮೈದಾನವೂ ಇರುವುದರಿಂದ ಆರಂಭದಲ್ಲಿ ಸ್ಥಳೀಯರಿಂದ ವಿರೋಧವೂ ವ್ಯಕ್ತವಾಗಿತ್ತು.

ಅದೂ ಇದೂ ಎನ್ನುತ್ತಾ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿತ್ತು. ಈಗ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕಾಮಗಾರಿಯನ್ನು ಕೈಗೆತ್ತಿಕೊಂಡು, 24.94 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಈಜುಕೊಳ ನಿರ್ಮಿಸಲಾಗಿದೆ. ಮಾರ್ಚ್‌ ಅಂತ್ಯದೊಳಗೆ ಕಾಮಗಾರಿ ಮುಗಿಸುವ ಉದ್ದೇಶ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನ‌ದ್ದು. ಅದು ಸಾಧ್ಯವಾದರೆ ಹಳೆಯ ಯೋಜನೆ ಯೊಂದು ಸಾರ್ವಜನಿಕರ ಬಳಕೆಗೆ ಲಭಿಸಿದಂತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next