Advertisement

ದೇವರ ಪೂಜೆಯಿಂದ ಗೆಲ್ಲಕ್ಕಾಗಲ್ಲ:ಸಿದ್ದರಾಮಯ್ಯ

07:40 AM Apr 29, 2018 | Team Udayavani |

ಬೆಳಗಾವಿ: “ದೇವರ ಪೂಜೆ ಮಾಡಿದರೆ ಜಯ ಸಾಧಿಸಲು ಆಗುವುದಿಲ್ಲ. ಜನರ ಆಶೀರ್ವಾದ ಇದ್ದರೆ ಮಾತ್ರ ಗೆಲುವು ಸಾಧ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

Advertisement

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಂತ್ರ ಹೇಳಿದರೆ ಗಿಡದಿಂದ ಕಾಯಿ ಬೀಳಲು ಸಾಧ್ಯವೇ. ಮೊದಲು ಪ್ರಯತ್ನ ಮಾಡಬೇಕು, ನಂತರವಷ್ಟೇ ಪೂಜೆ. ಬಾದಾಮಿ ಹಾಗೂ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಇದ್ದೇ ಇದೆ. ಜನರ ಆಶೀರ್ವಾದ ಇದ್ದರೆ ಮಾತ್ರ ಗೆಲುವು ಸಾಧ್ಯ’ ಎಂದರು.

ಚಾಮುಂಡಿಯಲ್ಲಿ ಸೋಲುತ್ತೇನೆ ಎಂಬ ಭಯದಿಂದ ಬಾದಾಮಿಗೆ ಬಂದಿಲ್ಲ. ಮೋದಿ ಎರಡು ಕ್ಷೇತ್ರಗಳಲ್ಲಿ ನಿಂತಿರಲಿಲ್ಲವೇ ಎಂದು
ಪ್ರಶ್ನಿಸಿದ ಅವರು, ಹೈಕಮಾಂಡ್‌ ಆದೇಶ ಹಾಗೂ ಈ ಭಾಗದ ಜನ ಒತ್ತಾಯಕ್ಕೆ ಮಣಿದು ಬಂದಿದ್ದೇನೆ.

ಎರಡೂ ಕ್ಷೇತ್ರಗಳಲ್ಲಿ ಹೆಚ್ಚಿನ ಅಂತರದಿಂದ ಗೆಲ್ಲುತ್ತೇನೆ. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ನಡುವಿನ ತಾರತಮ್ಯ ನಿವಾರಿಸಲು ಸ್ಪರ್ಧಿಸಿದ್ದೇನೆಂದು ಹೇಳಿದರು.

ಸತೀಶ ಜಾರಕಿಹೊಳಿಯವರು ಬಾದಾಮಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಮೋದಿ ಬಂದ ಮೇಲೆ ಒಂದು ವಾರದಲ್ಲಿ ಅಲೆ ಸೃಷ್ಟಿ ಆಗುವುದಿಲ್ಲ ಎಂದರು.

Advertisement

ಬಿಜೆಪಿಯವರ ಮೇಲೆ ಐಟಿ ದಾಳಿ ಏಕಿಲ್ಲ: ಕೇಂದ್ರ ಸರಕಾರ ದುರುದ್ದೇಶಪೂರ್ವಕವಾಗಿ ಕಾಂಗ್ರೆಸ್‌ ನಾಯಕರ ಮೇಲೆ ಐಟಿ ದಾಳಿ ನಡೆಸಿ ಸೇಡಿನ ರಾಜಕಾರಣ ಮಾಡುತ್ತಿದೆ. ಬಿಜೆಪಿಯವರು ಹಣ ಲೂಟಿ ಮಾಡಿಲ್ಲವೇ. ಅವರ ಮನೆಯಲ್ಲಿ ಹಣ ಇಲ್ಲವೇ?, ಅಲ್ಲಿ ಏಕೆ ದಾಳಿ ಮಾಡುತ್ತಿಲ್ಲ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಪಕ್ಷದಲ್ಲಿ ಯಾವುದೇ ಬಿರುಕಿಲ್ಲ. ಸೀಟು ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ನಲ್ಲಿ ಆದ ಭಿನ್ನಮತ ನಮ್ಮಲ್ಲಿ ಆಗಿಲ್ಲ. ಸ್ವತಃ ಯಡಿಯೂರಪ್ಪನವರಿಗೆ ತಮ್ಮ ಮಗನಿಗೆ ಟಿಕೆಟ್‌ ಕೊಡಿಸಲು ಆಗಲಿಲ್ಲ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next