Advertisement

“80 ಶೇ. ಸಹಾಯಧನದಲ್ಲಿ ಗೋಬರ್‌ ಗ್ಯಾಸ್‌ ಘಟಕ’

06:50 AM Sep 06, 2018 | |

ಕಾರ್ಕಳ: ಸಾವಯವ ಪರಿವಾರ ಒಕ್ಕೂಟ, ರಾಜ್ಯದ ಪ್ರತಿಷ್ಠಿತ ಸಾಫ್ಟ್ವೇರ್‌ ಕಂಪೆನಿಯೊಂದರ ಸಹಯೋಗದಲ್ಲಿ ಜಿಲ್ಲೆಯ ಸಾವಯವ ಪರಿವಾರ ಟ್ರಸ್ಟ್‌ಗಳ ಮೂಲಕ ಸಾವಯವ ಕೃಷಿಕರಿಗೆ 80 ಶೇ. ಸಹಾಯಧನದಲ್ಲಿ ಗೋಬರ್‌ ಗ್ಯಾಸ್‌ ಘಟಕ ನೀಡಲಾಗುವುದು. 

Advertisement

ಭಾ.ಕಿ.ಸಂ. ಕಾರ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ  ಸಂಜೀವಿನಿ  ಸಾವಯವ ಕೃಷಿ ಪರಿವಾರ ಮುಖಾಂತರ ನೀಡಲಾಗು ತ್ತದೆ. ಆಸಕ್ತ ಸಾವಯವ ರೈತರು ಇದರ ಸದಸ್ಯರಾಗುವ ಮೂಲಕ ಗೋಬರ್‌ ಗ್ಯಾಸ್‌ ಘಟಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಬಾಕಿಸಂ ಜಿಲ್ಲಾ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ನಿಟ್ಟೆ ಹೇಳಿದರು.

ಭಾರತೀಯ ಕಿಸಾನ್‌ ಸಂಘ ಕಾರ್ಕಳ ತಾ|   ಸಮಿತಿಯ ಮಾಸಿಕ ಸಭೆಯಲ್ಲಿ ಅವರು ರೈತರಿಗೆ ಮಾಹಿತಿ ನೀಡಿದರು.  
ಯೋಜನೆಯ ಲಾಭ ಪಡೆಯಲು ರೈತರ ಮನೆಯಲ್ಲಿ ಕನಿಷ್ಠ ಅರ್ಧ ಎಕ್ರೆ ಕೃಷಿಭೂಮಿ, ಕನಿಷ್ಠ 2 ದನ, ಸಾವಯವ ಕೃಷಿಯನ್ನು ಸಂಪೂರ್ಣವಾಗಿ ಅಥವಾ ಸ್ವಲ್ಪ ಭಾಗದಲ್ಲಾದರೂ ಅಳವಡಿಸಿಕೊಂಡಿರಬೇಕು. ಹೊಸದಾಗಿ ಮುಂದೆ ರಚಿಸುವ ಘಟಕಗಳಿಗೆ ಮಾತ್ರ ಈ ಸಹಾಯಧನ ಸಿಗಲಿದೆ. ಹೆಸರನ್ನು ನೋಂದಾಯಿಸಿದ ಅನಂತರ ರೈತರ ಕೃಷಿ ಕ್ಷೇತ್ರ ತಪಾಸಣೆ ನಡೆಸಿ ಅನುಮೋದನೆ ಸಿಕ್ಕಿದ ಬಳಿಕವಷ್ಟೇ ಘಟಕ ರಚನೆಗೆ ಅವಕಾಶವಿದೆ ಎಂದರು.

ಭಾ.ಕಿ.ಸಂ. ಜಿಲ್ಲಾಧ್ಯಕ್ಷ ಬಿ. ವಿ.ಪೂಜಾರಿ ಪೆರ್ಡೂರು ಮಾತನಾಡಿ, ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಎಲ್ಲ   ತರದ ಕೃಷಿ ಭತ್ತ, ತೆಂಗು, ಅಡಿಕೆ, ಕಾಳುಮೆಣಸು ಇತ್ಯಾದಿಗಳಿಗೆ ಅಧಿಕ ರೋಗಭಾದೆಯಿದ್ದು, ರೈತರು ಬೆಳೆ ನಾಶದಿಂದ ತುಂಬಾ ಕಂಗಾಲಾಗಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ,  ರಾಜ್ಯ ಸರಕಾರಗಳು ಸರಿಯಾಗಿ ಸಮೀಕ್ಷೆ ನಡೆಸಿ, ರೈತರ ಬೆಳೆನಷ್ಟಕ್ಕೆ ಸೂಕ್ತ ಮಾರುಕಟ್ಟೆ ಬೆಲೆ  ನೀಡಿದಲ್ಲಿ ಮುಂದಿನ ದಿನಗಳಲ್ಲಿ ರೈತ ಕೃಷಿ ಕ್ಷೇತ್ರವನ್ನು ಉಳಿಸಿಕೊಳ್ಳಬಹುದು ಎಂದರು. ಸಭೆಯಲ್ಲಿ ಕಾರ್ಯದರ್ಶಿ ಅನಂತ ಭಟ್‌ ಇರ್ವತ್ತೂರು, ಪದ್ಮನಾಭ ಶೆಟ್ಟಿ ನಿಂಜೂರು, ಕೆ.ಪಿ. ಭಂಡಾರಿ ಕೆದಿಂಜೆ, ಚಂದ್ರಹಾಸ ಶೆಟ್ಟಿ ಇನ್ನಾ, ಕೆ. ಭೋಜ ಶೆಟ್ಟಿ ಕುಚ್ಚಾರು ಹಾಗೂ ಗ್ರಾಮ ಸಮಿತಿ ಪ್ರಮುಖರು  ಉಪಸ್ಥಿತರಿದ್ದರು. ಸುಂದರ ಶೆಟ್ಟಿ ಮುನಿಯಾಲು ಅಧ್ಯಕ್ಷತೆ ವಹಿಸಿದ್ದರು. ಗೋವಿಂದರಾಜ ಭಟ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next