Advertisement
ಆನೇಕಲ್ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಆರ್. ಗೋಕುಲ್ ನೇತೃತ್ವದ ತಂಡ ಈ ಒಂದು ವಿಶೇಷ ಅಪರೂಪದ ಪ್ರಯತ್ನಕ್ಕೆ ಸಾಕ್ಷಿಯಾಗಿದೆ. ಕಳೆದ ಏ.25 ರಂದು 8 ವರ್ಷದ ಸಿಂಹಣಿ ಸಾನಾ, 6 ವರ್ಷದ ಸಿಂಹ ಶಂಕರ್ ಜೋಡಿಗೆ 4 ಮರಿಗಳು ಜನಿಸಿದ್ದವು.
Related Articles
Advertisement
ಸಾನಾ ಸಿಂಣಿಗೆ ಇದು 3ನೇ ಹೆರಿಗೆ. ಈ ಹಿಂದೆ 2 ಬಾರಿ ಮರಿಗಳನ್ನು ಹಾಕಿ ಒಂದೇ ದಿನದಲ್ಲಿ ತಿಂದು ಬಿಡುತ್ತಿತ್ತು. ಹೀಗಾಗಿ ನಾವು ಈ ಬಾರಿ ಮರಿಗಳನ್ನು ಹೇಗಾದರೂ ರಕ್ಷಿಸಲೇಬೇಕೆಂದು ನಿರ್ಧರಿಸಿ ಮರಿಗಳಿಗೆ ಆಸ್ಪತ್ರೆಯಲ್ಲಿ ಆಶ್ರಯ ನೀಡಬೇಕಾಯಿತು ಎಂದು ಉದ್ಯಾನವನದ ಕಾರ್ಯನಿರ್ವಹಕ ನಿರ್ದೇಶಕ ಆರ್.ಗೋಕುಲ್ “ಉದಯವಾಣಿ’ಗೆ ತಿಳಿಸಿದರು.
ನನ್ನ ಅನುಭವದಲ್ಲಿ ಸಿಂಹದ ಮರಿಗಳಿಗೆ ಮೇಕೆ ಹಾಲು ಕೊಟ್ಟು ಬೆಳೆಸಿದ್ದು ಎಲ್ಲೂ ಕೇಳಿರಲಿಲ್ಲ, ಅದರಲ್ಲೂ ಮರಿಗಳು ಕಣ್ಣು ಬಿಡುವ ಮೊದಲೇ ತಾಯಿಂದ ದೂರವಾದ ಬಳಿಕವೂ ಅವುಗಳನ್ನು ಬದುಕಿಸಿ ಬೆಳೆಸುವುದು ದೊಡ್ಡ ಸಾಹಸದ ಕೆಲಸ.
ಉದ್ಯಾನವನದ ವೈದ್ಯಾಟಊಕಾರಿ ಉಮಾಶಂಕರ್ ನೇತೃತ್ವದ ವೈದ್ಯರ ತಂಡ ಇಂತಹ ಅಪರೂಪದ ಸಾಹಸದ ಪ್ರಯತ್ನ ಮಾಡಿ ಮರಿಗಳನ್ನು ಬೆಳೆಸಿ ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ. ಈ ಪ್ರಯತ್ನ ಇತರರಿಗೆ ಮಾದರಿ ಎಂದು ಹೇಳಿದರು.
ಮರಿಗಳಿಗೆ ಎರಡೂವರೆ ತಿಂಗಳವರೆಗೂ ಮೇಕೆ ಹಾಲು ನೀಡುತ್ತ ಬಂದು ನಂತರ ಕೋಳಿ ಮಾಂಸವನ್ನು ಸಣ್ಣ ಸಣ್ಣ ತುಂಡುಗಳಾಗಿ ಮಾಡಿ ತಿನ್ನಿಸುತ್ತ ಬರಲಾಗಿತ್ತು. ಸದ್ಯ 2 ಮರಿಗಳಿಗೆ ಮೂರು ತಿಂಗಳಾಗಿದೆ.
ಆಸ್ಪತ್ರೆ ಆವರಣದಲ್ಲಿ ಸ್ವತ್ಛಂದವಾಗಿ ಮರಿಗಳು ನಡೆದಾಡಿಕೊಂಡು ಸಂತಸದಿಂದಿವೆ ಎಂದು ಅವರು ಹೇಳಿದರು. ಉದ್ಯಾನವನದಲ್ಲಿ 10 ಗಂಡು, 10 ಹೆಣ್ಣು ಸಿಂಹಗಳು ಸೇರಿ 20 ಸಿಂಹಗಳು ಇದ್ದವು. ಮೂರು ತಿಂಗಳ ಈ ಮರಿಗಳು 2 ಹೆಣ್ಣಾಗಿವೆ. ಇವು ಸೇರಿದರೆ ಸಿಂಹಗಳ ಸಂಖ್ಯೆ 22ಕ್ಕೆ ಏರಿದೆ.
ಇನ್ನೂ ಆರು ತಿಂಗಳು ಮೃಗಾಲಯದ ಆಸ್ಪತ್ರೆಯಲ್ಲಿ ಆಶ್ರಯ ನೀಡಿ ನಂತರ ಸಫಾರಿಯಲ್ಲಿ ಪ್ರವಾಸಿಗರ ವೀಕ್ಷಣೆಗೆ ಅನುವು ಮಾಡಿಕೊಡಲಾಗುವುದು ಎಂದು ಆರ್.ಗೋಕುಲ್ ತಿಳಿಸಿದರು. ಚಿತ್ರ ಇದೆ 28 ಆನೇಕಲ್ ಪಿ ಎಚ್ 2 ಆನೇಕಲ್ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಪರೂಪದ ಸಿಂಹದ ಮರಿಗಳು.